Connect with us

LATEST NEWS

ನಿಂತ ಕಾರಿನ ಗಾಜು ಪುಡಿಗೈದು ಅಮೂಲ್ಯ ದಾಖಲೆ ಪತ್ರ,ವಸ್ತುಗಳ ಕಳವು..!

Published

on

ನಿಂತ ಕಾರಿನ ಗಾಜು ಪುಡಿಗೈದು ಅಮೂಲ್ಯ ದಾಖಲೆ ಪತ್ರ,ವಸ್ತುಗಳ ಕಳವು..!

ಮಂಗಳೂರು: ಪಾರ್ಕಿಂಗ್ ಮಾಡಲಾಗಿದ್ದ ಕಾರ್ ಒಂದರ ಗಾಜು ಒಡೆದು ದಾಖಲೆ ಪತ್ರ ಮತ್ತು ಬೆಲೆ ಬಾಳುವ ಸ್ಟೀರಿಯೋ, ಮತ್ತು ನಗದನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಮಂಗಳೂರಿನ ಲೇಡಿಹಿಲ್ ರಸ್ತೆಯ ಶಿರ್ಡಿ ಸಾಯಿಬಾಬಾ ಮಂದಿರದ ಪಕ್ಕದಲ್ಲಿ ನಡೆದಿದೆ. ಅನಿವಾಸಿ ಭಾರತೀಯ ಮೂಡುಶೆಡ್ಡೆ ನಿವಾಸಿ ಚೇತನ್ ಕುಮಾರ್ ಹಾಗೂ ಭಾರತಿ ಎಂಬವರು ಅಗತ್ಯ ಕಾರ್ಯದ ನಿಮಿತ್ತ  ನಗರಕ್ಕಾಗಮಿಸಿ ಲೇಡಿಹಿಲ್ ನಲ್ಲಿರುವ ಶಿರ್ಡಿ ಸಾಯಿ ಬಾಬಾ ಮಂದಿರದ ಬಳಿ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಅವರು ಮರಳಿ ಬರುವಷ್ಟರಲ್ಲಿ ಕಾರಿನಲ್ಲಿಟ್ಟಿದ್ದ ವಿದೇಶಿ ನಗದು, ಸ್ಟೀರಿಯೋ, ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್, ದಾಖಲೆ ಪತ್ರಗಳು ಇರುವ ಬ್ಯಾಗನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಸುಮಾರು ಒಂದು ಲಕ್ಷ ರೂಪಾಯಿ ಸೊತ್ತುಗಳು ಕಳುವಾಗಿದೆ ಎಂದು  ಉರ್ವ ಠಾಣೆಯಲ್ಲಿ ಕಾರಿನ ಮಾಲಕ ಚೇತನ್ ದೂರು ದಾಖಲಿಸಿದ್ದಾರೆ.

ಇಂದು ಬೆಳಗ್ಗೆ ವಿದೇಶಕ್ಕೆ ತೆರಳಬೇಕಾಗಿದ್ದ ಚೇತನ್ ಅವರ ದಾಖಲೆಗಳು ಕಳುವಾಗಿದ್ದರಿಂದ ವಿದೇಶಕ್ಕೆ ತೆರಳಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿಂದೆಯೂ ಈ ಪ್ರದೇಶದಲ್ಲಿ ಬಹಳಷ್ಟು ಸಲ ಇಂತಹ ಘಟನೆಗಳು ನಡೆದಿದ್ದು, ಇನ್ನಾದರೂ ಸಂಬಂಧಪಟ್ಟವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

BIG BOSS

BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

Published

on

ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುತ್ತಾರೆ ಎಂದು ಮೋಕ್ಷಿತಾ ಕಾರಣ ಹೇಳ್ತಾರೆ. ಅದಕ್ಕೆ, ಉಗ್ರಂ ಮಂಜು, ಅದು ನಂಬಿಕೆ ದ್ರೋಹ ಎಂದು ಕೂಗಾಡಿದ್ದಾರೆ.

ನಂತರ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.

Continue Reading

International news

14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !

Published

on

ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಒಲಿಂಪಿಯನ್ ‘ಎಮ್ಮಾ ಮೆಕ್ ಕೀನ್’ ಸೋಮವಾರ ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ವಿದಾಯ ಘೋಷಿಸಿದ್ದಾರೆ.

ಮೆಕ್ ಕಿಯಾನ್ ಮೂರು ಬೇಸಿಗೆ ಒಲಿಂಪಿಕ್ಸ್ ಗಳಲ್ಲಿ 14 ಒಲಿಂಪಿಕ್ ಪದಕಗಳ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ:ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಇವರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನದ ಪದಕಗಳು, ಮೂರು ಬೇಸಿಗೆ ಒಲಿಂಪಿಕ್ ಗಳಲ್ಲಿ ಪದಕ ಬಂದಿದೆ. ಇನ್ನೂ ಟೋಕಿಯೊ ಒಲಿಂಪಿಕ್ 2020ರಲ್ಲಿ, ಎಮ್ಮಾ ಏಳು ಪದಕ ಗೆಲ್ಲುವುದರೊಂದಿಗೆ ಒಂದೇ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

Continue Reading

LATEST NEWS

ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್​ನ್ಯೂಸ್..!

Published

on

ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಿದೆ. ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.

ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಬಿಪಿಎಲ್ ಕಾರ್ಡ್​ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.

Continue Reading

LATEST NEWS

Trending

Exit mobile version