Connect with us

    ದ.ಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸುನಾಮಿ : ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಜಿಲ್ಲಾಡಳಿತದಿಂದ ತುರ್ತು ಸಭೆ..!

    Published

    on


    ದ.ಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸುನಾಮಿ : ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಜಿಲ್ಲಾಡಳಿತದಿಂದ ತುರ್ತು ಸಭೆ..!

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾದಿಂದ ಸಾವಿನ ಸುನಾಮಿ ಸೃಷ್ಟಿಯಾಗಿದೆ. ಕೊರೊನಾ ಸೊಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಸಮುದಾಯದಲ್ಲಿ ಹರಡುತ್ತಿದೆ.

    ಈಗಾಗಲೇ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಜನ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.

    ಕೊನೆಗೂ ಕಳೆದ ಕೆಲ ದಿನಗಳಿಂದ ಗಾಢ ನಿದ್ರೆಯಲ್ಲಿದ್ದ ಜಿಲ್ಲಾಡಳಿತ ಢಿಡೀರನೇ ಎಚ್ಚೆತ್ತುಕೊಂಡಿದೆ.ಇಂದು ವೈದ್ಯಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವರು ತುರ್ತು ಸಭೆ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಅಧಿಕೃತವಾಗಿ 36 ಮಂದಿ ಕೊರೊನಾ ದಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂರು ಮಂದಿ ಭಟ್ಕಳ ಮೂಲದವರು ಮೃತರಾಗಿದ್ದಾರೆ.

    ಮತ್ತಿಬ್ಬರಲ್ಲಿ ಒಬ್ಬರು ಚಿತ್ರದುರ್ಗ ಮತ್ತೊಂದು ಮಡಿಕೇರಿ ಮೂಲದವರಾಗಿದ್ದು, ಇದರಲ್ಲಿ 50ರ್ಷಕ್ಕಿಂತ ಕಡಿಮೆ ವಯಸ್ಸಿನ 9 ಮಂದಿ ಸಾವನ್ನಪ್ಪಿದ್ದಾರೆ.

    50 ಕ್ಕಿಂತ 60 ವರ್ಷದೊಳಗೆ 10 ಮಂದಿ ಸಾವನ್ನಪ್ಪಿದ್ದಾರೆ. 60 ಕ್ಕಿಂತ 70 ವರ್ಷದೊಳಗೆ 11 ಮಂದಿ ಸಾವನ್ನಪ್ಪಿದ್ದಾರೆ. ಮತ್ತು 70 ಕ್ಕಿಂತ ಮೇಲಿನವರು ಒಬ್ಬರು ಸಾವನ್ನಪ್ಪಿದ್ದಾರೆ.

    ಸಾವಿಗೀಡಾದವರ ಪೈಕಿ 26 ಜನರು ಇತರ ಖಾಯಿಲೆಗಳಿಂದ ಬಳಲಿ ಸಾವನ್ನಪ್ಪಿದ್ದಾರೆ. ನಾಲ್ವರು ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ.4 ಜನರು ಮಾತ್ರ ಕೋವಿಡ್ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ.

    ಮತ್ತು ಒಬ್ಬರು ಕೋವಿಡ್ ಅಲ್ಲದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ತುರ್ತು ಸಭೆಯಲ್ಲಿ ಮಾಹಿತಿ ನೀಡಿದರು.

    ಕೊರೊನಾ ಹಬ್ಬುವಿಕೆ ತಡೆಯಲು ಮತ್ತು ಸಾವಿನ ಬಗ್ಗೆ ತನಿಖೆ ನಡೆಸಲು 13 ಮಂದಿ ವೈದ್ಯಾಧಿಕಾರಿಗಳ ತಂಡಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ತಂಡ ಜಿಲ್ಲೆಯಲ್ಲಿ ನಡೆದ ಕೊರೊನಾ ಸಂಬಂಧಿತ ಸಾವುಗಳ ಬಗ್ಗೆ ತನಿಖೆ ನಡೆಸಲಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ನಿಫಾ ಆತಂಕ; 41 ಜನರಿಗೆ ಹೋಂ ಐಸೊಲೇಷನ್

    Published

    on

    ಬೆಂಗಳೂರು: ರಾಜ್ಯದಲ್ಲಿ ನಿಫಾ ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು, ಮತ್ತೆ ಹೋಮ್ ಕ್ಯಾರಂಟೈನ್ ಶುರುವಾಗಲಿದೆ.

    ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.

    ಇನ್ನು 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು, ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.

    Continue Reading

    LATEST NEWS

    ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

    Published

    on

    ಬೆಂಗಳೂರು: ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ಪ್ರಸಾದ ತಯಾರಿಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಶುಕ್ರವಶರ ಸುತ್ತೋಲೆ ಹೊರಡಿಸಿತ್ತು. ಇದೀಗ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

    ಮುಜರಾಯಿ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ, 205 ದೇಗುಲಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿವೆ. 193 ದೇಗುಲಗಳನ್ನು 5 ಲಕ್ಷದಿಂದ ರೂ. 25 ಆದಾಯದೊಂದಿಗೆ ವರ್ಗ-ಬಿ ಎಂದು ಗುರುತಿಸಲಾಗಿದೆ. ಉಳಿದವುಗಳನ್ನು 5 ಲಕ್ಷ ರೂ. ಆದಾಯದೊಂದಿಗೆ ವರ್ಗ-ಸಿ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ಭಕ್ತರಿಗೆ ಪ್ರಸಾದವನ್ನು ನೀಡುತ್ತವೆ.

    Continue Reading

    bengaluru

    ಜೈಲಿನಲ್ಲೇ ಮೊಬೈಲ್‌ ಬಳಕೆ !

    Published

    on

    ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


    ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
    ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
    ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
    ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ

    Continue Reading

    LATEST NEWS

    Trending