BELTHANGADY
ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯ ಸ್ಕೂಟರ್ ಕಳವು..! ಹೊಂಚು ಹಾಕಿ ಸ್ಕೂಟರ್ ಎಗರಿಸಿದ ಚಾಲಾಕಿ ಕಳ್ಳ
ಬೆಳ್ತಂಗಡಿ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕುಲಾಲ ಸಮೂದಾಯ ಭವನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಕಳ್ಳತನವಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕಾರ್ಯಕ್ರಮ ಮುಗಿಸಿ ಹೊರ ಬಂದು ನೋಡಿದ ಬಳಿಕವಷ್ಟೇ ಸ್ಕೂಟರ್ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಮೂಡುಬಿದಿರೆ : ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿ ಹ*ಲ್ಲೆಗೈದ ಯುವಕ
ಚಿನ್ನಯ್ಯ ಮೂಲ್ಯ ಎಂಬವರಿಗೆ ಸೇರಿದ ಸ್ಕೂಟರ್ನ್ನು ಚಾಲಾಕಿ ಕಳ್ಳ ಕದ್ದೊಯ್ದಿದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಭಾಂಗಣದ ಆವರಣದಲ್ಲಿ ಅಡ್ಡಾಡಿದ ಕಳ್ಳ ಕೆಲವೇ ನಿಮಿಷದಲ್ಲಿ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಸಭಾಭವನದ ಸಿಸಿ ಟಿವಿಯಲ್ಲಿ ಕಳ್ಳನ ಚಲನವಲನ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸ್ಕೂಟರ್ ಮಾಲೀಕರು ಕಾರ್ಯಕ್ರಮದ ಗಡಿಬಿಡಿಯಲ್ಲಿ ಸ್ಕೂಟರ್ ಕೀ ಸ್ಕೂಟರ್ನಲ್ಲೇ ಬಿಟ್ಟಿದ್ದರು ಎನ್ನಲಾಗಿದೆ. ಇದನ್ನ ಗಮನಿಸಿದ ಕಳ್ಳ ಕ್ಷಣ ಮಾತ್ರದಲ್ಲೇ ಸ್ಕೂಟರ್ ಸ್ಟಾರ್ಟ್ ಮಾಡಿ ಎಸ್ಕೇಪ್ ಆಗಿದ್ದಾನೆ.
BELTHANGADY
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ
ಬೆಳ್ತಂಗಡಿ: ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ವತಿಯಿಂದ ಹಮ್ಮಿಕೊಳ್ಳಲಾದ ಹೈಸ್ಕೂಲ್ ವಿಭಾಗದ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಗಾಯನ ಸ್ಪರ್ಧೆಯ ಇಬ್ಬರು ತೀರ್ಪುಗಾರರಲ್ಲಿ ಸುರೇಶ್ ಎ.ಡಿ ಎಂಬುವರ ಒಬ್ಬರಾಗಿದ್ದರು. ಇವರು ಸುಗಮ ಸಂಗೀತ ತರಗತಿಯನ್ನು ಕೂಡಾ ನಡೆಸುತ್ತಿದ್ದು, ಮೊನ್ನೆ ನಡೆದ ಗಾಯನ ಸ್ಪರ್ಧೆಯಲ್ಲಿ ಪಕ್ಷಪಾತೀಯ ಧೋರಣೆಯನ್ನು ಅನುಸರಿಸುವ ಮೂಲಕ ಸ್ಪರ್ಧೆಗೆ ಕಳಂಕವನ್ನು ತಂದಿದ್ದಾರೆ. ತನ್ನ ಮಗಳಿಗೆ ಪ್ರಥಮ ಹಾಗೂ ತನ್ನ ಸಂಗೀತ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಮತ್ತು ಮೂರನೇ ಬಹುಮಾನ ನೀಡಿದ್ದಾರೆಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ಪ್ರಬಂಧಕರಲ್ಲಿ ಮಾತನಾಡಿಸಿದಾಗ ಅವರು, ಉಡಾಫೆಯಿಂದ ವರ್ತಿಸಿ ಕಾಲ್ ಕಟ್ ಮಾಡಿದ್ದಾರೆ. ಕಲೆ,ಚಿತ್ರಕಲೆ,ಸಾಹಿತ್ಯ, ಸಂಗೀತ, ಪಂದ್ಯಾವಳಿ ಮೊದಲಾದವುಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆತ್ತವರಾಗಲಿ,ಮನೆಯವರಾಗಲಿ ಇಲ್ಲವೇ ಕುಟುಂಬದವರಾಗಲಿ ಅಥವಾ ಅವರ ತರಬೇತುದಾರರಾಗಲಿ,ಗುರುಗಳಾಗಲಿ ತೀರ್ಪುಗಾರರಾಗುವಂತಿಲ್ಲ ಇದು ಸ್ಪರ್ಧೆಯ ನಿಯಮಾವಳಿ. ಹೀಗಿರುವಾಗ ಮಗಳು ಹಾಗೂ ತನ್ನ ಶಿಷ್ಯಂದಿರುವ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿದ್ದು ತಪ್ಪು ಮತ್ತು ಈ ಬಗ್ಗೆ ಆಯೋಜಕರಲ್ಲಿ ಮಾತನಾಡಿಸಿದಾಗ ಅವರು ಉಡಾಫೆಯಿಂದ ವರ್ತಿಸಿದ್ದು ಕೂಡಾ ಸರಿಯಲ್ಲ ಎಂದು ಆರೋಪಿಸಲಾಗಿದೆ.
ಜೀವ ವಿಮಾ ಕಂಪನಿ ಭಾರತದ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಪಬ್ಲಿಕ್ ಸೆಕ್ಟರ್ ಆಗಿರುತ್ತದೆ. ಇಂತಹ ಕಂಪನಿಯ ಪ್ರಬಂಧಕರು ತಾರತಮ್ಯ ನೀತಿಯನ್ನು ಅನುಸರಿಸುವುದು ಮತ್ತು ಸಾರ್ವಜನಿಕರಲ್ಲಿ ಉಡಾಫೆಯಿಂದ ವರ್ತಿಸುವುದು ಕಂಪನಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಹಾಗಾಗಿ ಕಂಪನಿಯ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
BELTHANGADY
ರಾಯಚೂರಿನಲ್ಲಿ ಶಾಸಕ ಹರೀಶ್ ಪೂಂಜಗೆ ಸ್ವಾಗತ ಕೋರಿರುವ ಫ್ಲೆಕ್ಸ್ಗಳಲ್ಲಿ ಕಾಂಗ್ರೆಸ್ ಸಚಿವ, ಶಾಸಕರ ಫೋಟೋಗಳು!
ರಾಯಚೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ಗಳಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರ ಫೋಟೋಗಳು ರಾರಾಜಿಸಿವೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿ ಮಾನ್ವಿಯಲ್ಲಿ ಹಲವು ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ಗಳಲ್ಲಿ ಸಚಿವ ಎನ್.ಎಸ್.ಬೋಸರಾಜು ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ್, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಾಕಲಾಗಿದೆ.
ಮಾನ್ವಿ ಪಟ್ಟಣ ಹಾಗೂ ರಾಯಚೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಹರೀಶ್ ಪೂಂಜ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ.
BELTHANGADY
ಓವರ್ಟೆಕ್ ಭರದಲ್ಲಿ ಎರಡು ಕಾರು, ಲಾರಿ ಮಧ್ಯೆ ಅಪಘಾ*ತ; ಓರ್ವ ಸ್ಥಳದಲ್ಲೇ ಮೃ*ತ್ಯು
ಸಕಲೇಶಪುರ: ಎರಡು ಕಾರುಗಳು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪುಹೊಳೆ ಬಳಿ ಸಂಭವಿಸಿದೆ.
ಹಾಸನ ತಾಲೂಕಿನ ಕಟ್ಟಾಯ ಸಮೀಪದ ನಾಯಕರಹಳ್ಳಿ ಚಂದ್ರೇಗೌಡ(50 ವ) ಮೃತಪಟ್ಟವರು. ಕಾರಿನಲ್ಲಿದ್ದ ಶೈಲಾ ಹಾಗೂ ಕಿರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಓವರ್ಟೇಕ್ ಭರದಲ್ಲಿ ಕಾರುಗಳ ಮಧ್ಯೆ ಭೀ*ಕರ ಅಫಘಾ*ತ; 6 ಮಂದಿ ದುರ್ಮರ*ಣ
ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರುಗಳು ಒಂದನ್ನೊಂದು ಓವರ್ಟೆಕ್ ಮಾಡುವ ಭರದಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿಗೆ ಕೆಂಪುಹೊಳೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಪ್ರಪಾತಕ್ಕೆ ಬೀಳುವುದು ಕೂದಲೆಳೆಯಲ್ಲಿ ತಪ್ಪಿಹೋಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಶರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಿಂದ ಗಾಯಗೊಂಡವರನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
- FILM6 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS6 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM7 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!
- FILM5 days ago
ಶಾಂಕಿಂಗ್ ನ್ಯೂಸ್ : ಕಟ್ಟಡದಿಂದ ಹಾರಿ ನಟಿ ಮಲೈಕಾ ಅರೋರಾ ತಂದೆ ಆತ್ಮಹ*ತ್ಯೆ