Monday, May 23, 2022

ಕಾಂಗ್ರೆಸ್‌ ಸಂಪೂರ್ಣ ಹಿಂದೂ ವಿರೋಧ ನೀತಿ ತಾಳುತ್ತಿದೆ: ಸಂಸದ ನಳಿನ್‌ ಆಕ್ರೋಶ

ಮಂಗಳೂರು: ಕಾಂಗ್ರೆಸ್‌ ಸಂಪೂರ್ಣ ಹಿಂದೂ ವಿರೋಧ ನೀತಿ ತಾಳುತ್ತಿದೆ. ಅಹಿಂದ ಎನ್ನುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಶಾಂತ್‌ ಪೂಜಾರಿ, ಕುಟ್ಟಪ್ಪ, ಶರತ್‌ ಮಡಿವಾಳ ಸತ್ತಾಗ ಏನು ಮಾಡಿದಿರಿ? ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ನೀಡಿದ್ದಾರೆ.


ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಸ್ವಾಯತ್ತತೆ ಕೊಡುವ ಯೋಜನೆಯನ್ನು ನಾವು ಸ್ವಾಗತ್ತಿಸುತ್ತೇವೆ.

ಇದು ಈ ರಾಜ್ಯದ ಸಮಸ್ತ ಹಿಂದೂಗಳ ಭಾವನೆಯಾಗಿತ್ತು. ಕಾಂಗ್ರೆಸ್‌ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಮತಾಂತರ, ಸಿಎಎಗೆ ಕಾಂಗ್ರೆಸ್‌ ವಿರೋಧ ಮಾಡುತ್ತಿದೆ.

ಈಗ ದೇವಸ್ಥಾನ ಸ್ವಾಯತ್ತತೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಟಿನ ಆಶೆಯಲ್ಲಿ ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದೆ. ಕಾಂಗ್ರೆಸ್‌ ನೀಚಕೃತ್ಯಕ್ಕೆ ಜನ ಅದಕ್ಕೆ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು

ದೇವಸ್ಥಾನ ಸ್ವಾಯತ್ತತೆ ವಿಷಯದಲ್ಲಿ ಹಿಂದೂ ಸಮಾಜ ಖುಷಿಯಲ್ಲಿದೆ. ಸಿದ್ರಾಮಣ್ಣ ಟಿಪ್ಪು ಜಯಂತಿ ಮುಖಾಂತರ ಸಮಾಜವನ್ನು ಒಡೆದಿರಿ. ಶಾದಿ ಭಾಗ್ಯದಲ್ಲಿ ಸಮಾಜವನ್ನು ಒಡೆದರು. ಹಿಂದೂ ಸಮಾಜವನ್ನು ಒಡೆದು ಆಳಿದಿರಿ. ಕಾಂಗ್ರೆಸ್‌ ಅನ್ನು ಹಿಂದೂ ಸಮಾಜ ತಿರಸ್ಕಾರ ಮಾಡುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಆಟೋ ರಿಕ್ಷಾ- ಪಿಕಪ್ ಢಿಕ್ಕಿ: ಓರ್ವನಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ನಡೆದಿದೆ.ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...

ಉಡುಪಿ: ಭಾರಿ ಅಲೆಗೆ ದೋಣಿ ಮುಳುಗಡೆ-ಐವರು ಮೀನುಗಾರರ ರಕ್ಷಣೆ

ಉಡುಪಿ: ಭಾರಿ ಗಾತ್ರದ ಅಲೆಗೆ ದೋಣಿಯೊಂದು ಮುಳುಗಡೆಯಾದ ಘಟನೆ ಉಡುಪಿ ಜಿಲ್ಲೆಯ ಶಿರೂರಿನ ಕಡಲ ತೀರದಲ್ಲಿ ನಡೆದಿದೆ. ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಕಡಲ ತೀರದಿಂದ ಆಳ...

ಉಜಿರೆ SDM ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ನಿಧನ

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ (66) ಅನಾರೋಗ್ಯದಿಂದಾಗಿ ನಿನ್ನೆ ಮಧ್ಯರಾತ್ರಿ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ...