Connect with us

BANTWAL

ಅಡ್ಯನಡ್ಕದಲ್ಲಿ ದಿ ಈಡನ್ ಬೊಟಾನಿಕಲ್ ಗಾರ್ಡನ್ ಲೋಕಾರ್ಪಣೆ : ಆಯುರ್ವೇದದ ಶಕ್ತಿ ಮಹತ್ವ ವಿಶ್ವ ಅರಿತಿದೆಯೆಂದ ಶೋಭಾ ಕರಂದ್ಲಾಜೆ..

Published

on

ಬಂಟ್ವಾಳ : ಭಾರತೀಯ ಆಯುರ್ವೇದ ವೈದ್ಯ ಪದ್ದತಿಯಲ್ಲಿ ಅನೇಕ ರೀತಿಯ ಸಾಧನೆ ಮಾಡಿರುವ ಸಾಧಕ ನಾಟಿ ವೈದ್ಯರಾಗಿರುವ ಮಾಥು ಕುಟ್ಟಿ ವೈದ್ಯರ್ ಅವರು ದಕ್ಷಿಣ ಕನ್ನಡದ ಬಂಟ್ವಾಳ ಚವರ್ಕಾಡು ಅಡ್ಯನಡ್ಕದಂತಹ ಕುಗ್ರಾಮದಲ್ಲಿ ಸಸ್ಯಶಾಸ್ತ್ರೀಯ ಉದ್ಯಾನವನ್ನು ನಿರ್ಮಾಣ ಮಾಡಿದ್ದು ಇದರ ಲೋಕಾರ್ಪಣಾ ಕಾರ್ಯ ಮಂಗಳವಾರ ನಡೆಯಿತು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಲೋಕಾರ್ಣೆಗೊಳಿಸಿದರು. ಬಳಿಕ ತುಳುವಿನಲ್ಲೇ ಮಾತು ಆರಂಭಿಸಿದ ಶೋಭಾ ಅವರು ಆಯುರ್ವೇದದ ಶಕ್ತಿ ವಿಶ್ವದ ಮಹಾನ್ ಶಕ್ತಿಯಾಗಿದೆ.

ಇದನ್ನು ಕೊರೊನಾ ಸಂದರ್ಭದಲ್ಲಿ ವಿಶ್ವದ ಮುಂದೆ ಸಾಬೀತು ಮಾಡಿದೆ. ಹಿತ್ತಲ ಗಿಡ ಮದ್ದಲ್ಲ ಎಂಬ ಬದಲಿಗೆ ಹಿತ್ತಲ ಗಿಡ ಮದ್ದು ಎಂಬುದು ಜನಸಾಮಾನ್ಯರು ತಿಳಿಯಬೇಕಿದೆ.

ನಮ್ಮ ದೇಶದ ತೆಂಗಿನಕಾಯಿಯ ಹಾಲು, ತಾಯಿಯ ಹಾಲಿನಷ್ಟೇ ಪವಿತ್ರವಾಗಿದೆ ಅನ್ನುವುದನ್ನು ವಿದೇಶಿಗರೇ ಅರಿತಿದ್ದಾರೆ ಎಂದ ಅವರು ದಿ ಈಡನ್ ಬೊಟಾನಿಕಲ್ ಗಾರ್ಡನ್ ಅರ್ಥ ಪೂರ್ಣಹಾಗೂ ಮಹತ್ವಪೂರ್ಣ ಮಾನ್ಯತೆಯನ್ನು ಪಡೆದಿದೆ.

ಕೇಂದ್ರ ಸರಕಾರವೂ ಇದಕ್ಕೆ ಪೂರಕವಾಗಿ ಸ್ಪಂದಿಸಲಿದೆ ಎನ್ನುವ ಭರವಸೆಯನ್ನು ನೀಡಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪ್ರಕೃತಿಯನ್ನು ವಿಕೃತಿಗೊಳಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಇಂದಿನ ಅವಶ್ಯಕತೆಗಳಿಗೆ ಪೂರಕವಾಗಿ ವೈದ್ಯ ರತ್ನಮ್ ಮಾಥು ಕುಟ್ಟಿ ಅವರ ““ ದಿ ಈಡನ್ ಬೊಟಾನಿಕಲ್ ಗಾರ್ಡನ್ “ ಮೂಲಕ ಸಸ್ಯಸಂಜೀವಿನಿಯಾಗಲಿದ್ದು ಮುಂದಿನ ಪೀಳಿಗೆಗೆ ಮಹತ್ತರ ಕೊಡುಗೆಯಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಅತಿಥಿಯಾಗಿದ್ದ ಪೆರ್ಲ ಸೈಂಟ್ ಜ್ಯೂಡ್ ಚರ್ಚ್ ನ ರೆ.ಫಾ. ಜೊಸೆ ಚೆಂಬಾಟಿಕಲ್ ಆಶೀರ್ವಚನದ ನುಡಿಗಳನ್ನಾಡಿದರು.

ಮತ್ತೋರ್ವ ಅಥಿತಿ ಕೆಎಫ್ ಡಿಸಿ ನಿರ್ದೇಶಕಿ, ಗೀತಾಂಜಲಿ ಎಂ ಸುವರ್ಣ ಮಾತನಾಡಿ, ಮಾಥುಕಟ್ಟಿಯವರ ಈ ಗಾರ್ಡನ್ ಜಗದ್ವಖ್ಯಾತಿಗೊಳಿಸಲಿ ಅಂತ ಹಾರೈಸಿದರು.

ಸಮಾರಂಭದಲ್ಲಿ ನಾಟಿವೈದ್ಯ ವೈದ್ಯರತ್ನಮ್ ಮಾಥುಕುಟ್ಟಿ ವೈದ್ಯರ್ ಅವರಿಗೆ ಹಿತೈಷಿಗಳು, ಸಾರ್ವಜನಿಕರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಸೋಷ್ಯೋ ಲೀಗಲ್ ಆ್ಯಕ್ಟಿವಿಸ್ಟ್ ಮರ್ಸಿ ಮ್ಯಾಥ್ಯೂ ಅಲಿಯಾಸ್ ದಯಾಬಾಯ್, ಎಣ್ಮಕಜೆ ಗ್ರಾ.ಪಂ.ಸದಸ್ಯ ಮಹೇಶ್ ಭಟ್, ಕೃಷಿ ಇಲಾಖೆಯ ಉಪನಿರ್ದೇಸಕಿ ಭಾರತಿ, ಸಹಾಯಕ ನಿರ್ದೇಸಕ ನಂದನ್ ಶೆಣೈ, ಉಡುಪಿ ಕೃಷಿ ಇಲಾಖೆಯ ಉಪನಿರ್ದೇಶಕ ಸೂರ್ಯಕಾಮತ್ ಬಿರಾದಾರ್, ಸಹಾಯಕ ನಿರ್ದೇಶಕ ಮೋಹನ್ ರಾಜ್, ಎ.ಡಿ.ಆಯುರ್ ಆಂಕೋಲಾಜಿ ಫೆಲೋ ಡಾ.ಲಿಮಾ ಮ್ಯಾಥ್ಯೂ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು, ಕಾಪು ಬಿಜೆಪಿ ರೈತ ಮೋರ್ಚಾದ ಕಮಲಾಕ್ಷ ಸುವರ್ಣ ಕಟಪಾಡಿ ಸ್ವಾಗತಿಸಿ, ವಂದಿಸಿದರು.

ದಿ ಈಡನ್ ಬೊಟಾನಿಕಲ್ ಗಾರ್ಡನ್ ನ ವೈಶಿಷ್ಟ್ಯ :

ಅಡ್ಯನಡ್ಕದ ಸುಂದರ ಮತ್ತು ಶಾಂತ ಪರಿಸರಲ್ಲಿರುವ ದಿ ಈಡನ್ ಬೊಟಾನಿಕಲ್ ಗಾರ್ಡನ್ ಆರು ಎಕರೆ ಪ್ರದೇಶದಲ್ಲಿ ಹರಡಿದ್ದು, ಕ್ಯಾನ್ಸರ್, ಕಿಡ್ನಿ, ಹೃದಯ ಸಮಸ್ಯೆ, ಹೆಪಟೈಟಿಸ್ ಬಿ , ಪಕ್ಷವಾತ ಸೇರಿ ಎಲ್ಲಾ ಮಾರಕರೋಗಗಳನ್ನು ನಿವಾರಿಸುವ ಔಷಧೀಯ ಗುಣಗಳುಳ್ಳ ಅಪರೂಪದ 3000 ಸಾವಿರಕ್ಕೂ ಅಧಿಕ ಸಸ್ಯಶಾಸ್ತ್ರೀಯಗಳು ಈ ಉದ್ಯಾನವನದಲ್ಲಿವೆ.

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

BANTWAL

ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು

Published

on

ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಲೋಕೇಶ್ ಅವರು  ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.

ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್

ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್‌ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending