Connect with us

DAKSHINA KANNADA

ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!

Published

on

ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರು ಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಈ ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಆದರೆ ಇದೆಲ್ಲದರ ನಡುವೆ ಆ ಘಟನೆಯಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಗಳು ಪವಾಡ ಮೆರೆದಿರುವುದು ಗೋಚರವಾಗುತ್ತಿದೆ.


ಶನಿವಾರ ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದು ಘಟನೆಯಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕನು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಅನೇಕ ಆಯಾಮಗಳನ್ನು ಪಡೆದುಕೊಂಡರೂ ಕೊನೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿದೆ.

ಭಯೋತ್ಪಾದನೆ ಸಂಚು ರೂಪಿಸಿದ್ದ ಶಾರೀಕ್ ಕುಕ್ಕರ್‌ನಲ್ಲಿ ಅನೇಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಪ್ರೀ ಪ್ಲಾನ್ ಎಂಬಂತೆ ಯೋಜನೆ ಹಾಕಿಕೊಂಡಿದ್ದ.

ಈತ ಮೈಸೂರಿನಿಂದ ಬಸ್ಸಿನಲ್ಲಿ ಬಂದು ಪಡೀಲ್‌ನ ಹತ್ತಿರ ಇಳಿದು ಪುರುಷೋತ್ತಮ್ ಎಂಬವರ ರಿಕ್ಷಾದಲ್ಲಿ ಕೂತು ಪಂಪ್‌ವೆಲ್‌ಗೆ ಹೋಗಬೇಕು ಎಂದಿದ್ದಾನೆ.

ಆದರೆ ಚಾಲಕ ರಿಕ್ಷಾ ಚಲಾಯಿಸುತ್ತಾ ಸಾಗುತ್ತಿರುವಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆ  ಬಳಿ ಆತ ಹೊತ್ತೊಯ್ಯುತ್ತಿದ್ದ ಬ್ಯಾಗ್‌ ನಲ್ಲಿದ್ದ ಕುಕ್ಕರ್ ಅಚಾನಕ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈತನ ಕೃತ್ಯದ ಬಗ್ಗೆ ಅನೇಕ ಪ್ರಶ್ನೆಗಳು, ಅನುಮಾನಗಳು, ಆತಂಕಗಳು ಸೃಷ್ಠಿಯಾಗುತ್ತಿದ್ದರೂ ಆತ ಆ ಸ್ಪೋಟಕ ತುಂಬಿದ್ದ ಕುಕ್ಕರನ್ನು ತೆಗೆದುಕೊಂಡು ಜನರು ನಂಬಿಕೊಂಡು ಬಂದಿರುವ ತುಳುನಾಡ ಕಾರ್ಣಿಕ ಪುರುಷರ ದೈವಸ್ಥಾನವಾದ ಕೋಟಿ ಚೆನ್ನಯ್ಯ ಗರೋಡಿ ತನ್ನ ಗಡಿಯನ್ನೂ ದಾಟಲು ಬಿಡದೆ ಮುಂಚಿತವಾಗಿಯೇ ಈ ಅವಘಡ ನಡೆದಿರುವುದು ಎಲ್ಲೋ ಒಂದು ಕಡೆ ಜನ ಇದು ‘ಈ ಮಣ್ಣಿನ ಪವಾಡ ಪುರುಷರ ಶಕ್ತಿ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.


ಘಟನೆಯ ಭೀಕರತೆ ಅದೆಷ್ಟಿತ್ತೋ ತಿಳಿದಿಲ್ಲ. ಆದರೆ ದುರಂತವನ್ನು ಇಷ್ಟರಲ್ಲಿಯೇ ಮುಗಿಸಿದ್ದು ಮಾತ್ರ ನಾವು ನಂಬಿಕೊಂಡು ಬಂದಿರುವ ಈ ಜಾಗದ ಶಕ್ತಿಗಳು ಎನ್ನುತಾರೆ ಸ್ಥಳೀಯರು.

ಇನ್ನು ದುರಾದೃಷ್ಟವಶಾತ್ ಅಂದು ‘ಪ್ರತಿದಿನದಂತೆ ಇದು ಕೂಡಾ ಬಾಡಿಗೆ’ ಎಂದುಕೊಂಡಿದ್ದ ಪ್ರಮಾಣಿಕ ಆಟೋ ಚಾಲಕ ಪುರುಷೋತ್ತಮ ಅವರಿಗೆ ಮಾತ್ರ ಕಾದಿತ್ತು ಆಶ್ಚರ್ಯ.

ತನ್ನ ರಿಕ್ಷಾದಲ್ಲಿ ಪ್ರಯಾಣಿಕನನ್ನು ಕರೆದುಕೊಂಡು ಚಲಾಯಿಸುತ್ತಿರುವಾಗಲೇ ದುರಂತ ನಡೆದಿದ್ದು ಅವರನ್ನಷ್ಟೇ ಅಲ್ಲದೆ ಅಲ್ಲಿದ್ದವರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ಕರಾವಳಿಯಲ್ಲಿ ಏನು ಆಗುತ್ತೆ ಅಂತ ಭಯ ಇತ್ತೋ ಅದು ಘಟಿಸಿತ್ತು.

ಆದರೆ ಆ ಕುಕ್ಕರ್ ಬಾಂಬ್ ಮಂಗಳೂರು ನಗರ ಪ್ರವೇಶಿಸಿ ಯಾವುದೋ ಜನ ನಿಬಿಡ ಪ್ರದೇಶ, ಶಾಲೆಗಳ ಪ್ರದೇಶಗಳಲ್ಲಿ ಆ ಶಾಕೀರ ಕೊಂಡಿ ಹೋಗಿ ಸ್ಪೋಟಿಸಿದ್ದರೆ ಅದರ ಪರಿಣಾಮ ಬಹುಷ ಯಾರು ಕೂಡ ಊಹಿಸಲಸಾಧ್ಯ.

ಅಂತಹ ಸಜೀವ ಸ್ಪೋಟಕಗಳಿಂದ ತುಂಬಿದ್ದ ಟೈಮರ್ ಫಿಕ್ಸ್ ಮಾಡಿದ್ದ ಕುಕ್ಕರ್ ಬಾಂಬ್ ಜೊತೆಯಲ್ಲಿ ಶಾಕಿರನನ್ನು ಕಾರಣಿಕದ ಗರಡಿ ಕ್ಷೇತ್ರದ ಅವಳಿ ವೀರರು ಆಚೆಗೆ ದಾಟಿ ಬರಲು ಬಿಡದೇ ಮೊದಲೇ ಸ್ಪೋಟಗೊಂಡಿದ್ದು ದೈವ ಸಂಕಲ್ಪವಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಮುಂದಿನ ದಿನಗಳಲ್ಲಿ ಮಗಳ ಮದುವೆಯನ್ನು ಎದುರು ನೋಡುತ್ತಿದ್ದ ಪುರುಷೋತ್ತಮರ ಸ್ಥಿತಿ ಅವರ ಕುಟುಂಬಸ್ಥರ ಮನಸ್ಸನ್ನು ತಲ್ಲಣಗೊಳಿಸಿದೆ.

ಸಂಸಾರಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದ ಪುರುಷೋತ್ತಮರು ಇದೀಗ ಸ್ಪೋಟಗಳ ಗಾಯಗಳಿಂದ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾರೆ.

ಆಟೋ ಚಾಲಕ ಪುರುಷೋತ್ತಮ್ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರೂ ಅಪಾರ ದೈವಭಕ್ತ. ಮಹಾಕಾಳಿ ಮತ್ತು ಕೊರಗಜ್ಜ ದೈವದ ಭಕ್ತ ಕೂಡಾ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ. ಇವರು ದುರಂತದಲ್ಲಿ ಪಾರಾಗಲು ಉಜ್ಜೋಡಿಯ ಮಹಾಕಾಳಿ ಕೊರಗಜ್ಜ ದೈವಗಳೇ ಕಾರಣ ಅಂತ’ ಪತ್ನಿ ಚಿತ್ರಾಕ್ಷಿ ಕಣ್ಣೀರಿಟ್ಟಿದ್ದಾರೆ.

 

1 Comment

1 Comment

  1. Gopal

    21/11/2022 at 10:58 PM

    It’s True , God has protected all of us , Wishing Purushottam speedy recovery ,

Leave a Reply

Your email address will not be published. Required fields are marked *

DAKSHINA KANNADA

ಜಾನುವಾರು ಸಾಗಾಟಗಾರರ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ..!

Published

on

ಮಂಗಳೂರು: ಜಾನುವಾರು ಅಕ್ರಮ ಸಾಗಾಟದ ತಂಡವೊಂದರ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.

ಫರಂಗಿಪೇಟೆ ಸಮೀಪದ ಅಮೆಮಾರ್‌ನ ನಿವಾಸಿಗಳು ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಗುರುವಾರದಂದು ತಸ್ಲೀಮ್ ಮತ್ತು ಆತನ ಗುಂಪಿನ ಸದಸ್ಯರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.

ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

DAKSHINA KANNADA

ಇಂದು ಕರ್ನಾಟಕ ಬಂದ್‌: ಕರಾವಳಿಗರಿಂದ ನೈತಿಕ ಬೆಂಬಲ-ಬಸ್‌, ಹೊಟೇಲ್‌, ಶಾಲೆಗಳು ಎಂದಿನಂತೆ

Published

on

ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.

ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.

ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.

ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.

ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Continue Reading

LATEST NEWS

Trending