HomeBANTWALಎಟಿಎಂನಲ್ಲಿ ಬಾಕಿಯಾಗಿದ್ದ ಹಣ ಮರಳಿಸಿ ಪ್ರಮಾಣಿಕತೆ ಮೆರೆದ ಕಂದಾಯ ಅಧಿಕಾರಿ..!

ಎಟಿಎಂನಲ್ಲಿ ಬಾಕಿಯಾಗಿದ್ದ ಹಣ ಮರಳಿಸಿ ಪ್ರಮಾಣಿಕತೆ ಮೆರೆದ ಕಂದಾಯ ಅಧಿಕಾರಿ..!

ಎಟಿಎಂನಲ್ಲಿ ಬಾಕಿಯಾಗಿದ್ದ ಹಣವನ್ನು ಪೋಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ಮಾನವೀಯತೆಯನ್ನು  ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಮೆರೆದಿದ್ದಾರೆ.

ಬಂಟ್ವಾಳ : ಎಟಿಎಂನಲ್ಲಿ ಬಾಕಿಯಾಗಿದ್ದ ಹಣವನ್ನು ಪೋಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ಮಾನವೀಯತೆಯನ್ನು ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಮೆರೆದಿದ್ದಾರೆ.

ಸೀತಾರಾಮರ ಪ್ರಮಾಣಿಕತೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ಫೆಬ್ರವರಿ 27ರಂದು ಬಿ ಸಿ ರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ದೊರೆತ 9000 ರೂಪಾಯಿ ನಗದನ್ನು ಇಂದು ವಾರೀಸುದಾರರಿಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರ ಸಮಕ್ಷಮ ಹಸ್ತಾಂತರಿಸಲಾಯಿತು.

 

ಫೆಬ್ರವರಿ 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎ‌ಟಿಎಮ್ ನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ‌ನಗರ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.

ಬಂಟ್ವಾಳ ಪೋಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಹಣಕಳಕೊಂಡವರು ಮುಕ್ತಬಾಯಿ ಎಂದು ತಿಳಿದು ಅವರನ್ನು ಠಾಣೆಗೆ ಕರೆದು ಹಸ್ತಾಂತರ ಮಾಡಲಾಯಿತು.

ಸೀತಾರಾಮರ ಪ್ರಮಾಣಿಕತೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

Latest articles

ಕಾಸರಗೋಡು: ಎಮರ್ಜೆನ್ಸಿಲೈಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ- ಓರ್ವನ ಬಂಧನ..!

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು...

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...