FILM
ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಚಿತ್ರರಂಗದ ದಿಗ್ಗಜ ನಟರು..! ಸಾಥ್ ನೀಡಿದ ಕೆಜಿಎಫ್ ಡೈರೆಕ್ಟರ್
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಕೃಷ್ಣ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇವರ ಜೊತೆಗೆ ಈಗಾಗಲೇ ಕಾಂತಾರ ಸಿನೆಮಾದ ಮೂಲಕ ದೇಶದೆಲ್ಲೆಡೆ ಸಂಚಲನವನ್ನು ಮೂಡಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ, ಉಗ್ರಂ, ಕೆಜಿಎಫ್ ಸಿನೆಮಾದ ಮೂಲಕ ಪ್ರಸಿದ್ಧಿ ಪಡೆದಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
VIDEO: ಬಿಗ್‌ಬಾಸ್ ನಿರೂಪಣೆಯ ಬಗ್ಗೆ ಮೌನ ಮುರಿದ ಸುದೀಪ್..!’ಮೂ ಆನ್ ಅಗಲೇ ಬೇಕು’ ಅಂದಿದ್ಯಾಕೆ ಕಿಚ್ಚ.!?
ಶ್ರೀ ಕೃಷ್ಣನ ಮುಖ್ಯಪ್ರಾಣ, ಗರುಡ ದೇವರ ದರ್ಶನವನ್ನು ಮಾಡಿದ್ದಾರೆ. ದಿಗ್ಗಜ ನಟರು ಶ್ರಾವಣ ಮಾಸದ ಶನಿವಾರದಂದು ಶ್ರೀ ಕೃಷ್ಣನ ದರ್ಶನ ಪಡೆದಿರುವುದು ವಿಶೇಷವಾಗಿದೆ.
FILM
ನಡುರಸ್ತೇಲಿ ನಿಂತ ಕಾರಲ್ಲೇ ಡ್ರೆಸ್ ಚೇಂಜ್ ಮಾಡುತ್ತಿದ್ದ ಈ ನಟಿ…ಯಾರು ಗೊತ್ತಾ?
ನಮಗೆಲ್ಲಾ ತಿಳಿದಿರುವಂತೆ, ಕಹಾನಿ 2012 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ಪರಂಬ್ರತ ಚಟರ್ಜಿ, ಶಾಶ್ವತ ಚಟರ್ಜಿ, ಇಂದ್ರನೀಲ್ ಸೆಂಗುಪ್ತ, ಧೃತಿಮಾನ್ ಚಟರ್ಜಿ, ದರ್ಶನ್ ಜರಿವಾಲಾ ಮತ್ತು ಇತರರು ನಟಿಸಿದ್ದರು. ಕಾಣೆಯಾದ ಗಂಡನನ್ನು ಹುಡುಕಲು ಲಂಡನ್‌ನಿಂದ ಕೋಲ್ಕತ್ತಾಗೆ ಪ್ರಯಾಣಿಸುವ ವಿದ್ಯಾ ಬಾಗ್ಚಿ ಎಂಬ ಗರ್ಭಿಣಿ ಮಹಿಳೆಯನ್ನು ಕಥೆಯನ್ನು ಇದು ಹೊಂದಿದೆ. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್ ಮಾತ್ರ ಬಹಳ ವಿಭಿನ್ನವಾಗಿ ಚಿತ್ರಿಸಲಾಗಿತ್ತು.
ಕಹಾನಿ ಸ್ಲೀಪರ್ ಹಿಟ್ ಆಗಿ ಹೊರಹೊಮ್ಮಿ 12 ವರ್ಷಗಳಾಗಿವೆ. ಆದರೆ, ಸುಜಯ್ ಘೋಷ್ ನಿರ್ದೇಶನದ ಈ ಸಿನಿಮಾದ ಇನ್‌ಸೈಡ್ ಸ್ಟೋರಿಗಳು ಇಂದಿಗೂ ಈ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ. ಕೋಲ್ಕತ್ತಾದ ದುರ್ಗಾಪೂಜೆಯ ಸಂಭ್ರವವನ್ನು ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗಿತ್ತು. ಅದರೊಂದಿಗೆ ಸಿನಿಮಾವನ್ನು ಗೆರಿಲ್ಲಾ ಫಿಲ್ಮ್‌ಮೇಕಿಂಗ್ ಮಾಡಲಾಗಿತ್ತು. ಅದೇನೇ ಇದ್ದರೂ ಕಹಾನಿ ಸಿನಿಮಾವನ್ನು ಶೂಟಿಂಗ್ ಮಾಡೋದು ನಿರ್ದೇಶಕರಿಗೆ ಮಾತ್ರವಲ್ಲ ನಟರಿಗೂ ಕಷ್ಟವಾಗಿತ್ತು.
“ಈ ಸಿನಿಮಾಗಾಗಿ ದೊಡ್ಡ ಬಜೆಟ್ ಇದ್ದಿರಲಿಲ್ಲ. ವ್ಯಾನಿಟಿ ವ್ಯಾನ್ ಸೌಲಭ್ಯವೂ ಇರಲಿಲ್ಲ. ನಿಸಲ್ಲಿಸುವ ಹಾಗೆಯೂ ಇರಲಿಲ್ಲ. ಹಾಗಾಗಿ ಪ್ರತಿ ಬಾರಿ ಅವರು ಬಟ್ಟೆ ಬದಲಾಯಿಸಬೇಕಾದಾಗ, ಅವರ ಇನ್ನೋವಾ ಕಾರ್‌ಗೆ ಕಪ್ಪು ಬಟ್ಟೆ ಹೊದಿಸಿ, ನಡು ರಸ್ತೆಯಲ್ಲಿ ನಿಂತಿದ್ದ ಕಾರ್‌ನಲ್ಲಿಯೇ ಬಟ್ಟೆ ಬಸಲಾಯಿಸಿ, ಶೂಟಿಂಗ್‌ಗೆ ಬರುತ್ತಿದ್ದರು” ಎಂದು ನಿರ್ದೇಶಕರು ಹೇಳಿದ್ದಾರೆ.
“ಅಲಾದಿನ್‌ನ ವೈಫಲ್ಯದ ನಂತರ, ವಿದ್ಯಾ ಅವರು ಕಹಾನಿ ಬೇಡ ಎಂದು ಸುಲಭವಾಗಿ ಹೇಳಬಹುದಿತ್ತು. ಆದರೆ, ಅವರು ಅದಾಗಲೇ ಮಾತು ಕೊಟ್ಟಾಗಿತ್ತು. ಅಮಿತಾಬ್ ಬಚ್ಚನ್, ಶಾರುಖ್ ಖಾನ್ ರೀತಿಯಲ್ಲಿ ಕೊಟ್ಟ ಮಾತನ್ನು ಪಾಲಿಸುವಂತ ಕಲಾವಿದೆ ವಿದ್ಯಾ ಬಾಲನ್” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
BIG BOSS
ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸ್ವರ್ಗ ನಿವಾಸಿಗಳು ಮಾತ್ರ ಭಾಗಿ ಆಗಲು ಅವಕಾಶ ಇತ್ತು. 10 ಮಂದಿಯಲ್ಲಿ ಆರು ಜನರು ಮಾತ್ರ ಕ್ಯಾಪ್ಟನ್ಸಿ ಟಾಸ್ಕಲ್ಲಿ ಇರಬಹುದು ಎಂದು ಬಿಗ್ ಬಾಸ್ ಆದೇಶ ಕೊಟ್ಟರು. ಇಷ್ಟೇ ಅಲ್ಲ, ಆರು ಮಂದಿಯನ್ನು ಸ್ವರ್ಗ ನಿವಾಸಿಗಳ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು.
ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದರು. ಇದು ಜಗದೀಶ್ ಅವರ ಕೋಪಕ್ಕೆ ಕಾರಣ ಆಯಿತು. ಅವರು ನೇರವಾಗಿ ಸ್ಪರ್ಧಿಗಳ ವಿರುದ್ಧ ಹರಿಹಾಯ್ದರು. ಅದರಲ್ಲೂ ಈ ಐಡಿಯಾ ನೀಡಿದ ಉಗ್ರಂ ಮಂಜು ವಿರುದ್ಧ ಸಿಡಿದೆದ್ದರು. ಮಾತು ಮಿತಿ ಮೀರುತ್ತಿತ್ತು. ‘ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ’ ಎಂದು ಜಗದೀಶ್ ಹೇಳಲು ಆರಂಭಿಸಿದರು.
ಇದಕ್ಕೆ ಮಂಜು ಹೆಚ್ಚಿನ ಉತ್ತರ ಕೊಡೋಕೆ ಹೋಗಿಲ್ಲ.’ಬೋ..’ `ಬೋ..’ ಎಂದಷ್ಟೇ ಹೇಳಿದರು.’ಬೋ ಪ್ಯಾಂಟೀಸ್ ಎಲ್ಲ ನೋಡಿದೀನಿ.ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದು ಜಗದೀಶ್ ಹೇಳಿದ್ದಾರೆ. ಇದು ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ವೇಳೆ ನಿಜವಗಾಲೂ ಇನ್ಸ್‌ಕ್ಯೂರ್ ಫೀಲ್ ಆಗ್ತಿದೆ ಎಂದು ಭವ್ಯಾ ಗೌಡ ಹೇಳಿದ್ದಾರೆ.
BIG BOSS
BBK11: ಧನರಾಜ್ ಆಚಾರ್ಯ ಡೈಲಾಗ್ಗೆ ಬಿಗ್‌ಬಾಸ್ ಮನೆಮಂದಿ ಫುಲ್ ಖುಷ್
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಬಂದ ಮೊದಲ ದಿನವೇ ಜಗಳ ಮಾಡಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿ ನಡೆದ ಗಲಾಟೆ ರೀತಿಯಲ್ಲೇ ಬಿಗ್‌ಬಾಸ್ ಸ್ಪರ್ಧಿಗಳು ಆಡುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ ವಾದ ವಿವಾದ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಇದರ ಮಧ್ಯೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಂಗ್ ಅನ್ನು ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಹೌದು, ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಧನರಾಜ್ ಆಚಾರ್ಯ ಕೊಂಚ ಡಲ್ ಆಗಿದ್ದರು. ಬಳಿಕ ಬಿಗ್‌ಬಾಸ್ ಧೈರ್ಯ ತುಂಬಿದ ಬಳಿಕ ಧನರಾಜ್ ಅವರು ಮತ್ತೆ ಟ್ರಾಕ್ಗೆ ಬಂದಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ನಗುವೆ ಇಲ್ಲದಂತೆ ಆಗಿಬಿಟ್ಟಿದೆ. ಏಕೆಂದರೆ ಒಂದೇ ವಾರಕ್ಕೆ ಬಿಗ್‌ಬಾಸ್ ಮನೆಯಲ್ಲಿ ಗಲಾಟೆ, ಮನಸ್ಥಾಪ ಹೀಗೆ ಸಾಕಷ್ಟು ವಿಚಾರಗಳಿಂದ ಸ್ಪರ್ಧಿಗಳು ಬೇಸರ ಆಗಿದ್ದರು. ಇದೀಗ ಧನರಾಜ್ ಅವರ ಕಾಮಿಡಿಗೆ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಮುಂಗಾರು ಮಳೆ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫೇಮಸ್ ಡೈಲಾಗ್ ಅನ್ನು ಬಿಗ್‌ಬಾಸ್ ಮನೆಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ.
- BIG BOSS6 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS6 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- LATEST NEWS5 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- BIG BOSS6 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
Pingback: ಕೇರಳದಲ್ಲಿ 'ಮೀಟೂ' ಗದ್ದಲ..! ಧ್ವನಿ ಎತ್ತಿದ ಟಾಲಿವುಡ್ನ ಸಮಂತಾ..!! - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಶಾಪಿಂಗ್ ವೇಳೆ ಕುಸಿದು ಬಿದ್ದ ಡಿ.ವಿ ಪತ್ನಿ..! ಆಸ್ಪತ್ರೆ ದಾಖಲು - NAMMAKUDLA NEWS - ನಮ್ಮಕುಡ್ಲ ನ್ಯೂಸ್