ಚಿಲಿ : ದಕ್ಷಿಣ ಅಮೇರಿಕದ ಚಿಲಿ ರಾಜಧಾನಿಯ ಸ್ಯಾಂಟಿಯಾಗೋ ಸಮೀಪ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಾಡ್ಗಿಚ್ಚಿನ ಕಾರಣದಿಂದ ಸಾವಿರಾರು ಎಕರೆ ಅರಣ್ಯ ಹೊತ್ತಿ ಉರಿದು, 13ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 35,000 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದ ಅಂಚಿನಲ್ಲಿರುವ ಸಾಂತಾ ಜುವಾನಾ ನಗರಕ್ಕೂ ಬೆಂಕಿ ವ್ಯಾಪಿಸಿದ್ದು ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ.
ಇಲ್ಲಿನ ಲಾ ಅರೌಕಾನಿಯಾದ ದಕ್ಷಿಣ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಮೆಕ್ಯಾನಿಕ್ ಸಾವನ್ನಪ್ಪಿದ್ದಾರೆ.
ಇದು ಹೆಚ್ಚಿನ ಕಾಡ್ಗಿಚ್ಚು ಅರಣ್ಯ ಪ್ರದೇಶವನ್ನು ಆವರಿಸಲು ಕಾರಣವಾಗಿದೆ ಎನ್ನಲಾಗಿದೆ.
ಇನ್ನು ಬಯೋಬಿಯೊ ಮತ್ತು ನೆರೆಯ ನುಬಲ್‌ನ ಕೃಷಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಕಂಡುಬರುತ್ತದೆ.
ಸದ್ಯ ದುರಂತ ನಡೆದಿರುವ ಸ್ಥಳದಲ್ಲಿ ಸೈನಿಕರನ್ನು ನಿಯೋಜಿಸಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ.
ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ ಅಲ್ಲಿನ ಜನರನ್ನು ಬೇರೆಡೆಗೆ ಶಿಫ್ಟ್ ಕೂಡ ಮಾಡಲಾಗುತ್ತಿದೆ.
ದುರಂತ ನಡೆದ ಸ್ಥಳದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸ್ಥಳೀಯ ದೇಶಗಳಾದ ಬ್ರೆಜಿಲ್ ಮತ್ತು ಅರ್ಜೆಂಟಿನಾದೊಂದಿಗೆ ನೆರವಿನ ಹಸ್ತವನ್ನು ಚಿಲಿ ಕೇಳಿದೆ.
63 ವಿಮಾನಗಳ ಫ್ಲೀಟ್ ಅಗ್ನಿಶಾಮಕವನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.