Monday, January 24, 2022

 ಬೇಟೆಗೆಂದು ತೆರಳಿದ್ದ ವ್ಯಕ್ತಿ ಸಂಗಡಿಗನ ಗುಂಡೇಟಿಗೆ ಬಲಿ..!

 ಬೇಟೆಗೆಂದು ತೆರಳಿದ್ದ ವ್ಯಕ್ತಿ ಸಂಗಡಿಗನ ಗುಂಡೇಟಿಗೆ ಬಲಿ..!

ಮಡಿಕೇರಿ : ಬೇಟೆಗೆಂದು ತೆರಳಿದ್ದ ವ್ಯಕ್ತಿಯೊಬ್ಬ ಸಂಗಡಿಗನ ಗುಂಡೇಟಿಗೆ ಬಲಿಯಾದ ಘಟನೆ ಕೊಡಗು ಜಿಲ್ಲೆಯ ಮಕ್ಕಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ನಡೆದಿದೆ. ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿ ಶಿವ ಬೋಪಣ್ಣ ಎಂದು ಗುರುತ್ತಿಸಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮಡಿಕೇರಿ ತಾಲೂಕು ಲಾರಿ ಮಾಲಕರ ಸಂಘದ ಅಧ್ಯಕ್ಷ ಶಿವ ಬೋಪಣ್ಣ ಗುಂಡೇಟಿನಿಂದ ಮೃತಪಟ್ಟವರು.

ಜೊತೆಯಲ್ಲಿದ್ದ ಶರಣ್ ಎಂಬವರು ಗಾಯಗೊಂಡಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರು ನಿನ್ನೆ ರಾತ್ರಿ ಬೇಟೆಗೆಂದು ತೆರಳಿದ್ದರು ಈ ಸಂದರ್ಭ ಅಕಸ್ಮಿಕವಾಗಿ ಕೋವಿಯಿಂದ ಗುಂಡು ಸಿಡಿದಿದೆ.

ಪರಿಣಾಮ ಗುಂಡೇಟಿನಿಂದ ಶಿವ ಬೋಪಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿ ಮಡಿಕೇರಿ ನಿವಾಸಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದು ಆತನ ಬಂಧನವಾಗಿದೆ.

Hot Topics

“ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ”

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು...

ಮುಡಿಪು: ದ್ವಿಚಕ್ರ ವಾಹನಕ್ಕೆ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಸಾವಿರ ಟ್ರಾಫಿಕ್ ಫೈನ್-ಬೆಚ್ಚಿಬಿದ್ದ ಮಾಲಕಿ

ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ‌ ನಡೆದಿದೆ.ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್...

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...