Connect with us

LATEST NEWS

ಕೊನೆಗೂ ಬಯಲಾಯ್ತು ಮುಂಬೈ ಬಸ್ ದು*ರಂತದ ಅಸಲಿ ಕಾರಣ !!

Published

on

ಮಂಗಳೂರು/ಮುಂಬೈ: ಚಾಲಕನ ನಿರ್ಲಕ್ಷ್ಯದಿಂದ ಭೀ*ಕರವಾಗಿ ಬಸ್ ಅ*ಪಘಾತಕ್ಕೀಡಾದ ಘಟನೆ ಮುಂಬೈನ ಕುರ್ಲಾದಲ್ಲಿ ಸೋಮವಾರ (ಡಿ.9) ನಡೆದಿತ್ತು. ಅ*ಪಘಾತದಲ್ಲಿ ಸುಮಾರು 7 ಜನರು ದು*ರ್ಮರಣಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾ*ಯಗೊಂಡಿದ್ದರು. ಗಾ*ಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇನ್ನೂ ಚಿ*ಕಿತ್ಸೆ ನೀಡಲಾಗುತ್ತಿದೆ. ಅ*ಪಘಾಟದಲ್ಲಿ ಮೃ*ತರಾದ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಸ್‌ಸಿ) ಘೋಷಿಸಿದೆ.

ಅ*ಪಘಾತ ಸಂಭವಿಸಿದ್ದು ಹೇಗೆ?

ಇರಲಿಲ್ಲ. ಮೊದಲು ಸಂಜಯ್ ಮಿನಿ ಬಸ್ ಓಡಿಸುತ್ತಿದ್ದ. ಈ ಬಸ್ಸುಗಳು ಕ್ಲಚ್, ಬ್ರೇಕ್ ಮತ್ತು ವೇಗವರ್ಧಕವನ್ನು ಹೊಂದಿದ್ದವು. ಅದೇ ರೀತಿ 10 ದಿನಗಳ ತರಬೇತಿಯ ನಂತರ ಸಂಜಯ್ ಗೆ ನೇರವಾಗಿ ದೊಡ್ಡ ಬಸ್ ಓಡಿಸುವ ಕೆಲಸಕ್ಕೆ ಸೇರಿದ್ದಾನೆ. ಅ*ಪಘಾತದ ಸಮಯದಲ್ಲಿ, ಆರೋಪಿ ಬ್ರೇಕ್ ಬದಲಿಗೆ ಕ್ಲಚ್ ಆಕ್ಸಿಲರೇಟರ್ ಅನ್ನು ಒತ್ತಿದ ಕಾರಣದಿಂದಾಗಿ ಬಸ್ ನಿಲ್ಲುವ ಬದಲು ವೇಗವನ್ನು ಹೆಚ್ಚಾಗಿ ಅ*ಪಘಾತ ಸಂಭವಿಸಿದ ರಸ್ತೆಯಲ್ಲಿ ಜನಸಂದಣಿಯನ್ನು ನೋಡಿದ ಸಂಜಯ್, ಅನಿಯಂತ್ರಿತ ಬಸ್ ಅನ್ನು ನಿಲ್ಲಿಸಲು ಬಸ್ ಅನ್ನು ಭದ್ರತಾ ಗೋಡೆಗೆ ಡಿ*ಕ್ಕಿ ಹೊಡೆಸಿದ್ದಾನೆ.

ಇದನ್ನೂ ಓದಿ : ಅಡ್ಡಾದಿಡ್ಡಿ ಬಸ್ ಚಾಲನೆ; ಮುಂಬೈನಲ್ಲಿ ಅ*ಪಘಾತ; 6 ಸಾ*ವು, 49 ಮಂದಿಗೆ ಗಾ*ಯ

 

ಪೊಲೀಸರ ವಶವಾದ ಆರೋಪಿಗಳು :

ಬಸ್ ಅ*ಪಘಾತದ ತನಿಖೆಗಾಗಿ ಬೆಸ್ಟ್ ಎಂಟರ್‌ಪ್ರೈಸಸ್ ಮಂಗಳವಾರ (ಡಿ. 11) ಸಮಿತಿಯನ್ನು ರಚಿಸಿದೆ ಎನ್ನಲಾಗಿದೆ. ನ್ಯಾಯಾಲಯವು ಬಸ್ ಚಾಲಕನನ್ನು ಡಿಸೆಂಬರ್ 21 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ತನಿಖಾ ಸಮಿತಿಯು ಮುಖ್ಯ ವ್ಯವಸ್ಥಾಪಕ (ಸಾರಿಗೆ) ರಮೇಶ್ ಮಾದವಿ ಅವರ ನೇತೃತ್ವದಲ್ಲಿರುತ್ತದೆ. ಅ*ಪಘಾತದಲ್ಲಿ ಗಾ*ಯಗೊಂಡ ವ್ಯಕ್ತಿಗಳ ಚಿ*ಕಿತ್ಸೆಯ ವೆಚ್ಚವನ್ನು ಸಹ ಬೆಸ್ಟ್ ಭರಿಸಲಿದೆ. ಇದೇ ವೇಳೆ ಬಿಜೆಪಿ ನಿಯೋಗ ಬೆಸ್ಟ್ ಜನರಲ್ ಮ್ಯಾನೇಜರ್ ಅನಿಲ್ ಡಿಗ್ಗಿಕರ್ ಅವರನ್ನು ಭೇಟಿ ಮಾಡಿ ಮೃ*ತರ ಕುಟುಂಬಕ್ಕೆ ತಲಾ 10 ಲಕ್ಷ ಹಾಗೂ ಗಾ*ಯಗೊಂಡವರಿಗೆ 50 ಸಾವಿರದಿಂದ 2 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ

LATEST NEWS

ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

Published

on

ಮಂಗಳೂರು/ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಅಜಾತ ಶತ್ರು, ಸರಳ ಸಜ್ಜನಿಕೆಯ ರಾಜಕಾರಣಿ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದಾರೆ. ತಮ್ಮ 92 ವಯಸ್ಸಿಗೆ ತಮ್ಮ ಸುದೀರ್ಘ ಬಾಳಪಯಣವನ್ನು ಕೊನೆಗೊಳಿಸಿದ್ದಾರೆ.
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರೆನಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ.

ಆರ್. ಅಶೋಕ್ ಟ್ವೀಟ್

ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್ “ಕರ್ನಾಟಕ ರತ್ನ “ಎಸ್.ಎಂ.ಕೃಷ್ಣ”

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್‌.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ.
ಶಾಸಕ, ಸಚಿವ, ಸ್ಪೀಕರ್‌, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್‌ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ. ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ಅಂತಿಮ ಯಾತ್ರೆ: ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ, ಸಿಎಂ ಸಿದ್ದರಾಮಯ್ಯ ಭಾಗಿ

ಶ್ರೀ ಎಸ್‌.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೆರಿದೆ.

 

Continue Reading

International news

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ

Published

on

ಮಂಗಳೂರು/ಟೆಲ್ ಅವೀವ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೊದಲ ಬಾರಿಗೆ ಟೆಲ್ ಅವೀವ್ ನ ನ್ಯಾಯಾಲಯವೊಂದರಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.

ಈ ಮೂಲಕ ಅಧಿಕಾರದಲ್ಲಿರುವಾಗಲೇ ಅಪರಾಧ ಪ್ರಕರಣ ಎದುರಿಸುತ್ತಿರುವ ಮೊದಲ ಪ್ರಧಾನಿ ಎಂದೆನಿಸಿದ್ದಾರೆ.ನ್ಯಾಯಧೀಶರಲ್ಲೊಬ್ಬರು ನೆತನ್ಯಾಹು ಅವರಿಗೆ ಕಟಕಟೆಯೊಳಗೆ ಕುಳಿತುಕೊಳ್ಳುವ ಇಲ್ಲವೇ ನಿಲ್ಲಲು ಅವಕಾಶವಿರುವುದಾಗಿ ತಿಳಿಸಿದರು. ನೆತನ್ಯಾಹು ಪದೇಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ವಂಚನೆ, ಭ್ರಷ್ಟಾಚಾರ ಮತ್ತು ನಂಬಿಕೆ ದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿರುದ್ದ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ:ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ ! 

ಇದು ಅಲ್ಲದೆ ತನ್ನ ಹಾಗೂ ಕುಟುಂಬವನ್ನು ಓಲೈಸುವಂತೆ ವರದಿಗಳನ್ನು ಪ್ರಕಟಿಸುವುದಕ್ಕೆ ಪ್ರತಿಫಲವಾಗಿ ಮಾಧ್ಯಮ ಮಾಲಕರಿಗೆ ಅನುಕೂಲಕರವಾಗುವಂತಹ ಕಾನೂನು, ನಿಯಮಗಳನ್ನು ಜಾರಿಗೊಳಿಸಿದ ಆರೋಪವನ್ನು ಕೂಡಾ ಅವರು ಎದುರಿಸುತ್ತಿದ್ದಾರೆ.

ರಾಜಕೀಯ ಲಾಭ ಮಾಡಿಕೊಟ್ಟಿರುವುದಕ್ಕೆ ಪ್ರತಿಯಾಗಿ ಶ್ರೀಮಂತರಿಂದ ಬೆಲೆಬಾಳುವ ವಸ್ತುಗಳನ್ನು ಪಡೆದಿರುವ ಪ್ರಕರಣದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಆರೋಪಿಗಳಾಗಿದ್ದಾರೆ.

2020 ಮೇ ನಲ್ಲಿ ಆರಂಭವಾಗಿದ್ದ ವಿಚಾರಣೆಯು ಪದೇ ಪದೇ ಮುಂದೂಡಲ್ಪಟ್ಟಿತ್ತು. ಮೇಲ್ಮನವಿ ಪ್ರಕ್ರಿಯೆಯ ಕಾರಣದಿಂದ ವಿಚಾರಣೆ ವಿಳಂಬವಾಗಿತ್ತು. ಗಾಜಾ ಮತ್ತು ಲೆಬೆನಾನ್ ಜೊತೆಗಿನ ಯುದ್ದದ ಕಾರಣಕ್ಕೆ ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ನೆತಾನ್ಯಾಹು ಹಲವಾರು ಬಾರಿ ಮನವಿ ಮಾಡಿದ್ದರು.

ಈ ಬಗ್ಗೆ ಮಾತನಾಡಿರುವ ನೆತನ್ಯಾಹು ‘ಈ ದಿನಕ್ಕಾಗಿ ನಾನು ಎಂಟು ವರ್ಷಗಳಿಂದ ಕಾಯುತ್ತಿದ್ದೆ. ನನ್ನ ವಿರುದ್ದದ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗೆ ಉತ್ತರ ನೀಡಲು ಮತ್ತು ಸತ್ಯವನ್ನು ಹೇಳಲು ಕಾತರನಾಗಿದ್ದೆ’ ಎಂದು ಹೇಳಿದ್ದಾರೆ.

Continue Reading

DAKSHINA KANNADA

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್‌ ಚಲನಚಿತ್ರ ತೆರೆಗೆ !!

Published

on

ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.

ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.

ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್‌ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್‌ ಶೆಟ್ಟಿ ಮೊದಲಾದವರಿದ್ದರು.

Continue Reading

LATEST NEWS

Trending

Exit mobile version