Thursday, February 9, 2023

ಬಂಟ್ವಾಳ: 24 ಗಂಟೆಯೂ ವಾಹನ ತಪಾಸಣೆಯಲ್ಲಿ ನಿರತವಾದ ಪೊಲೀಸ್ ಇಲಾಖೆ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಉಂಟಾಗಿರುವ ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ದು, ಜಿಲ್ಲೆಯ ಕೇರಳದ ಗಡಿಭಾಗದ ಜತೆಗೆ ಕೆಲವೊಂದು ಆಯಕಟ್ಟಿನ ಸ್ಥಳಗಳಲ್ಲೂ ದಿನದ 24ಗಂಟೆಯೂ ತಪಾಸಣೆ ಮುಂದುವರಿಸಿದೆ.


ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಬಂಟ್ವಾಳದ ಹಲವು ಭಾಗಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಪೊಳಲಿ, ಫರಂಗಿಪೇಟೆ, ಮಣಿಹಳ್ಳ ಮೊದಲಾದ ಪ್ರದೇಶಗಳ ಜತೆಗೆ ಗಡಿ ಸಮೀಪದ ಗ್ರಾಮಗಳಾದ ಮಂಚಿ, ಸಾಲೆತ್ತೂರುಗಳಲ್ಲೂ ತಪಾಸಣೆ ಮುಂದುವರಿದಿದೆ.


ಜತೆಗೆ ಉನ್ನತ ಅಧಿಕಾರಿಗಳು ಸೇರಿದಂತೆ ಇನ್ಸ್‌ಪೆಕ್ಟರ್ ಗಳು, ಪಿಎಸ್ಐಗಳ ರೌಂಡ್ಸ್ ಕರ್ತವ್ಯದ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದು ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕರ್ತವ್ಯ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಸುರತ್ಕಲ್ ‌ಫಾಝಿಲ್ ಕೊಲೆ ಆರೋಪಿಯಿಂದ ಹಣಕ್ಕಾಗಿ ಬೆದರಿಕೆ: ಉಳ್ಳಾಲ ಠಾಣೆಯಲ್ಲಿ ‌ಪ್ರಕರಣ ದಾಖಲು

ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದೆ.ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ...

ಹಾಸನ: ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆ, ಕೊಲೆ ಶಂಕೆ ..!

ಹಾಸನ :  ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಯೋಗೀಹಳ್ಳಿಯಲ್ಲಿ ನಡೆದಿದೆ.26 ವರ್ಷ ಪ್ರಾಯದ ಲಿಖಿತ್‌ಗೌಡ ಯಾನೆ ಬಂಗಾರಿ ಕೊಲೆಯಾದ ಯುವಕ. ಈತನನ್ನು ಕೊಲೆ...