LATEST NEWS
ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ತನ್ನನ್ನು ತಾನೇ ಬ*ಲಿಕೊಟ್ಟ ಅರ್ಚಕ !!
Published
17 hours agoon
ಮಂಗಲುರು/ವಾರಣಾಸಿ : ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ವಾರಾಣಸಿಯ ಅರ್ಚಕರೊಬ್ಬರು ಕ*ತ್ತು ಸೀ*ಳಿಕೊಂಡು ತನ್ನನ್ನು ತಾನೇ ಬ*ಲಿಕೊಟ್ಟ ಘಟನೆ ನಡೆದಿದೆ. ಅರ್ಚಕ ಅಮಿತ್ ಶರ್ಮಾ ಎಂಬುವವರು ಮನೆಯ ರೂಮಿನ ಬಾಗಿಲು ಹಾಕಿಕೊಂಡು ಸತತ 24 ಗಂಟೆಗಳ ಕಾಲ ಕಾಳಿ ದೇವಿಯನ್ನು ನಿಷ್ಠೆಯಿಂದ ಪೂಜಿಸಿದ್ದರು. ಆದರೆ ಆ ತಾಯಿ ದರ್ಶನ ಕೊಡಲಿಲ್ಲ ಎನ್ನುವ ಬೇಸರದಲ್ಲಿ ಆ*ತ್ಮಹ*ತ್ಯೆಗೆ ಶರಣಾಗಿದ್ದಾರೆ.
ನಗರದ ಗಾಯ್ ಘಾಟ್ ಪ್ರದೇಶದ ನಿವಾಸಿ ಅಮಿತ್ ಶರ್ಮಾ ಅವರು ತಮ್ಮ ಬಾಡಿಗೆ ಮನೆಯ ಅಂಗಳದಲ್ಲಿ ಕ*ಟ್ಟರ್‌ನಿಂದ ಕ*ತ್ತು ಸೀ*ಳುವ ಮೊದಲು ದೇವರನ್ನು ಪ್ರಾರ್ಥಿಸಿದ್ದರು. ಆ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಪತ್ನಿಗೆ ‘ತಾಯಿ ಕಾಳಿ ನೀನೇ ದಾರಿ ತೋರಿಸು’ ಎಂದು ಜೋರಾಗಿ ಕೂಗಿದ್ದರು. ಅವರು ಮನೆಯಿಂದ ಹೊರಗೆ ಬರುವಷ್ಟರಲ್ಲಿ ನೆಲದ ಮೇಲೆ ಪತಿ ರ*ಕ್ತದ ಮ*ಡುವಿನಲ್ಲಿ ಬಿ*ದ್ದಿರುವುದನ್ನು ಕಂಡರು. ಕೂಡಲೇ ಅಕ್ಕಪಕ್ಕದವರನ್ನು ಕರೆದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಉ*ಸಿರು ನಿಂತಿತ್ತು.
‘ಕಾಳಿ ದೇವಿಯು ತನಗೆ ಕಾಣಿಸಿಕೊಳ್ಳುತ್ತಾಳೆ’ ಎಂಬ ಮೂಢನಂಬಿಕೆಯಿಂದ ಶರ್ಮಾ ಕೊಠಡಿಯಲ್ಲಿ ಬೀಗ ಹಾಕಿಕೊಂಡು 24 ಗಂಟೆಗಳ ಕಾಲ ತೀವ್ರ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದರು ಎಂದು ಜೂಲಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಆಗದಿದ್ದಾಗ ಆತ ಕಂಗಾಲಾಗಿ ಪ್ರಾ*ಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ಸುತ್ತಲಿನ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
LATEST NEWS
ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ
Published
11 hours agoon
11/12/2024By
NEWS DESK3ಮಂಗಳೂರು/ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಅಜಾತ ಶತ್ರು, ಸರಳ ಸಜ್ಜನಿಕೆಯ ರಾಜಕಾರಣಿ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದಾರೆ. ತಮ್ಮ 92 ವಯಸ್ಸಿಗೆ ತಮ್ಮ ಸುದೀರ್ಘ ಬಾಳಪಯಣವನ್ನು ಕೊನೆಗೊಳಿಸಿದ್ದಾರೆ.
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರೆನಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ.
ಆರ್. ಅಶೋಕ್ ಟ್ವೀಟ್
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್ “ಕರ್ನಾಟಕ ರತ್ನ “ಎಸ್.ಎಂ.ಕೃಷ್ಣ”
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ.
ಶಾಸಕ, ಸಚಿವ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ. ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಇದನ್ನೂ ಓದಿ: ಎಸ್.ಎಂ.ಕೃಷ್ಣ ಅಂತಿಮ ಯಾತ್ರೆ: ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ, ಸಿಎಂ ಸಿದ್ದರಾಮಯ್ಯ ಭಾಗಿ
ಶ್ರೀ ಎಸ್.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೆರಿದೆ.
International news
ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ
Published
12 hours agoon
11/12/2024By
NEWS DESK3ಮಂಗಳೂರು/ಟೆಲ್ ಅವೀವ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೊದಲ ಬಾರಿಗೆ ಟೆಲ್ ಅವೀವ್ ನ ನ್ಯಾಯಾಲಯವೊಂದರಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.
ಈ ಮೂಲಕ ಅಧಿಕಾರದಲ್ಲಿರುವಾಗಲೇ ಅಪರಾಧ ಪ್ರಕರಣ ಎದುರಿಸುತ್ತಿರುವ ಮೊದಲ ಪ್ರಧಾನಿ ಎಂದೆನಿಸಿದ್ದಾರೆ.ನ್ಯಾಯಧೀಶರಲ್ಲೊಬ್ಬರು ನೆತನ್ಯಾಹು ಅವರಿಗೆ ಕಟಕಟೆಯೊಳಗೆ ಕುಳಿತುಕೊಳ್ಳುವ ಇಲ್ಲವೇ ನಿಲ್ಲಲು ಅವಕಾಶವಿರುವುದಾಗಿ ತಿಳಿಸಿದರು. ನೆತನ್ಯಾಹು ಪದೇಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ವಂಚನೆ, ಭ್ರಷ್ಟಾಚಾರ ಮತ್ತು ನಂಬಿಕೆ ದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿರುದ್ದ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ:ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ !
ಇದು ಅಲ್ಲದೆ ತನ್ನ ಹಾಗೂ ಕುಟುಂಬವನ್ನು ಓಲೈಸುವಂತೆ ವರದಿಗಳನ್ನು ಪ್ರಕಟಿಸುವುದಕ್ಕೆ ಪ್ರತಿಫಲವಾಗಿ ಮಾಧ್ಯಮ ಮಾಲಕರಿಗೆ ಅನುಕೂಲಕರವಾಗುವಂತಹ ಕಾನೂನು, ನಿಯಮಗಳನ್ನು ಜಾರಿಗೊಳಿಸಿದ ಆರೋಪವನ್ನು ಕೂಡಾ ಅವರು ಎದುರಿಸುತ್ತಿದ್ದಾರೆ.
ರಾಜಕೀಯ ಲಾಭ ಮಾಡಿಕೊಟ್ಟಿರುವುದಕ್ಕೆ ಪ್ರತಿಯಾಗಿ ಶ್ರೀಮಂತರಿಂದ ಬೆಲೆಬಾಳುವ ವಸ್ತುಗಳನ್ನು ಪಡೆದಿರುವ ಪ್ರಕರಣದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಆರೋಪಿಗಳಾಗಿದ್ದಾರೆ.
2020 ಮೇ ನಲ್ಲಿ ಆರಂಭವಾಗಿದ್ದ ವಿಚಾರಣೆಯು ಪದೇ ಪದೇ ಮುಂದೂಡಲ್ಪಟ್ಟಿತ್ತು. ಮೇಲ್ಮನವಿ ಪ್ರಕ್ರಿಯೆಯ ಕಾರಣದಿಂದ ವಿಚಾರಣೆ ವಿಳಂಬವಾಗಿತ್ತು. ಗಾಜಾ ಮತ್ತು ಲೆಬೆನಾನ್ ಜೊತೆಗಿನ ಯುದ್ದದ ಕಾರಣಕ್ಕೆ ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ನೆತಾನ್ಯಾಹು ಹಲವಾರು ಬಾರಿ ಮನವಿ ಮಾಡಿದ್ದರು.
ಈ ಬಗ್ಗೆ ಮಾತನಾಡಿರುವ ನೆತನ್ಯಾಹು ‘ಈ ದಿನಕ್ಕಾಗಿ ನಾನು ಎಂಟು ವರ್ಷಗಳಿಂದ ಕಾಯುತ್ತಿದ್ದೆ. ನನ್ನ ವಿರುದ್ದದ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗೆ ಉತ್ತರ ನೀಡಲು ಮತ್ತು ಸತ್ಯವನ್ನು ಹೇಳಲು ಕಾತರನಾಗಿದ್ದೆ’ ಎಂದು ಹೇಳಿದ್ದಾರೆ.
DAKSHINA KANNADA
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
Published
12 hours agoon
11/12/2024ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್ ಶೆಟ್ಟಿ ಮೊದಲಾದವರಿದ್ದರು.
LATEST NEWS
ಆರ್ಬಿಐ ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ !!
ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ !
ವಿಚ್ಛೇದನ ನೀಡದೆ ಎರಡನೇ ಮದುವೆ; ಮಂಟಪದಲ್ಲೇ ಮೊದಲ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ
ಅನುಪಮ್ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ಕಾವೂರಿನಲ್ಲಿ ಪ್ರತಿಭಟನೆ !!
ಕಡಬ: ಪ್ಯಾಚ್ ವರ್ಕ್ ಮಾಡಿ ಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ
ಭಾರತದಲ್ಲಿ ಮನರಂಜನೆ ಮತ್ತು ಮಾಧ್ಯಮ ಉದ್ಯಮ ಭಾರೀ ಬೆಳವಣಿಗೆ !!
Trending
- BIG BOSS3 days ago
ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?
- BIG BOSS5 days ago
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
- BIG BOSS5 days ago
ಬಿಗ್ಬಾಸ್ ನಿರ್ಧಾರಗಳಿಗೆ ರೆಸ್ಪೆಕ್ಟೇ ಇಲ್ಲ -ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್
- BANTWAL6 days ago
ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ