Connect with us

LATEST NEWS

ಮಾಜಿ ಕ್ರಿಕೆಟಿಗನಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ!

Published

on

ಮಂಗಳೂರು/ ಮುಂಬೈ : ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಮೂತ್ರ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಅವರು ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ಒಳಗಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಆಕೃತಿ ಆಸ್ಪತ್ರೆಯ ಡಾ. ವಿವೇಕ್ ತ್ರಿವೇದಿ, ಕಾಂಬ್ಳಿ ಅವರಿಗೆ ಜೀವನ ಪರ್ಯಂತ ಚಿಕಿತ್ಸೆ ಉಚಿತವಾಗಿರುತ್ತದೆ ಎಂದು ಘೋಷಿಸಿದ್ದಾರೆ. ಆಸ್ಪತ್ರೆಯ ಉಸ್ತುವಾರಿ ಎಸ್.ಸಿಂಗ್ ಉಚಿತ ಚಿಕಿತ್ಸೆ ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಕಾಂಬ್ಳಿ ಚಿಕಿತ್ಸೆ ಬಗ್ಗೆ ಯಾರೂ ಯೋಚಿಸುವಂತಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಒಂದು ಮೊಟ್ಟೆಯ ಕಥೆ ; 1 ತತ್ತಿಯಿಂದ 2 ಕೋಳಿಮರಿ ಜನನ

ಮೂತ್ರದ ಸೋಂಕು ಮತ್ತು ಕಾಲು ಸೆಳೆತದಿಂದ ಕಾಂಬ್ಳಿ ಆಸ್ಪತ್ರೆಗೆ ದಾಖಲಾದ ನಂತರ, ಆಸ್ಪತ್ರೆಯ ಸಿಬ್ಬಂದಿ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಇಂದು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿದ್ದಾರೆ. ಸದ್ಯ ಕಾಂಬ್ಳಿ ಆರೋಗ್ಯ ಸ್ಥಿರವಾಗಿದೆ. ಆದರೆ, ಕಾಂಬ್ಳಿ ಅವರು ಐಸಿಯುನಲ್ಲಿ ಮೇಲ್ವಿಚಾರಣೆಯಲ್ಲಿರಬೇಕು ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿರುವ ಬಗ್ಗೆ ವರದಿಯಾಗಿದೆ.

DAKSHINA KANNADA

ಸಂಪಾಜೆ ಬಳಿ ಭೀಕರ ಅಪಘಾತ : ಇಬ್ಬರನ್ನು ಬಲಿ ಪಡೆದ ಕಂಟೈನರ್..!

Published

on

ಮಂಗಳೂರು :  ಸಂಪಾಜೆಯ ಚೆಡಾವು ಎಂಬಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಲಿಯಾಗಿದ್ದಾರೆ. ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಂಟೈನರ್ ಹಾಗೂ ಸುಳ್ಯಕ್ಕೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಎಂ. ಚಿದಾನಂದ ಆಚಾರ್ಯ ಎಂಬವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಅವರ ಜೊತೆಗೆ ಸಹ ಸವಾರೆಯಾಗಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡಾ ಮೃತ ಪಟ್ಟಿದ್ದಾರೆ. ಮೃತರು ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದುಕೇರಿ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ಕಂಟೈನರ್ ರಸ್ತೆ ಬಿಟ್ಟು ಕೆಲ ಮೀಟರ್ ಗಳಷ್ಟು ದೂರ ಕಾಡಿನ ಒಳಗೆ ಚಲಿಸಿದೆ. ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ತಡೆ ಬೇಲಿ ಕೂಡಾ ಮುರಿದು ಬಿದ್ದಿದ್ದು, ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಈ ಅಪಘಾತ ನಡೆದಿದ್ದು,  ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಒಂದು ಮೊಟ್ಟೆಯ ಕಥೆ ; 1 ತತ್ತಿಯಿಂದ 2 ಕೋಳಿಮರಿ ಜನನ

Published

on

ಮಂಗಳೂರು/ತೆಲಂಗಾಣ : ಮಹಿಳೆಯೊಬ್ಬಳು ಒಂದು ಕೋಳಿಯನ್ನು ಪ್ರೀತಿಯಿಂದ ಸಾಕಿದ್ದು, ಇತ್ತೀಚೆಗೆ ಅದರ ಮೊಟ್ಟೆ ಒಡೆದಿದೆ. ಆದರೆ ಅಚ್ಚರಿ ಏನೆಂದರೆ, ನಿನ್ನೆ (ಡಿ23) ಒಂದು ಮೊಟ್ಟೆಯಿಂದ ಎರಡು ಕೋಳಿ ಜನ್ಮ ಪಡೆದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಬೋತ್ ಮಂಡಲದಲ್ಲಿ ನಡೆದಿದೆ. ಇದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದು, ಏನು ವಿಷಯ ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

ಊಹೆಗೂ ಮೀರಿದಂತೆ ಪ್ರಕೃತಿಯಲ್ಲಿ ಹಲವಾರು ರೀತಿಯಲ್ಲಿ ಹೊಸ ವಿಷಯಗಳು ನಡೆಯುತ್ತಿರುತ್ತವೆ. ಅಂತೆಯೇ ಒಂದು ಮೊಟ್ಟೆಯಿಂದ ಎರಡು ಮರಿಗಳು ಬಂದ ಘಟನೆ ತೋಫಿಕ್​​ ಎನ್ನುವ ಮಹಿಳೆಯ ಮನೆಯಲ್ಲಿ ನಡೆದಿದೆ. ಈಕೆಗೆ ಕೋಳಿ ಸಾಕುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಹಲವು ಕೋಳಿಯನ್ನು ಸಾಕುತ್ತಿದ್ದರು. ಅವುಗಳಲ್ಲಿ ಒಂದು ಇತ್ತೀಚೆಗೆ ಮೊಟ್ಟೆಯೊಡೆದಿದೆ. ಆ ಮೊಟ್ಟೆಯಿಂದ ಒಂದಲ್ಲ, ಎರಡು ಮರಿಗಳು ಹೊರಬಂದಿರುವುದು ಗಮನಕ್ಕೆ ಬಂದಿದೆ.

ಇದೀಗ ಆ ಅವಳಿ ಮರಿಗಳನ್ನು ನೋಡಲು ಜನರು ಬರುತ್ತಿದ್ದಾರೆ. ‘ಇಂತಹ ಘಟನೆಯನ್ನು ನಾವು ಕೇಳಿಲ್ಲ ಅಥವಾ ನೋಡಿಲ್ಲ’ ಎಂದು ಬಂದವರು ಹೇಳುತ್ತಿದ್ದಾರೆ. ಈ ಫೋಟೋಗಳನ್ನು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಚಿತ್ರ ಕುರಿತು ಸ್ಥಳೀಯ ಪಶುವೈದ್ಯಾಧಿಕಾರಿ ಸುಶೀಲ್ ಕುಮಾರ್ ಮಾತನಾಡಿ, ‘ಆನುವಂಶಿಕ ದೋಷದಿಂದ ಒಂದು ಮೊಟ್ಟೆಯಿಂದ 2 ಶಿಶುಗಳು ಜನಿಸುವ ಸಾಧ್ಯತೆ ಇದೆ. ಇಂತಹವುಗಳು ಬಹಳ ಅಪರೂಪ’ ಎಂದಿದ್ದಾರೆ.

Continue Reading

LATEST NEWS

ಹೊಸ ವರ್ಷಾಚರಣೆಗೆ ತಡರಾತ್ರಿವರೆಗೆ ಪಬ್, ಬಾರ್, ಹೊಟೇಲ್ ತೆರೆಯಲು ಅವಕಾಶ ನೀಡುವಂತೆ ಮನವಿ

Published

on

ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಪಬ್, ಬಾರ್, ರೆಸ್ಟೋರೆಂಟ್ಗಳನ್ನು ತಡರಾತ್ರಿ 2 ಗಂಟೆವರೆಗೆ ತೆರೆಯುವಂತೆ ಮಾಲೀಕರು ಮನವಿ ಮಾಡಿದ್ದಾರೆ.

ವರ್ಷಾಚರಣೆ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದ್ದು, ಪಬ್, ಬಾರ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದು, ಡಿ.31ರ ರಾತ್ರಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ.

ಅಂದಾಜು 1500 ಕೋಟಿಗೂ ಅಧಿಕ ವ್ಯಾಪಾರವಾಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಪ್ರಸ್ತುತ 12 ಗಂಟೆವರೆಗೆ ಮಾತ್ರ ಪಬ್ ಬಾರ್‌ ಗಳನ್ನು ತೆರೆಯಲು ಅವಕಾಶ ನೀಡಿದ್ದು, ಹೊಸ ವರ್ಷಾಚರಣೆಯ ಹಿಂದಿನ ದಿನ 31ರ ರಾತ್ರಿ 2 ಗಂಟೆಯವರೆಗೂ ತೆರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಸಮಯ ನೀಡದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕಾಲಾವಕಾಶವನ್ನು ನೀಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.

Continue Reading

LATEST NEWS

Trending

Exit mobile version