Home ಕರ್ನಾಟಕ ವಾರ್ತೆ ಭಾಗ್ಯವ ಕಸಿದುಕೊಂಡ ಕೊರೊನಾ: ಬಳೆಗಾರರ ಬದುಕು ಚೂರು ಚೂರು...

ಭಾಗ್ಯವ ಕಸಿದುಕೊಂಡ ಕೊರೊನಾ: ಬಳೆಗಾರರ ಬದುಕು ಚೂರು ಚೂರು…

ಭಾಗ್ಯವ ಕಸಿದುಕೊಂಡ ಕೊರೊನಾ: ಬಳೆಗಾರರ ಬದುಕು ಚೂರು ಚೂರು

ಬಳ್ಳಾರಿ: ಭಾರತ ದೇಶವು ಸಂಪ್ರದಾಯ ಹಾಗೂ ಸಂಸ್ಕೃತಿಯ ಆಗರವಾಗಿದೆ. ಇದು ಅಸಂಖ್ಯಾತ ಜಾತಿ ಮತಗಳ ತವರೂರು.

ಇವೆಲ್ಲವುಗಳಿಂದಲೇ ಜೀವನ ಹಸನಾಗಿಸಿಕೊಂಡಿರುವ ಅಸಂಖ್ಯಾತ ಉಪ ಜಾತಿಗಳು, ತಮ್ಮ ಕಸುಬುಗಳಿಂದ ಮಾಡುವ ಕರ್ಮಗಳಿಂದಲೇ ಗುರುತಿಸಿಕೊಂಡಿರುವ ಅಸಂಖ್ಯಾತ ಕರ್ಮಿಯರು.

ಅಂತಹವರಲ್ಲಿ ಒಬ್ಬರು ಈ ಬಳೆಗಾರರು. ಬಳೆಗಾರರು ಭಾರತದ ಸಂಸ್ಕೃತಿಯ ಭಂಟರು ಎಂದರೆ ತಪ್ಪಾಗಲಾರದು.

ಕೊರೊನಾ ಲಾಕ್ ಡೌನ್ ಬಳೆಗಾರರ ಬದುಕಿನ ಭಾಗ್ಯವನ್ನೇ ಕಸಿದುಕೊಂಡಿದೆ. ಈ ಕುರಿತು ಬಳ್ಳಾರಿ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕು, ಶ್ರೀ ಕ್ಷೇತ್ರ ಹೊಸಕೇರಿ ಗ್ರಾಮದ ಬಳೆಗಾರ ಭೀಮಮ್ಮ.

“ಕೊರೊನಾ ಬಂದು ಬಳೆ ಮಾರಲು ಹಳ್ಳಿಗಳಿಗೆ ತಿರುಗೋದು ನಿಂತಾತಿ, ಮದುವೆ, ಜಾತ್ರಿ, ತೇರು, ಹಬ್ಬ, ಹರಿದಿನಗಳನ್ನು ಮಾಡಂಗಿಲ್ಲ. ನಾವು ಬಳೆಮಾರಾಕ ಎಲ್ಲಿಗೂ ಓಗಾಂಗಿಲ್ಲ.

ಬಸ್ಸು ನಿಲ್ಸ್ಯಾರ ಅಂಗಾಗಿ ಸುತ್ತಮುತ್ತಲ ಹಳ್ಳ್ಯಾರು ಬರುವಲ್ರು, ನಾವು ಬಳೆ ವತ್ತಗಂಡು ಓಗಾಂಗಿಲ್ಲ. ಅಂಗಾಗಿ ಬಳೆ ಮಾರಾಟ ಆಗವಲ್ದು” ಎಂದು ಲಾಕ್ ಡೌನ್ ಪರಿಣಾಮದ ಕುರಿತು ನೋವು ಹಂಚಿಕೊಂಡಿದ್ದಾರೆ ಬಳೆಗಾರ ಭೀಮಮ್ಮ.

“ಸೊಸೈಟ್ಯಾಗ ಅಕ್ಕಿಕೊಡುತ್ತಾರ ಆದ್ರೆ ಇನ್ ಉಳಿಕಿದ್ದು ಜೋಡಿಸಿಕೊಳ್ಳಾದ್ ಕಷ್ಟವಾಗ್ಯಾತಿ. ಅನಾರೋಗ್ಯ ಸೇರಿದಂತೆ ಹಲವು ಅನಿವಾರ್ಯ ಖರ್ಚುಗಳು ಹಾಗೂ ದಿಢೀರ್ ಖರ್ಚುಗಳಿಗೆ ಹಣವಿಲ್ಲದೇ ಸಾಲಾ ಸೂಲಾ ಮಾಡಬೇಕಾಗಿದೆ.

ದುಡಿಮೆ ಇಲ್ಲದೇ ಬದುಕು ನುಚ್ಚು ನೂರಾಗಿದೆ ಬಳೆಗಾರರ ಬದುಕು” ಅನ್ನುತ್ತಾರೆ ಭೀಮಮ್ಮ. ಮೂರು ತಿಂಗಳುಗಳಿಂದ ಜನರಿಗೆ ದುಡಿಮೆ ಇಲ್ಲದ ಕಾರಣ ಬಳೆ ಖರೀದಿ ಇಲ್ಲವಾಗಿದೆ.

ಹಾಗಾಗಿ ವ್ತಾಪಾರವಿಲ್ಲವಾಗಿದೆ ಎನ್ನುತ್ತಾರೆ ಬಳೆಗಾರರು. ‘ಸರ್ಕಾರ ಗ್ರಾಮೀಣ ಭಾಗದ ಬಳೆಗಾರರನ್ನು ಪರಿಹಾರ ನಿಧಿ ಪಲಾನುಭವಿಗಳೆಂದು ಘೋಷಿಸಬೇಕು.

ಈ ಮೂಲಕ ಗ್ರಾಮೀಣ ಭಾಗದ ಬಳೆಗಾರರ ಬದುಕಲ್ಲಿ ಭಾಗ್ಯೋದಯ ಮೂಡಿಸಬೇಕು’ ಎಂದು ಸರ್ಕಾರಕ್ಕೆ ‘ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದರೆ.

ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆಯ ಗ್ರಾಮೀಣ ಭಾಗದ ಬಳೆಗಾರರ ಪಟ್ಟಿಯನ್ನು ತಯಾರಿಸಿ, ಅವರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಮತ್ತು ಆರ್ಥಿಕ ನೆರವು ನೀಡಬೇಕು ಎಂದು ವೃಷಭೇಂದ್ರ ಒತ್ತಾಯಿಸಿದ್ದಾರೆ.

ಸ್ಥಳೀಯ ಆಡಳಿತಾಧಿಕಾರಿಗಳು, ತಾಲೂಕು, ಜಿಲ್ಲಾಧಿಕಾರಿಗಳು ಲಾಕ್ ಡೌನ್ ನಿಂದಾಗಿ ಕಂಗೆಟ್ಟಿರುವ ಗ್ರಾಮೀಣ ಭಾಗದ ಬಳೆಗಾರರ ಬದುಕನ್ನು ಹಸನು ಮಾಡುವ,

ಸೂಕ್ತ ಕ್ರಮಗಳನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಈ ಮೂಲಕ ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ಕೋರಿದ್ದಾರೆ.

ಬರಹ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

- Advertisment -

RECENT NEWS

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ ಮಂಗಳೂರು :  ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ದೇವರ ಗುಡ್ಡೆ ಬಳಿ ನಡೆದ ಎಕ್ಕಾರು ನಿವಾಸಿ ಕೀರ್ತನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ :ಜೂನ್ 25ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತಾ ಪೂರ್ವಬಾವಿ ಸಭೆಯು ಈ ದಿನ...

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು 

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರದ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಹಾಗೂ ಕೋಟ ಸಮುದಾಯ ಆಸ್ಪತ್ರೆಯನ್ನು ತಾಲೂಕು...

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...