ಮಂಗಳೂರು/ಮಲೇಷಿಯಾ: ನಗರದ ಖ್ಯಾತ ಉದ್ಯಮಿ ಆನಂದ ಕೃಷ್ಣನ್ ಅವರ ಏಕೈಕ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ತನ್ನ ತಂದೆಯ ಆಡಂಬರದ ಜೀವನವನ್ನು ಬಿಟ್ಟು ವಿಭಿನ್ನವಾದ ಜೀವನವನ್ನು ಆರಿಸಿಕೊಂಡಿದ್ದಾರೆ. ಆನಂದ ಕೃಷ್ಣನ್, ಸರಿಸುಮಾರು 45,339 ಕೋಟಿಯ ಒಡೆಯ. ಟೆಲಿಕಾಂ, ಮಾಧ್ಯಮ, ತೈಲ, ಅನಿಲ, ರಿಯಲ್ ಎಸ್ಟೇಟ್ ವ್ಯಾಪಾರ ಸಾಮ್ರಾಜ್ಯವನ್ನು ಹೊಂದಿರುವ ಉದ್ಯಮಿ ಮಲೇಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಜಗತ್ತಿನ ಕೆಲವೇ ಕೆಲವು ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ ಆನಂದ ಕೃಷ್ಣನ್. ಮಲೇಷಿಯಾದ ಮೂರನೇ ಶ್ರೀಮಂತ ಆನಂದ್ ಕೃಷ್ಣನ್ ಅವರ ಮಗ ವೆನ್ ಅಜಾನ್ ಸಿರಿಮಾನ್ಯೊ ತಮ್ಮ 18 ನೇ ವಯಸ್ಸಿನಲ್ಲಿಯೇ ಬೌದ್ದ ಸನ್ಯಾಸತ್ವವನ್ನು ಸ್ವೀಕಾರ ಮಾಡಿ, ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಶ್ರೀಮಂತ ಮನೆತನದಲ್ಲಿ ಜನಿಸಿದ ಸಿರಿಪಾನ್ಯೊ ತನ್ನ ತಂದೆಯ ಬಹು-ಶತಕೋಟಿ ಡಾಲರ್ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಿದ್ದರೂ, 18 ನೇ ವಯಸ್ಸಿನಲ್ಲಿ, ತಮ್ಮ ಜೀವನವನ್ನು ಬದಲಾಯಿಸುವ ಅನಿರೀಕ್ಷಿತ ನಿರ್ಧಾರವನ್ನು ಮಾಡಿದ್ದಾರೆ.
ಸಿರಿಪಾನ್ಯೊ ಪ್ರಯಾಣವು ಶ್ರೀಮಂತ ಹಿನ್ನೆಲೆಯಿಂದಾಗಿ ಮಾತ್ರವಲ್ಲದೆ ಅವರು ಬದುಕಲು ಆಯ್ಕೆ ಮಾಡಿಕೊಂಡಿರುವ ಸರಳತೆ ಮತ್ತು ಸಮರ್ಪಣಾ ಮನೋಭಾವದಿಂದಲೂ ಅನೇಕರನ್ನು ಕುತೂಹಲಗೊಂಡಿದೆ. ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಿರಪಾನ್ಯೊ, ಅವರ ನಮ್ರತೆ ಮತ್ತು ಆಳವಾದ ಆಧ್ಯಾತ್ಮಿಕ ಬೋಧನೆಗಳಿಗಾಗಿ ಜನರಿಂದ ಭಾರೀ ಮೆಚ್ಚುಗೆ ಪಡೆದಿದ್ದಾರೆ.ಸಿರಿಪಾನ್ಯೋ ಥೈಲ್ಯಾಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೌದ್ಧ ಸನ್ಯಾಸತ್ವದೆಡೆಗೆ ಆರ್ಕಷಣೆಗೊಂಡಿದ್ದು, ಅಲ್ಲಿಂದ ತಾತ್ಕಾಲಿಕ ದೀಕ್ಷೆ ಪಡೆದಿದ್ದರು. ಈಗ, 20 ವರ್ಷಗಳ ನಂತರ, ಸಿರಿಪಾನ್ಯೊ ಸನ್ಯಾಸಿಗಳ ಮಾರ್ಗವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ ಮತ್ತು ಥೈಲ್ಯಾಂಡ್‌ನ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ.
ಥೇರವಾಡ ಬೌದ್ಧ ಸಂಪ್ರದಾಯವನ್ನು ಅನುಸರಿಸಿ, ತನ್ನ ಬೋಧನೆಗಳಲ್ಲಿ ಸಾವಧಾನತೆ, ಆಂತರಿಕ ಶಾಂತಿ ಮತ್ತು ಸರಳತೆಯನ್ನು ಬೋಧನೆ ಮಾಡುತ್ತಾರೆ. ಸಿರಿಪಾನ್ಯೊ ಶಾಂತ, ತಪಸ್ವಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿಯೇ, ಅವರ ಜೀವನದ ಹಿನ್ನೆಲೆಯು ಪ್ರಪಂಚದಾದ್ಯಂತ ಜನರನ್ನು ಪ್ರೇರೇಪಿಸುತ್ತದೆ. ಭೌತಿಕ ಸಂಪತ್ತನ್ನು ತಿರಸ್ಕರಿಸುವುದು ಮಾತ್ರವಲ್ಲ, ಆಧ್ಯಾತ್ಮಿಕ ನೆರವೇರಿಕೆಗೆ ಅವರ ದೃಢವಾದ ಬದ್ಧತೆ ಎದ್ದು ಕಾಣುತ್ತದೆ. ಬಾಹ್ಯ ಸಂಪತ್ತಿಗಿಂತ ಆಂತರಿಕ ಶಾಂತಿಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೂ ನೆನಪಿಸುತ್ತಾ, ತಂದೆಯೂ ಗೌರವಿಸುವ ಬೌದ್ಧಧರ್ಮ ತತ್ವಗಳ ಜೀವಂತ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಜೀವನವು ವೈಯಕ್ತಿಕ ಆಯ್ಕೆಯ ಶಕ್ತಿ ಮತ್ತು ಉನ್ನತ ಉದ್ದೇಶದ ಅನ್ವೇಷಣೆಗೆ ಸಾಕ್ಷಿಯಾಗಿದೆ.