ಮಂಗಳೂರು/ಬೆಂಗಳೂರು: ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿರುವುದು ಗೀತಾ ಶಿವರಾಜ್ ಕುಮಾರ್ ಗೆ ತಡೆಯಲಾಗದ ಸಂಕಟವನ್ನು ತಂದಿಟ್ಟಿತ್ತು. ಇದರ ನಡುವೆ ಗೀತಾ ಶಿವರಾಜ್ ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಶಿವರಾಜ್ ಕುಮಾರ್ ಅವರು ಕ್ಯನ್ಸಾರ್ ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸುದ್ದಿ ಆದರೆ, ಮತ್ತೊಂದು ದುಃಖದ ಸುದ್ದಿಯೂ ಸಿಕ್ಕಿದೆ. ಈ ಬಗ್ಗೆ ಗೀತಾ ಅವರು ತಮ್ಮ ದುಃಖದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನಂದರೆ ಅವರು ಸಾಕಿದ ಪ್ರೀತಿಯ ಶ್ವಾನ ನಿಧನ ಹೊಂದಿದೆ. ಈ ಬಗ್ಗೆ ಗೀತಾ ಅವರು ಪೋಸ್ಟ್ ಹಾಕಿದ್ದಾರೆ.
ನಮ್ಮ ಮನೆಯಲ್ಲಿ ಐದು ಜನರಿಲ್ಲ, ಆರು ಜನರಿದ್ದೇವೆ. ಪ್ರೀತಿಯ ನೀಮೋವನ್ನು ನಾವು ಮನೆಯ ಸದಸ್ಯನನ್ನಾಗಿ ಪರಿಗಣಿಸಿದ್ದೆವು. ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ನೀಮೋ ದೇವರ ಹತ್ತಿರ ಹೋಗಿದ್ದಾನೆ. ಅವನ ನಿಸ್ವಾರ್ಥ ಪ್ರೀತಿಯನ್ನು ಯಾರಿಂದಲೂ ಕೂಡ ತುಂಬಲು ಸಾಧ್ಯವಿಲ್ಲ. ನಾವು ಅಮೆರಿಕಾಗೆ ಬಂದ ಮೇಲೆ ಅವನು ಹೊರಡಬೇಕು ಎಂದು ನಿರ್ಧರಿಸಿದ್ದ ಎನಿಸುತ್ತೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.
ಅವನು ಹೋಗಿರುವುದನ್ನು ನಾನು ಕಣ್ಣಿಂದ ನೋಡಲಿಲ್ಲ. ನೋಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನು ಕೂಡ ಅವು ಜೊತೆಗೆ ತೆಗೆದುಕೊಂಡು ಹೋಗುತ್ತವೆಯಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ ಅವರು. ಈ ಮೂಲಕ ಶಿವರಾಜ್ ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಬರೆದಿರುವ ಸುದೀರ್ಘ ಪತ್ರದಲ್ಲಿ ನಿಮೋ ಅವರೊಂದಿಗೆ ಹೇಗಿದ್ದ. ಎಷ್ಟು ಹಚ್ಚಿಕೊಂಡಿದ್ದ ಎಂಬುದರ ನೆನಪುಗಳೊಂದಿಗೆ ಸಂಪೂರ್ಣವಾಗಿ ಅಕ್ಷರರೂಪ ಕೊಟ್ಟಿದ್ದಾರೆ.
ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಬಳಿಕ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ವಿಚಾರ ಮುನ್ನಲೆಗೆ ಬಂದಿದೆ. ಚಿತ್ರ ನಿರ್ಮಾಪಕರೇ ಇದೊಂದು ಸುಳ್ಳಿನಿಂದ ತುಂಬಿದ್ದ ಸಿನೆಮಾ ಆಗಿತ್ತು ಅಂತ ಒಪ್ಪಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ವೀರ್ ಸಾಂಘ್ವಿ ಅವರು ಮಾಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ನಿರ್ಮಾಪಕ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
2019 ರ ರಾಜಕೀಯ ಸಿನೆಮಾವಾದ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿಂಗ್ ಅವರ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಆತ್ಮಚರಿತ್ರೆ ಆಧರಿಸಿ ನಿರ್ಮಿಸಲಾಗಿತ್ತು. ಆದ್ರೆ “ಇದುವೆರೆಗೆ ಮಾಡಿದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ” ಹೀಗಂತ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರಕರ್ತ ಸಾಂಘ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಮನಮೋಹನ್ ಸಿಂಗ್ ಅವರ ಬಗ್ಗೆ ಹೇಳಲಾದ ಸುಳ್ಳುಗಳನ್ನು ನೀವು ನೆನಪಿಸಿಕೊಳ್ಳಬೇಕಾದರೆ ನೀವು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅನ್ನು ಮತ್ತೆ ನೋಡಬೇಕು. ಇದು ಹಿಂದೆಂದೂ ತಯಾರಾದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದ್ದು, ಒಳ್ಳೆಯ ಮನುಷ್ಯನ ಹೆಸರನ್ನು ಹಾಳುಮಾಡಲು ಮಾಧ್ಯಮವನ್ನು ಹೇಗೆ ಬಳಸಲಾಯಿತು ಎಂಬುದಕ್ಕೆ ಉದಾಹರಣೆಯಾಗಿದೆ.” ಅಂತ ಸಾಂಘ್ವಿ X ನಲ್ಲಿ ಬರೆದಿದ್ದಾರೆ.
ನಿರ್ಮಾಪಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ಕ್ರಿಯೇಟಿವ್ ಡೈರೆಕ್ಟರ್ ಹನ್ಸಲ್ ಮೆಹ್ತಾ ಕೂಡಾ ಈ ಪೋಸ್ಟ್ ಹಂಚಿಕೊಂಡು 100% ಅಂತ ಸಮರ್ಥಿಸಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಅವರು “ಈ ವಿಚಾರಕ್ಕೆ ಎಲ್ಲರಿಗಿಂತಲೂ ಹೆಚ್ಚಾಗಿ ನಾನು ಅವರಿಗೆ ತಲೆಬಾಗುತ್ತೇನೆ. ಬಲವಂತ ಅಥವಾ ಉದ್ದೇಶ ಏನೇ ಇರಲಿ ತುಂಬಾ ಭಾರವಾದ ಹೃದಯದಿಂದ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಸರ್, ಅರ್ಥಶಾಸ್ತ್ರಜ್ಞ, ಹಣಕಾಸು ಮಂತ್ರಿ, ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಧನೆಗಳ ಜೊತೆಗೆ ನೀವೊಬ್ಬ ಅಪರೂಪದ ಸಂಭಾವಿತ ವ್ಯಕ್ತಿ” ಅಂತ ಬರೆದುಕೊಂಡಿದ್ದಾರೆ. ಮಾಜಿ ಪ್ರಧಾನಿಯ ಅಗಲುವಿಕೆಗೆ ಸಂತಾಪ ಸೂಚಿಸಿ “ರಾಷ್ಟ್ರವು ಅವರಲ್ಲಿ ಕ್ಷಮೆಯಾಚಿಸಬೇಕು”ಎಂದಿದ್ದಾರೆ.
ಈ ಪೋಸ್ಟ್ ಸಿನೆಮಾದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸಿದ್ದ ನಟ ಅನುಪಮ್ ಖೇರ್ ಅವರನ್ನು ಕೆರಳಿಸಿದೆ. ಚಲನಚಿತ್ರ ನಿರ್ಮಾಪಕರನ್ನು ‘ಕಪಟಿ’ ಎಂದು ಕರೆದು “ಇದರಲ್ಲಿ ಸಾಂಘ್ವಿ ಕಪಟವಾದಿಯಲ್ಲ. ಸಿನೆಮಾ ಇಷ್ಟ ಪಡದೆ ಇರುವ ಸ್ವಾತಂತ್ರ್ಯ ಅವರಿಗೆ ಇದೆ. ಆದ್ರೆ ಮೆಹ್ತಾ ಅವರು ದಿ ಅಕ್ಸಿಡೆಂಟಲ್ ಪಿಎಂ ಸಿನಿಮಾದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದರು. ಇಂಗ್ಲೆಂಡಿನಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣದಲ್ಲಿ ಹಾಜರಿದ್ದರು. ಸಿನೆಮಾಗೆ ಸೃಜನಶೀಲ ಇನ್‌ಪುಟ್ ಕೊಟ್ಟು ಸಂಭಾವನೆ ಪಡೆದುಕೊಂಡಿರಬೇಕು” ಎಂದು ಬರೆದಿದ್ದಾರೆ. ಸಾಂಘ್ವಿ ಅವರ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದರೂ ಕಲಾವಿದರು ಇಂತಹ ತಪ್ಪು ಹಾಗೂ ವ್ಯತ್ಯಾಸ ಇರುವ ಕೆಲಸ ಮಾಡಲು ಸಮರ್ಥರು ಅಂತ ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಮೆಹ್ತಾ ಹಾಗೂ ಅನುಪಮ್ ಖೇರ್ ಸಮರ ನಡೆದಿದ್ದು, ಸಾಕಷ್ಟು ಪ್ರತಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾದಲ್ಲಿ ಅನುಪಮ್ ಖೇರ್ ಮನಮೋಹನ್ ಸಿಂಗ್ ಆಗಿ, ಅಕ್ಷಯ್ ಕುಮಾರ್ ಬಾರು ಅವರ ಪಾತ್ರದಲ್ಲಿ ನಟಿಸಿದ್ದಾರೆ. ಮೆಹ್ತಾ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಶುರುವಾಗಿ ಎರಡು ವಾರ ಕಳೆದಿತ್ತು. ಅಕ್ಟೋಬರ್ 13ರಂದು ಟ್ವೀಟ್ ಮಾಡಿದ ಕಿಚ್ಚ ಇದೇ ನನ್ನ ಕೊನೆಯ ಸೀಸನ್ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಬಿಗ್ ಬಾಸ್ ಶೋಗೆ ಕಿಚ್ಚ ಬಂದ್ರೆನೇ ಒಂದು ಕಳೆ ಬರೋದು. ಬಿಗ್ ಬಾಸ್ ಕಿಕ್ ಹೆಚ್ಚಿಸೋದೆ ಬಾದ್ ಶಾ ಕಿಚ್ಚ ಸುದೀಪ್. ಆದರೆ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಭಾವುಕ ಪೋಸ್ಟ್ ಒಂದನ್ನ ಶೇರ್ ಮಾಡಿದ್ರು. ಈ ಸುದ್ದಿ ಬಿಗ್ ಬಾಸ್ ಫ್ಯಾನ್ಸ್ ಗೆ ತೀವ್ರ ಬೇಸರ ಉಂಟು ಮಾಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಹೊಸ ಸುದ್ದಿಯೊಂದು ಹೊರಬಂದಿದೆ.
ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರೋ ಕಿಚ್ಚ, ಶೂಟಿಂಗ್ ಹಾಗೂ ಶೋನ ಮಾಡೋದು ತುಂಬಾ ಸ್ಟ್ರೇಸ್ ಆಗ್ತಿದೆ. ಸಾಕು ಅನ್ನಿಸಿದ ತಕ್ಷಣ ಟ್ವೀಟ್ ಮಾಡಿದೆ. ಬೆಳಿಗ್ಗೆ ಮತ್ತೇ ಮೂಡ್ ಚೆಂಜ್ ಆಗಬಾರದು ಅಂತ ರಾತ್ರಿನೇ ಅನೌನ್ಸ್ ಮಾಡಿದೆ. ಆದ್ರೆ ಕಲರ್ಸ್ ಕನ್ನಡ ಇನ್ನೂ ಅದನ್ನ ಒಪ್ಪಿಕೊಂಡಿಲ್ಲ. ನೋಡೋಣ, ನನಗೆ ಬರ್ಬೇಕು ಅನ್ಸಿದ್ರೇ ಟ್ವೀಟ್ ಮಾಡ್ತೀನಿ, ಹಿಂಜರಿಯಲ್ಲ. ಖಂಡಿತ ಮತ್ತೇ ಬರ್ತಿನಿ ಎಂದು ಉತ್ತರಿಸಿದ್ದಾರೆ ಕಿಚ್ಚ ಸುದೀಪ್.
ಈ ಮಾತುಗಳಿಂದ ಸುದೀಪ್ ಮತ್ತೆ ಬಿಗ್ ಬಾಸ್ ಶೋ ನಡೆಸಿಕೊಡಬಹುದು ಎಂಬ ನೀರಿಕ್ಷೆ ಬಿಗ್ ಬಾಸ್ ಆಭಿಮಾನಿಗಳಿಗೆ ಮೂಡಿದೆ. ಕಲರ್ಸ್ ಕನ್ನಡ ಚಾನೆಲ್ ಕನ್ವಿನ್ಸ್ ಮಾಡಿದರೆ ಕಿಚ್ಚ ಶೋಗೆ ಮರಳುವ ಸಾಧ್ಯತೆ ಇದೆ.
ಮಂಗಳೂರು/ಬೆಂಗಳೂರು: ಕನ್ನಡದ ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಸೀರಿಯಲ್ನಲ್ಲಿ ನಟಿಸಿದ ನಟ ಚರಿತ್ ಬಾಳಪ್ಪ ಪರಿಚಯವಿದ್ದ ಗೆಳತಿಯ ಮೇಲೆ ಲೈಂ*ಗಿಕ ದೌ*ರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು ಆರ್ಆರ್ ನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.
ಚರಿತ್ ಪ್ರೀತಿಸುತ್ತೇನೆ ಎಂದು ಹೇಳಿ ದೈ*ಹಿಕ ಸಂ*ಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಗೆಳತಿ ಆರೋಪ ಮಾಡಿದ್ದಾಳೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿ*ರುಕುಳ ನೀಡಿದ್ದು ಮಾತ್ರವಲ್ಲದೇ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾ*ಸಗಿ ಫೋಟೋ, ವಿ*ಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಚರಿತ್ ವಿರುದ್ಧ ಲೈಂ*ಗಿಕ ದೌ*ರ್ಜನ್ಯ, ಹ*ಲ್ಲೆ, ಕೊ*ಲೆ ಬೆ*ದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ಚರಿತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಚರಿತ್ ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ. ಡಿವೋರ್ಸ್ ನಂತರವೂ ಅವರು ಮಾಜಿ ಪತ್ನಿಯ ಜೊತೆ ಕಿರಿಕ್ ಮಾಡಿಕೊಂಡಿದ್ದರು. 2017ರಲ್ಲಿ ನಟಿ ಮಂಜು ಜೊತೆ ವಿವಾಹ ಆಗಿತ್ತು. 2022ರ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಅವರಿಬ್ಬರು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಕೋರ್ಟ್ ಆಜ್ಞೆಯಂತೆ ಡೈವರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂದು ಚರಿತ್ ಬಾಳಪ್ಪ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.