ಮಂಗಳೂರು/ಮುಂಬೈ : ಖ್ಯಾತ ನಿರ್ಮಾಪಕ ಕೃಷ್ಣ ಕುಮಾರ್ ಆಘಾ*ತಕ್ಕೊಳಗಾಗಿದ್ದಾರೆ. ಅವರ 20 ವರ್ಷದ ಮಗಳು ತಿಶಾ ಕುಮಾರ್ ಇಹಲೋಕ ತ್ಯಜಿಸಿದ್ದಾಳೆ. ಹೌದು, ಚಿಕ್ಕ ವಯಸ್ಸಿನಲ್ಲೇ ತಿಶಾ ನಿ*ಧನರಾಗಿದ್ದಾರೆ. ಅನಿಮಲ್ ಹಿಟ್ ಆದ ಸಂಭ್ರಮದಲ್ಲಿದ್ದ ನಿರ್ಮಾಪಕ ಕೃಷ್ಣ ಕುಮಾರ್ ದುಃಖ ಅನುಭವಿಸುವಂತಾಗಿದೆ.
ತಿಶಾ ಕ್ಯಾನ್ಸ*ರ್ನಿಂದ ಬಳಲುತ್ತಿದ್ದರು. ಜುಲೈ 18ರಂದು ತಿಶಾ ನಿಧ*ನ ಹೊಂದಿದ್ದು, ಇಂದು (ಜುಲೈ 19) ಕುಟುಂಬ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಕೃಷ್ಣ ಕುಮಾರ್ ಅವರು ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ.
‘ಕೃಷ್ಣ ಕುಮಾರ್ ಅವರ ಮಗಳು ತಿಶಾ ಅವರು ತೀರಿಕೊಂಡಿದ್ದಾರೆ. ಅನಾರೋಗ್ಯದ ವಿರುದ್ಧ ಅವರು ಹೋರಾಡುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ. ಕೆಲವು ಮೂಲಗಳ ಪ್ರಕಾರ, ತಿಶಾ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರಂತೆ. ಅವರು ಅಲ್ಲಿಯೇ ನಿಧ*ನ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ : Watch : ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ; ಮೂಕ ಜೀವಿಗಳು ಬ*ಲಿ
ತಿಶಾ ತಂದೆ ಕೃಷ್ಣಕುಮಾರ್ ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕೊನೆಯದಾಗಿ ಕೃಷ್ಣ ಕುಮಾರ್ ರಣಬೀರ್ ಕಪೂರ್ ಅಭಿನಯದ ಆ್ಯನಿಮಲ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೂಲ್ ಬೂಲಯ್ಯ 2, ಆಶಿಖಿ, ತಪ್ಪಡ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
Pingback: ಕಾಪು ಮಾರಿಯಮ್ಮನ ಆಶೀರ್ವಾದ; ಟಿ20 ನಾಯಕನಾದ ಸೂರ್ಯಕುಮಾರ್ ಯಾದವ್ - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ರೇಣುಕಾಸ್ವಾಮಿ ಕೊ*ಲೆ ಪ್ರಕರಣ : 4ನೇ ಆರೋಪಿಯ ತಾಯಿ ನಿ*ಧನ - NAMMAKUDLA NEWS - ನಮ್ಮಕುಡ್ಲ ನ್ಯೂಸ್