LATEST NEWS
ಗೆಳೆಯನಿಗೆ ವಿಷ ಹಾಕಿ ಕೊಂದ ಗೆಳತಿಗೆ ಕೊನೆಗೂ ಗಲ್ಲುಶಿಕ್ಷೆ
Published
5 hours agoon
ಕೇರಳ : 2022ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಯುವಕ ಶರೋನ್ ಹ*ತ್ಯೆ ಕುರಿತು ಪ್ರಿಯತಮೆ ಗ್ರೀಷ್ಮಾಗೆ ಕೇರಳದ ನ್ಯಾಯಾಲಯ ಸೋಮವಾರ (ಜ.20) ಗಲ್ಲು ಶಿಕ್ಷೆಯನ್ನು ವಿಧಿಸಿದೆ.
ಶರೂನ್‌ಗೆ ಊಟದಲ್ಲಿ ವಿ*ಷ ಬೆರೆಸಿ ಕೊಂ*ದಿರುವುದಾಗಿ ಗ್ರೀಷ್ಮಾ ತಪ್ಪೊಪ್ಪಿಕೊಂಡಿದ್ದಳು. ಇದನ್ನು ಪರಿಶೀಲಿಸಿದ ಕೇರಳದ ನೆಯ್ಯಟ್ಟಿಂಕರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಗ್ರೀಷ್ಮಾಗೆ ಮ*ರಣದಂಡನೆ ವಿಧಿಸಿತ್ತು. ಅಲ್ಲದೇ ಪ್ರಕರಣದಲ್ಲಿ ಯುವತಿ ಜೊತೆ ಕೈ ಜೋಡಿಸಿದ್ದ ಆಕೆಯ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಎರಡನೇ ಆರೋಪಿಯಾಗಿದ್ದ ಆಕೆಯ ತಾಯಿಯನ್ನು ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪಿಗೆ ಶರೋನ್ ತಾಯಿ ಸಂತಸ ವ್ಯಕ್ತಪಡಿಸಿದ್ದು ನನ್ನ ಮಗನಿಗೆ ಸಿಗಬೇಕಾದ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಕೇರಳದ ತಿರುವನಂತಪುರದಲ್ಲಿ 2022ರ ಅ.14 ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ವಿ*ಷಪ್ರಾಶನದಿಂದ ಮೃ*ತಪಟ್ಟಿದ್ದ. ಈ ವೇಳೆ ಪೊಲೀಸರು ಅನುಮಾನದ ಮೇರೆಗೆ ಪ್ರಿಯತಮೆ ಗ್ರೀಷ್ಮಾಳನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ವಿಚಾರಣೆಯಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದಳು. ಶರೋನ್ ಮತ್ತು ಗ್ರೀಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಶರೋನ್‌ನಿಂದ ದೂರವಾಗಿ ಯೋಧರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ ಇದನ್ನು ಶರೋನ್ ಸಹಿಸಿರಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿದರೆ ತನ್ನ ಮಾರ್ಗ ಕ್ಲಿಯರ್ ಆಗುತ್ತದೆ ಎಂದು ಭಾವಿಸಿದ ಗ್ರೀಷ್ಮಾ, ಶರೋನ್‌ನನ್ನು ಮನೆಗೆ ಕರೆಸಿಕೊಂಡು ಔಷಧದಲ್ಲಿ ಪ್ಯಾರಾಕ್ವಾಟ್ ಎಂಬ ಕಳೆನಾಶಕ ವಿ*ಷ ಬೆರೆಸಿ ಕುಡಿಸಿದ್ದಳು. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಯ ಕೃ*ತ್ಯದ ಬಗ್ಗೆ ಹೇಳಿದ್ದ. ಆದರೆ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿದ್ದ.
ಗ್ರೀಷ್ಮಾ ಕೇರಳದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಅತಿ ಕಿರಿಯ ಮಹಿಳೆ. ‘ಶೈಕ್ಷಣಿಕ ಸಾಧನೆಗಳು ಮತ್ತು ತನಗೆ ಈ ಹಿಂದೆ ಯಾವುದೇ ಅಪರಾಧದ ಇತಿಹಾಸ ಇಲ್ಲ, ಹೆತ್ತವರಿಗೆ ಏಕೈಕ ಪುತ್ರಿ’ ಎಂಬ ಕಾರಣವನ್ನು ಉಲ್ಲೇಖಿಸಿ ಶಿಕ್ಷೆ ಕಡಿತಕ್ಕೆ ಕೋರಿದ್ದಳು. ಆದರೆ ನ್ಯಾಯಾಲಯ ಅನುಮತಿಯನ್ನು ನೀಡದೇ ಅಪರಾಧಿಯ ವಯಸ್ಸು, ಇತರ ಸಂದರ್ಭಗಳನ್ನ ಪರಿಗಣಿಸುವ ಅಗತ್ಯವಿಲ್ಲ ಎಂದಿದು ಹೇಳಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಶರೂನ್ ಸಾವಿಗೆ ನ್ಯಾಯ ಒದಗಿಸಿದ್ದಾರೆ.
LATEST NEWS
ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’
Published
7 minutes agoon
21/01/2025By
NEWS DESK4ಮಂಗಳೂರು/ಇಂದೋರ್ : ವಿಶ್ವದ ಅತಿದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳ. ಅಲ್ಲಿ ಚಿತ್ರ, ವಿಚಿತ್ರ ವೇಷ, ನಿಲುವುಗಳನ್ನು ಹೊಂದಿರುವ ಸಂತ, ನಾಗಸಾಧುಗಳು ಹೈಲೆಟ್. ಆದರೆ, ಈ ಬಾರಿ ಆ ಹುಡುಗಿ ಗಮನ ಸೆಳೆದಿದ್ದಳು.
ಮಹಾಕುಂಭಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾರುತ್ತಿದ್ದ ಬಟ್ಟಲು ಕಂಗಳ, ಕಂದು ವರ್ಣದ ಚೆಲುವೆ ಮೊನಾಲಿಸಾ ಎಲ್ಲರ ಚಿತ್ತಾಕರ್ಷಿಸಿದ್ದಳು. ಆಕೆಯ ಫೋಟೋ, ವೀಡಿಯೋಗಳು ವೈರಲ್ ಆಗ ತೊಡಗಿದ್ದವು. ಆಕೆಯನ್ನು ನೋಡಲು ಜನ ಮುಗಿಬಿದ್ದರು. ಆಕೆಯ ಸಂದರ್ಶನ, ಸೆಲ್ಫಿ ಹೆಚ್ಚಾಯಿತು. ಹೀಗಾಗಿ ಮೊನಾಲಿಸಾ ತಂದೆ ಆಕೆಯನ್ನು ವಾಪಾಸು ಮನೆಗೆ ಕಳುಹಿಸಿದ್ದರು. ಇದರಿಂದ ಮಹಾಕುಂಭಮೇಳಕ್ಕೆ ಭೇಟಿ ಕೊಡುವವರಿಗೆ ಈಕೆಯ ನೋಡುವ ಅವಕಾಶ ಇರಲಿಲ್ಲ. ಸೈಲೆಂಟಾಗಿ ಕಣ್ಮರೆಯಾದ ಬೆರಗು ಕಂಗಳ ಕೋಮಲೆ ಎಲ್ಲಿ ಹೋದಳಪ್ಪ ಎನ್ನುತ್ತಿರುವಾಗಲೇ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಅದೂ ಮಹಾಕುಂಭಮೇಳದಲ್ಲಿ ಅಲ್ಲ, ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ.
ಇದನ್ನೂ ಓದಿ : ಪಪ್ಪಾಯ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ??
ಮಹಾಕುಂಭಮೇಳದಲ್ಲಿ ಸೋಜಿಗದಂತೆ ಸೆಳೆದ ಮೊನಾಲಿಸಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ಬ್ಯೂಟಿ ಪಾರ್ಲರ್ ಮೆಟ್ಟಿಲೇರಿದ್ದು, ಬ್ಯೂಟೀಷನ್ ಒಬ್ಬರು ಆಕೆಗೆ ಹೊಸ ಲುಕ್ ಕೊಟ್ಟಿದ್ದಾರೆ.
ಹೊಸ ಲುಕ್‌ನಲ್ಲಿ ಮೊನಾಲಿಸಾ ಕಂಗೊಳಿಸುತ್ತಿದ್ದಾಳೆ. ಕೂದಲಿನ ವಿನ್ಯಾಸ ಬದಲಾಗಿದೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೊನಾಲಿಸಾ ಹೊಸ ಲುಕ್‌ಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.
LATEST NEWS
ಪಪ್ಪಾಯ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ??
Published
48 minutes agoon
21/01/2025ಆರೋಗ್ಯವನ್ನು ಕಾಪಾಡುವಲ್ಲಿ ಪಪ್ಪಾಯ ಮಹತ್ವದ ಪಾತ್ರ ವಹಿಸುತ್ತದೆ. ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಯಾವರಲ್ಲಾ ಪ್ರಯೋಜನ ಇದೆ ? ಖಾಲಿ ಹೊಟ್ಟೆಗೆ ಪಪ್ಪಾಯ ತಿಂದ್ರೆ ಏನಾಗುತ್ತೆ ? ಎಂಬೆಲ್ಲಾ ಅಂಶಗಳನ್ನು ಇಲ್ಲಿ ತಿಳಿಯೋಣ .
ಸಾಮಾನ್ಯವಾಗಿ ತರಕಾರಿ ಮತ್ತು ಹಣ್ಣುಗಳು ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ಸಹಕಾರಿಯಾಗಿದೆ. ಅದರಲ್ಲಿಯೂ ಕೆಲವು ಹಣ್ಣುಗಳು ಆರೋಗ್ಯವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಅದರಲ್ಲಿ ಪಪ್ಪಾಯಿ ಹಣ್ಣು ಅಗ್ರ ಸ್ಥಾನದಲ್ಲಿರುತ್ತದೆ. ನಿಯಮಿತವಾಗಿ ಅದನ್ನು ಸೇವನೆ ಮಾಡಿದಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ರುಚಿಕರ ಮಾತ್ರವಲ್ಲ, ಪೌಷ್ಠಿಕಾಂಶದಿಂದ ಕೂಡಿರುತ್ತದೆ. ಜೊತೆಗೆ ಪಪ್ಪಾಯಿ ವರ್ಷದ 12 ತಿಂಗಳು ಲಭ್ಯವಿರುವ ಹಣ್ಣುಗಳಲ್ಲಿ ಒಂದಾಗಿದೆ. ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಸಾಮಾನ್ಯ ಹಣ್ಣು ಇದಾಗಿದ್ದು, ಖಾಲಿ ಹೊಟ್ಟೆಯಲ್ಲಿ ಇದರ ಸೇವನೆಯಿಂದ ಅನೇಕ ರೀತಿಯ ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ. ಪಪ್ಪಾಯ ಸೇವನೆಯಿಂದ ಉಂಟಾಗುವ ಪ್ರಮುಖ ಲಾಭಾಂಶಗಳು :
- ಪಪ್ಪಾಯ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅದರಲ್ಲಿಯೂ ಹಸಿ ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮತ್ತು ಬೇಯಿಸಿದ ಪಪ್ಪಾಯಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಜೊತೆಗೆ ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
- ಪಪ್ಪಾಯಿಯಲ್ಲಿ ಕಂಡು ಬರುವ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಆಮ್ಲೀಯತೆ, ಗ್ಯಾಸ್ ಮತ್ತು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಜೊತೆಗೆ ಇದು ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
- ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳಿವೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದ್ರೋಗದ ಅಪಾಯ ಕಡಿಮೆ ಆಗುತ್ತದ
- ಪಪ್ಪಾಯಿಯಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳಿವೆ, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಕೊಲೊರೆಕ್ಟಲ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಬಹಳ ಮುಖ್ಯ ಪಾತ್ರ ವಹಿಸುತ್ತದೆ
- ಪಪ್ಪಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದ್ದು, ಇದು ಕರುಳಿನ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
- ಅದರಲ್ಲಿಯೂ ಪಪ್ಪಾಯಿ ಹಣ್ಣಿನಲ್ಲಿರುವ ಫೈಬರ್ ಆರೋಗ್ಯಕರ ಕರುಳಿಗೆ ಪ್ರಯೋಜನಕಾರಿಯಾಗಿದೆ, ಇದು ಡೈವರ್ಟಿಕ್ಯುಲಿಟಿಸ್ ನಂತಹ ಕರುಳಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಪಪ್ಪಾಯಿ ಹಣ್ಣು ತನ್ನ ಶಕ್ತಿ, ಪೋಷಣೆ ಮತ್ತು ನೈಸರ್ಗಿಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
- ಪಪ್ಪಾಯಿಯಲ್ಲಿ ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಇದ್ದು, ಮೂಳೆಯ ಆರೋಗ್ಯವನ್ನು ಸುಧಾರಿಸಿ ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಹಣ್ಣು, ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಇರುವ ಆಹಾರವಾಗಿದ್ದು, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
LATEST NEWS
ವಿಶ್ವ ಸಂಸ್ಥೆಗೆ ಗುಡ್ ಬೈ…ಅಧಿಕಾರಕ್ಕೇರುತ್ತಲೇ ಟ್ರಂಪ್ ಸಾಲು ಸಾಲು ಶಾ*ಕಿಂಗ್ ನಿರ್ಧಾರ!
Published
2 hours agoon
21/01/2025By
NEWS DESK4ಮಂಗಳೂರು/ ವಾಷಿಂಗ್ಟನ್: ಯುಸ್‌ನ 47 ನೇ ಅಧ್ಯಕ್ಷನಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಕೆಲವೊಂದು ನಿರ್ಧಾರಗಳನ್ನು ತಾಳಿದ್ದು, ಶಾ*ಕಿಂಗ್ ಆದೇಶಗಳಿಗೆ ಸಹಿ ಹಾಕಿದ್ದಾರೆ.
ವಿಶ್ವಸಂಸ್ಥೆಯಿಂದ ಹೊರಕ್ಕೆ :
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವ ಮೂಲಕ ಶಾ*ಕ್ ಕೊಟ್ಟಿದ್ದಾರೆ. ಕೋ*ವಿಡ್ ಸಮಯದಲ್ಲಿ ಹಾಗೂ ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ವೇಳೆ ಜಾಗತಿಕ ಆರೋಗ್ಯ ಸಂಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಟ್ರಂಪ್ ಆರೋಪ. ಹೀಗಾಗಿ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ಆದೇಶಕ್ಕೆ ಸಹಿ ಹಾಕಿದ್ದಾರೆ.
ಪ್ಯಾರಿಸ್ ಒಪ್ಪಂದ ಮುರಿದ ಟ್ರಂಪ್ :
2015ರಲ್ಲಿ ವಿಶ್ವದ ದೇಶಗಳು ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರನ್ವಯ ಮಾಲಿನ್ಯ ನಿಯಂತ್ರಣಕ್ಕೆ ಜಗತ್ತಿನ ದೇಶಗಳು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದರೆ, ಟ್ರಂಪ್ 2017 ರಲ್ಲಿ ಈ ಒಪ್ಪಂದವನ್ನು ತಿರಸ್ಕರಿಸಿದ್ದರು. ಚೀನಾ, ಭಾರತದಂತಹ ದೇಶಗಳು ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿದ್ದು, ಅಮೆರಿಕ ಹೆಚ್ಚು ಮಾಡಿಲ್ಲ ಎಂದರು. ಹೀಗಾಗಿ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ಹೇಳಿದ್ದರು. ಇದೀಗ ಒಪ್ಪಂದ ಮುರಿದುಕೊಂಡಿದ್ದಾರೆ.
ಬೈಡನ್ ನಿರ್ಧಾರ ರದ್ದು, ಬೆಂಬಲಿಗರಿಗೆ ಕ್ಷಮಾದಾನ :
ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳ ಕಪ್ಪುಪಟ್ಟಿಯಿಂದ ಕ್ಯೂಬಾವನ್ನು ತೆಗೆದುಹಾಕುವ ಜೋ ಬೈಡನ್ ಅವರ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದರು.
ಇದನ್ನೂ ಓದಿ : ಭಾರತದ ಅಳಿಯ ಈಗ ಅಮೆರಿಕದ ಉಪಾಧ್ಯಕ್ಷ; ಸೆಕೆಂಡ್ ಲೇಡಿ ಉಷಾ ಚಿಲುಕುರಿ ಬಗ್ಗೆ ಗೊತ್ತಾ!?
ಅಲ್ಲದೇ, 2020ರ ಚುನಾವಣಾ ಫಲಿತಾಂಶವನ್ನು ರದ್ದು ಮಾಡುವಂತೆ 2021ರ ಜನವರಿ 6 ರಂದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮೇಲೆ ದಾ*ಳಿ ಮಾಡಿದ್ದರು. ಇದರಲ್ಲಿ ತಮ್ಮ 1500 ಬೆಂಬಲಿಗರಿಗೆ ಅವರು ಕ್ಷಮಾದಾನವನ್ನು ನೀಡುವ ಆದೇಶಕ್ಕೂ ಟ್ರಂಪ್ ಸಹಿ ಹಾಕಿದ್ದಾರೆ.
ಫೆಡರಲ್ ಕೆಲಸಗಾರರು ಪೂರ್ಣ ಸಮಯಕ್ಕೆ ಕಚೇರಿಗೆ ಮರಳುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ವೈರಸ್ ಹರಡುವುದನ್ನು ಕಡಿಮೆ ಮಾಡಲು ಕೋ*ವಿಡ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವುದು ಪ್ರವರ್ಧಮಾನಕ್ಕೆ ಬಂದಿತ್ತು.