ಮಂಗಳೂರು: ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧ ನೀತಿ ತಾಳುತ್ತಿದೆ. ಅಹಿಂದ ಎನ್ನುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ಶರತ್ ಮಡಿವಾಳ ಸತ್ತಾಗ ಏನು ಮಾಡಿದಿರಿ? ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಸ್ವಾಯತ್ತತೆ ಕೊಡುವ ಯೋಜನೆಯನ್ನು ನಾವು ಸ್ವಾಗತ್ತಿಸುತ್ತೇವೆ.
ಇದು ಈ ರಾಜ್ಯದ ಸಮಸ್ತ ಹಿಂದೂಗಳ ಭಾವನೆಯಾಗಿತ್ತು. ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಮತಾಂತರ, ಸಿಎಎಗೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ.
ಈಗ ದೇವಸ್ಥಾನ ಸ್ವಾಯತ್ತತೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಟಿನ ಆಶೆಯಲ್ಲಿ ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದೆ. ಕಾಂಗ್ರೆಸ್ ನೀಚಕೃತ್ಯಕ್ಕೆ ಜನ ಅದಕ್ಕೆ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು
ದೇವಸ್ಥಾನ ಸ್ವಾಯತ್ತತೆ ವಿಷಯದಲ್ಲಿ ಹಿಂದೂ ಸಮಾಜ ಖುಷಿಯಲ್ಲಿದೆ. ಸಿದ್ರಾಮಣ್ಣ ಟಿಪ್ಪು ಜಯಂತಿ ಮುಖಾಂತರ ಸಮಾಜವನ್ನು ಒಡೆದಿರಿ. ಶಾದಿ ಭಾಗ್ಯದಲ್ಲಿ ಸಮಾಜವನ್ನು ಒಡೆದರು. ಹಿಂದೂ ಸಮಾಜವನ್ನು ಒಡೆದು ಆಳಿದಿರಿ. ಕಾಂಗ್ರೆಸ್ ಅನ್ನು ಹಿಂದೂ ಸಮಾಜ ತಿರಸ್ಕಾರ ಮಾಡುತ್ತದೆ ಎಂದು ಹೇಳಿದರು.