ಮಂಗಳೂರು/ನವದೆಹಲಿ : ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಸೈಬರ್ ಅಥವಾ ಮೊಬೈಲ್ ಸಂಬಂಧಿತ ಅಪರಾಧಗಳು ಜಾಸ್ತಿಯಾಗಿವೆ. ಇದಕ್ಕೆ ಸಾಮಾಜಿಕ ಮಾಧ್ಯಮ ಹೊರತಾಗಿಲ್ಲ,
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ವರದಿ ಬಿಡುಗಡೆ ಮಾಡಿದ್ದು, ಸೈಬರ್ ಕ್ರೈಮ್ ಅಪರಾಧಗಳಲ್ಲಿ ಸೈಬರ್ ಕ್ರಿಮಿನಲ್ ಗಳು ದುರುಪಯೋಗಪಡಿಸಿಕೊಂಡ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ವಾಟ್ಸಾಪ್ ಅಗ್ರಸ್ಥಾನದಲ್ಲಿದೆ. ನಂತರ ಟೆಲಿಗ್ರಾಮ್ ಮತ್ತು ಇನ್ ಸ್ಟಾಗ್ರಾಮ್ ಸೈಬರ್ ವಂಚಕರ ನೆಚ್ಚಿನ ಬೇಟೆಯಾಡುವ ವೇದಿಕೆಗಳಾಗಿವೆ.
ದಾಖಲಾದ ಒಟ್ಟು ಪ್ರಕರಣಗಳು
2024ರ ಸಾಲಿನ ಮೊದಲ ಮೂರು ತಿಂಗಳಲ್ಲಿ, ವಾಟ್ಸಾಪ್ ಮೂಲಕ ಒಟ್ಟು 43,797 ಸೈಬರ್ ವಂಚನೆಗಳ ದೂರುಗಳನ್ನು ಸ್ವೀಕರಿಸಲಾಗಿದೆ. ಟೆಲಿಗ್ರಾಮ್ ಮೂಲಕ ಒಟ್ಟು 22,680 ಮತ್ತು ಇನ್ ಸ್ಟಾಗ್ರಾಮ್ ವಿರುದ್ದ 19,800 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವರದಿಯಲ್ಲಿ ಹೇಳಿದೆ.
ಸೈಬರ್ ವಂಚಕರಿಗೆ ಸೈಬರ್ ಅಪರಾಧಗಳನ್ನು ಮಾಡಲು ಗೂಗಲ್ ಪ್ಲಾಟ್ ಫಾರ್ಮ್ ಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಗೂಗಲ್ ಜಾಹೀರಾತುಗಳು ಅನುಕೂಲಕರವಾಗಿದೆ ಎಂದು 2023-24ರ ವಾರ್ಷಿಕ ವರದಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಸೈಬರ್ ವಂಚನೆಗೆ ಬಲಿಯಾಗುತ್ತಿರುವವರು ಯಾರು ?
ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಅಪರಾಧಗಳು ಇನ್ನಷ್ಟು ಜಾಸ್ತಿಯಾಗಿವೆ. ಇದಕ್ಕೆ ನಿರುದ್ಯೋಗಿ ಯುವಕರು, ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಬಡವರನ್ನು ಗುರಿಯಾಗಿಸಿಕೊಂಡು ದೊಡ್ಡ ದೊಡ್ಡ ಮೊತ್ತವನ್ನು ಕಳೆದುಕೊಳ್ಳುತ್ತಿದ್ದಾರೆ.
ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (14C) ಡಿಜಿಟಲ್ ಅಕ್ರಮ ಸಾಲಗಳ ಅಪ್ಲಿಕೇಶನ್ ಗಳನ್ನು ತೆರೆಯುವುದರಿಂದ, ವೈಯಕ್ತಿಕ ಮಾಹಿತಿ ಅಥವಾ ವ್ಯವಹಾರಿಕ ವಿಷಯಗಳು ಸೈಬರ್ ವಂಚಕರ ಕೈ ಸೇರುತ್ತಿದೆ. ಇನ್ನೊಂದೆಡೆ ಬ್ಯಾಂಕಿಂಗ್ ಮಾಲ್ ವೇರ್ ಗಳು (Hashes) ಮೂಲಕ ಗೂಗಲ್ ನ ಉಚಿತ ಹೋಸ್ಟಿಂಗ್ ಗಳ (Firebase Domain) ದುರುಪಯೋಗದಂತಹ ಪೂರ್ವಭಾವಿ ಕ್ರಿಯೆಗಳಿಗೆ ಕೆಲವು ಗೌಪ್ಯ ಮತ್ತು ಗುಪ್ತಚರ ಮಾಹಿತಿಗಳನ್ನು ಇತರರ ನಡುವೆ ಹಂಚಿಕೊಳ್ಳಲು ಗೂಗಲ್ ಮತ್ತು ಫೆಸ್ಬುಕ್ ಪಾಲುದಾರಿಕೆ ಹೊಂದಿದೆ.
ಭಾರತದಲ್ಲಿ ಅಕ್ರಮ ಸಾಲ ನೀಡುವ ಅಪ್ಲಿಕೇಶನ್ ಗಳನ್ನು ಪ್ರಾರಂಭಿಸಲು ಸೈಬರ್ ವಂಚಕರ ಜಾಲ ಅನುಕೂಲಕರ ಫೇಸ್ ಬುಕ್ ಜಾಹೀರಾತುಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಅಂತಹ ಲಿಂಕ್ ಗಳನ್ನು ಮೊದಲೇ ಗುರುತಿಸಿ, ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಜೊತೆಗೆ ಫೇಸ್ ಬುಕ್ ಅಪ್ಲಿಕೇಶನ್ ನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಕೈಗೊಳ್ಳಬೇಕಾದ ಕ್ರಮಗಳು
ಒಮ್ಮೆ ನೀವು ಸೈಬರ್ ವಂಚನೆಗೆ ಬಲಿಯಾಗಿದ್ದೀರಿ ಎಂದು ಅರಿತುಕೊಂಡರೆ, ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಸೊರಿಕೆಯಾಗಿದೆ ಎಂದು ಅವರಿಗೆ ತಿಳಿಸಿ.