Connect with us

LATEST NEWS

Watch Video: ನವರಾತ್ರಿಯಲ್ಲಿ ಯಮನೊಂದಿಗೆ ಪ್ರತ್ಯಕ್ಷವಾದ ರೇಣುಕಾಸ್ವಾಮಿ ಪ್ರೇತ

Published

on

ನವರಾತ್ರಿಯಲ್ಲಿ ನಾನಾ ವೇಷಗಳು ಜನರನ್ನು ರಂಜಿಸುವ ಮೂಲಕ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತದೆ. ಹುಲಿ ವೇಷದ ಗಂಭೀರ ಹೆಜ್ಜೆ, ಸಿಂಹ ವೇಷದ ವೇಗದ ಕುಣಿತ ಇದೆಲ್ಲದರ ನಡುವೆ ಸಣ್ಣಪುಟ್ಟ ವೇಷಗಳು ಗಮನ ಸೆಳೆಯುತ್ತದೆ. ಅಂತಹ ಸಣ್ಣ ವೇಷವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ಆ ವೇಷಗಳನ್ನು ನೋಡಿದ ಜನರು ಕೂಡಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಯವನ ವೇಷದಾರಿಯೊಬ್ಬ ಪ್ರೇತವೊಂದನ್ನು ಎಳೆದೊಯ್ಯುತ್ತಾ ಕೆಲವೊಂದು ಡೈಲಾಗ್ ಹೇಳುತ್ತಿದ್ದಾರೆ. ಇದು ರಾಜ್ಯದಲ್ಲಿ ಬಹು ಸುದ್ದಿಯಾಗಿದ್ದ ನಟ ದರ್ಶನ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿಯ ಪ್ರೇತಾತ್ಮ ಎಂದು ಹೇಳುವ ಯಮನ ಈ ಡೈಲಾಗ್ ಜನರಿಗೆ ನಗು ತರಿಸುತ್ತಿದೆ.

ಹಿಂಸಾತ್ಮಕವಾಗಿ ಹತ್ಯೆಯಾದ ರೇಣುಕಾಸ್ವಾಮಿ ಬಗ್ಗೆಯೂ ಯಮ ವೇಷದಾರಿಯ ಡೈಲಾಗ್ ಸಕತ್ ಮಜಾ ನೀಡುತ್ತಿದೆ. ರಾಜ್ಯದಲ್ಲಿ ನಡೆದ ಘೋರ ಘಟನೆಯೊಂದನ್ನು ಇಟ್ಟುಕೊಂಡು ಬಡ ಕಲಾವಿದರು ಮಾಡಿರೊ ಈ ವೇಷವನ್ನು ಜನರೂ ಮೆಚ್ಚಿಕೊಂಡಿದ್ದಾರೆ.

Watch Video: 

 

kerala

ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!

Published

on

ಕೇರಳ : ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿ ಬಸ್ವೊಂದು ಅ*ಪಘಾತಕ್ಕೆ ಒಳಗಾಗಿ, ಇಬ್ಬರು ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಸಮೀಪದ ಕೆಲಕಮ್  ಬಳಿ ನಿನ್ನೆ (ನ.15) ಬೆಳಿಗ್ಗೆ ಸಂಭವಿಸಿದೆ.

ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾ*ವನ್ನಪ್ಪಿರುವ ದು*ರ್ದೈವಿಗಳು.

ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅ*ನಾಹುತ ನಡೆದಿದೆ. ಘಟನೆಯಲ್ಲಿ 9 ಮಂದಿ ಗಾ*ಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂ*ಭೀರವಾಗಿದೆ. ಅ*ಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

‘ಕಯಂಕುಮಂ ದೇವ ಕಮ್ಯೂನಿಕೇಷ’ನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ ಮಿನಿ ಬಸ್ ಅ*ಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾ*ಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

LATEST NEWS

‘ಸಹಕಾರೋತ್ಸವ’ಕ್ಕೆ ಅಣಿಯಾಗಿದೆ ಕಡಲನಗರಿ; 32 ಕಲಾತಂಡಗಳು ಜಾಥಾದಲ್ಲಿ ಭಾಗಿ

Published

on

ಮಂಗಳೂರು: ಸ್ಮಾರ್ಟ್ ಸಿಟಿ, ಕಡಲನಗರಿ ಮಂಗಳೂರಿನ ರಾಜಬೀದಿಯುದ್ದಕ್ಕೂ ಸಹಕಾರಿ ತೋರಣ. ಕರಾವಳಿ ಉತ್ಸವ ಮೈದಾನದಲ್ಲಿ ಮೈದಳೆದು ನಿಂತ ವಿಶಾಲವಾದ ಚಪ್ಪರ, ಆಕರ್ಷಕವಾಗಿ ಅಲಂಕೃತಗೊಂಡ ವೇದಿಕೆ. ಇದು ನ.16ರಂದು ನಡೆಯಲಿರುವ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹಕ್ಕೆ ಬಂದರು ನಗರಿ ಮಂಗಳೂರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮಹಾಉತ್ಸವ ನಡೆಯಲಿದೆ.

15 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಪ್ತಾಹಕ್ಕೆ ವಸ್ತು ಪ್ರದರ್ಶನ, ಬೃಹತ್ ಸಹಕಾರ ಜಾಥಾ ಮೆರುಗು ನೀಡಲಿದೆ. ಬೃಹತ್ ವೇದಿಕೆಯ ಮುಂಭಾಗ 4 ಹಂತದಲ್ಲಿ ಸಹಕಾರಿ ಬಂಧುಗಳು ಕುಳಿತುಕೊಳ್ಳಲು ವಿಶಾಲವಾದ ಚಪ್ಪರ ಹಾಕಲಾಗಿದೆ. ಪ್ರಥಮ ಹಂತದಲ್ಲಿ ವಿವಿಐಪಿ, ವಿಐಪಿಗಳು, ಮಾಧ್ಯಮ ಬಂಧುಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ನಾನಾ ಹಂತಗಳನ್ನು ವಿಭಜಿಸಲಾಗಿದೆ. ಸಭಾಂಗಣವಿಡೀ ತಂಪನ್ನಾಗಿಸಲು ಬೃಹತ್ ಗಾತ್ರ ಫ್ಯಾನ್‌ಗಳನ್ನು ಜೋಡಿಸಲಾಗಿದೆ.

ಸಹಕಾರ ಮಾಣಿಕ್ಯ ಪ್ರಶಸ್ತಿ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ 2024ನೇ ಸಾಲಿನಿಂದ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಪ್ರಶಸ್ತಿ ಜತೆಗೆ 5 ಗ್ರಾಂ ಚಿನ್ನದ ಪದಕ, 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ ಒಂದು ಹಾಗೂ 2013-24ನೇ ಸಾಲಿನಲ್ಲಿ ಶತಮಾನೋತ್ಸವ ಪೂರೈಸಿದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗೌರವಿಸಲಾಗುವುದು.

ಜಾಥಾದಲ್ಲಿ ತಂಡಗಳ ಆಕರ್ಷಣೆ (ಬಾಕ್ಸ್) :

ಸಹಕಾರ ಜಾಥಾ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಜಾಥಾ ಮೆರವಣಿಗೆ ನಡೆಯಲಿದೆ. ಈ ಜಾಥಾದಲ್ಲಿ ಸಹಕಾರಿ ರಥ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆ, ಮೊಳಹಳ್ಳಿ ಶಿವರಾವ್ ಟ್ಯಾಬ್ಲೋ, ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಕೃಷಿ ಉಪಕರಣಗಳ ಮಾರಾಟದ ಸ್ತಬ್ಧಚಿತ್ರ, ನಂದಿನಿ ಅನ್ ವಿಲ್ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ರಾಣಿ ಅಬ್ಬಕ್ಕನ ಸ್ತಬ್ಧಚಿತ್ರ, ರಬ್ಬರ್ ಟ್ಯಾಪಿಂಗ್‌ನ ಸ್ತಬ್ಧಚಿತ್ರ, ನವೋದರ ಗುಂಪಿನ ಸ್ತಬ್ಧಚಿತ್ರ, ಪತ್ತಿನ ಸಂಘಗಳ ಹಣಕಾಸಿನ ವ್ಯವಹಾರದ ಸ್ತಬ್ಧಚಿತ್ರ, ಚೆಂಡೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ನೇತ್ರಾವತಿ ಮತ್ತು ಕುಮಾರಧಾರ ನದಿಯ ಸಂಗಮದ ಸ್ತಬ್ಧಚಿತ್ರ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಅಕ್ಕಿ ಮಿಲ್ಲಿನ ಸ್ತಬ್ಧಚಿತ್ರ, ರಸಗೊಬ್ಬರ ಮಾರಾಟ ಮತ್ತು ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ತುಳುನಾಡ ವೈಭವದ ಸ್ತಬ್ಧಚಿತ್ರ, ಕಂಬಳದ ಸ್ತಬ್ಧಚಿತ್ರ, ಹಳ್ಳಿ ಮನೆಯ ಸ್ತಬ್ಧಚಿತ್ರ ಸೇರಿದಂತೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 32ಕ್ಕೂ ಅಧಿಕ ಸ್ತಬ್ಧಚಿತ್ರಗಳು ಜಾಥದಲ್ಲಿ ಭಾಗವಹಿಸಲಿದೆ.

Continue Reading

LATEST NEWS

ಆಸ್ಪತ್ರೆಯಲ್ಲಿ ಭೀಕರ ಅ*ಗ್ನಿ ದುರಂತ; 10 ನವಜಾತ ಶಿಶುಗಳು ಸ*ಜೀವ ದ*ಹನ

Published

on

ಮಂಗಳೂರು/ಉತ್ತರ ಪ್ರದೇಶ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್ನಲ್ಲಿ ಭಾರೀ ಅ*ಗ್ನಿ ಅವಘ*ಡ ಸಂಭವಿಸಿದೆ. ಈ ದುರಂ*ತದಲ್ಲಿ 10 ನವಜಾತ ಶಿಶುಗಳು ಸಜೀವ ದ*ಹನವಾಗಿವೆ. ಶುಕ್ರವಾರ(ನ.15) ತಡರಾತ್ರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂ*ಕಿ ಕಾಣಿಸಿಕೊಂಡಿದೆ.


ತೀವ್ರ ನಿಗಾ ಘಟಕದ ಸುತ್ತಲೂ ಬೆಂ*ಕಿ ಆವರಿಸಿದ್ದು, ಬೆಂ*ಕಿ ಹೊತ್ತಿಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡ ತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾ*ತಕ್ಕೊಳಗಾಗಿದ್ದು, ವೈದ್ಯರು ಮತ್ತು ಇತರೆ ಸಿಬ್ಬಂದಿ ವಾರ್ಡ್ನ ಕಿಟಕಿ ಗಾಜುಗಳನ್ನು ಒಡೆದು ಅವುಗಳ ಮೂಲಕ ರೋಗಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟರಲ್ಲಾಗಲೇ 10 ಶಿಶುಗಳು ಸಜೀವ ದಹನವಾಗಿವೆ.

 

ಇದನ್ನೂ ಓದಿ : ಆಸ್ಪತ್ರೆಯೊಳಗೆ ಅಗ್ನಿ ಅವಘಡ; ಓರ್ವ ರೋಗಿ ಸಾ*ವು

 

ಸ್ಥಳಕ್ಕೆ ಅ*ಗ್ನಿಶಾಮಕ ಸಿಬ್ಬಂದಿ ತಲುಪುವ ವೇಳೆಗಾಗಲೇ ಎನ್ಐಸಿಯು ವಾರ್ಡ್ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು. ದುರ್ಘಟನೆಯಲ್ಲಿ ಸುಮಾರು 10 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ. ಈ ನಡುವೆ ವಾರ್ಡ್ನ ಕಿಟಕಿ ಒಡೆದು ಕೆಲವು ಶಿಶುಗಳನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಹಲವು ಮಕ್ಕಳಿಗೆ ಗಂ*ಭೀರ ಗಾ*ಯಗಳಾಗಿದ್ದು, ಸ್ಥಿತಿ ಗಂ*ಭೀರವಾಗಿದೆ ಎಂದು ತಿಳಿದುಬಂದಿದೆ.

Continue Reading

LATEST NEWS

Trending

Exit mobile version