ಖ್ಯಾತ ವರ್ಣ ಚಿತ್ರಕಾರ ಸಾಹಿತಿ ಯು.ಎ ಖಾದರ್ ಇನ್ನಿಲ್ಲ ..!
ಕೋಯಿಕ್ಕೋಡ್: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ಯು.ಎ.ಖಾದರ್ ಅವರು ಕೋಯಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
85 ವರ್ಷದ ಯು.ಎ.ಖಾದರ್ ಅವರು ಶ್ವಾಸಕೋಶದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ರವಿವಾರ ಅಂತ್ಯಕ್ರಿಯೆ ನಡೆಯಲಿದೆ.
ಖಾದರ್ ಅವರು ಕೇಂದ್ರ ಮತ್ತು ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವರ್ಣಚಿತ್ರಕಾರರಾಗಿದ್ದ ಇವರು, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (2009), ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ (1984, 2002) ಎಸ್ಕೆ ಪೋಟಕ್ಕಾಡ್ ಪ್ರಶಸ್ತಿ (1993) ಮತ್ತು ಮಲಯಾಟೂರ್ ಪ್ರಶಸ್ತಿ, ಸಿ.ಎಚ್ ಮುಹಮ್ಮದ್ ಕೋಯ ಸಾಹಿತ್ಯ ಪ್ರಶಸ್ತಿ, ಅಬುಧಾಬಿ ಶಕ್ತಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪುರಸ್ಕಾರ ಮತ್ತಿತರ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಧಾರವಾಹಿ, ಕಥಾ ಸಂಕಲನ, ಲೇಖನಗಳು ಸೇರಿ 50ಕ್ಕೂ ಹೆಚ್ಚಿನ ಕೃತಿಗಳನ್ನು ಅವರು ರಚಿಸಿದ್ದು, ತೃಕ್ಕೋಟೂರ್ ಪೆರುಮ, ಅಘೋರಶಿವಮ್, ತೃಕ್ಕೋಟೂರ್ ಕಥಗಳ್, ಕೃಷ್ಣಮಣಿಯಿಲೆ ತೀನಾಳಮ್, ವಳ್ಳೂರಮ್ಮ, ಕಳಸಮ್, ಚೆಂಗಳ, ಭಗವದಿಚ್ಚೂಟ್ ಮುಂತಾದವುಗಳು ಅವರ ಪ್ರಮುಖ ಕೃತಿಗಳು.
ಅವರ ಮೃತ ಶರೀರವನ್ನು ಕೋಝಿಕ್ಕೋಡ್ ಹತ್ತಿರದ ಪೂಕುನ್ನು ಎಂಬಲ್ಲಿರುವ ತನ್ನ “ಅಕ್ಷರ” ಮನೆಗೆ ತರಲಾಗಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ ಕುಟುಂಬಸ್ಥರು ತಿಳಿಸಿದ್ದಾರೆ