LATEST NEWS
ನೆಚ್ಚಿನ ಡಿಸಿಯ ಜೊತೆ ಮಕ್ಕಳ ಸೆಲ್ಫೀ ಟೈಂ..! ಫಿಧಾ ಆದ ಮುಲ್ಲೈ ಮುಗಿಲನ್..!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರನ್ನು ನೇರವಾಗಿ ಕಾಣದೇ ಇದ್ರೂ ಪುಟ್ಟ ಮಕ್ಕಳಿಗೆ ಅವರಂದ್ರೆ ತುಂಬಾ ಇಷ್ಟ. ಹೀಗಿರುವಾಗ ಜಿಲ್ಲಾಧಿಕಾರಿ ತಮ್ಮ ಕಣ್ಣ ಮುಂದೆ ಬಂದ್ರೆ ಮಕ್ಕಳು ಸುಮ್ಮನಿರ್ತಾವೆಯೇ ? 78 ನೇ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾಧಿಕಾರಿಯನ್ನು ಕಂಡ ಮಕ್ಕಳು ಅವರ ಕೈ ಕುಲುಕಲು ಮುಗಿ ಬಿದ್ದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಕುದ್ಮಾಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲಾಡಳಿತದಿಂದ ನಡೆಯುವ ಕಾರ್ಯಕ್ರಮ ಆಗಿರೋ ಕಾರಣ ಜಿಲ್ಲಾಧಿಕಾರಿ ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಭಾ ಕಾರ್ಯಕ್ರಮ ಮುಗಿಸಿ ಸಭಾಂಗಣದಿಂದ ಹೊರಟಿದ್ದ ಡಿಸಿ ಮುಲೈ ಮುಗಿಲನ್ ಅವರಿಗೆ ಅಲ್ಲೇ ಇದ್ದ ಕೆಲವು ಮಕ್ಕಳು ಕೈ ಮುಗಿದು ವಂದಿಸಿದ್ದಾರೆ. ಇದೇ ವೇಳೆ ಕೆಲ ಮಕ್ಕಳು ಧೈರ್ಯ ಮಾಡಿ ಅವರ ಕೈ ಕುಲುಕಲು ಮುಂದಾಗಿದ್ದಾರೆ. ಯಾವಾಗ ಜಿಲ್ಲಾಧಿಕಾರಿಗಳು ನಗುತ್ತಾ ಮಕ್ಕಳ ಕೈ ಕುಲುಕಲು ಆರಂಭಿಸಿದ್ರೋ ಅಲ್ಲಿದ್ದ ಬಹುತೇಕ ಮಕ್ಕಳು ಜಿಲ್ಲಾದಿಕಾರಿ ಮುಲ್ಲೈ ಮುಗಿಲನ್ ಅವರನ್ನು ಸುತ್ತುವರೆದಿದ್ದಾರೆ.
ಹಲವು ಮಕ್ಕಳು ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಕಣ್ಣಾರೆ ಕಂಡಿದ್ದ ಕಾರಣ ಅವರ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಕೆಲವರು ಓಡಿ ಹೋಗಿ ತಮ್ಮ ಪೊಷಕರ ಕೈನಿಂದ ಮೊಬೈಲ್ ತೆಗೆದುಕೊಂಡು ಬಂದು ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕೂಡ ಮಕ್ಕಳ ಈ ಪ್ರೀತಿಕಂಡು ಒಂದು ಕ್ಷಣ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಹೋಗಿದ್ದಾರೆ. ಮಕ್ಕಳನ್ನು ನಿರಾಸೆ ಪಡಿಸದೆ ಮಕ್ಕಳ ಕೈಕುಲುಕಿ ಸೆಲ್ಫಿ ತೆಗೆದು ತಾವೂ ಕೂಡಾ ಖಷಿ ಪಟ್ಟಿದ್ದಾರೆ. ಮಳೆಗಾಲದಲ್ಲಿ ರಜೆಯ ಮೂಲಕ ಬಹುತೇಕ ಎಲ್ಲಾ ಮಕ್ಕಳ ಬಾಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಹೆಸರು ಬರುತ್ತಿರುತ್ತದೆ. ಜೋರು ಮಳೆ ಬಂದ್ರೆ ಸಾಕು ಜಿಲ್ಲಾಧಿಕಾರಿಗಳು ರಜೆ ಕೊಡ್ತಾರಾ ಅಂತ ಕಾಯುವ ಮಕ್ಕಳಿಗೆ ಇವರು ಅಚ್ಚುಮೆಚ್ಚಿನ ಜಿಲ್ಲಾಧಿಕಾರಿ. ಹಾಗಂತ ಜಿಲ್ಲಾಧಿಕಾರಿಗಳು ಮಕ್ಕಳಿಗೆ ತೊಂದರೆ ಆಗದೇ ಇರಲಿ ಎಂಬ ಕಾಳಜಿಯಿಂದ ರಜೆ ನೀಡ್ತಾರೆ ಆದ್ರೂ ಇಂದು ಮಕ್ಕಳ ಪ್ರೀತಿ ನೋಡಿ ಸಂಪೂರ್ಣ ಫಿದಾ ಆಗಿದ್ದಾರೆ.
LATEST NEWS
ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು
ಕಾಸರಗೋಡು : ಸಾ*ವು ಹೇಗೆ ಬರುತ್ತೆ ಎಂಬುದನ್ನು ಹೇಳಲಾಗದು. ಅದರಲ್ಲೂ ಮಕ್ಕಳತ್ತ ಗಮನ ಇರಲೇಬೇಕು. ಅವರ ಚಲನವಲನ ಗಮನಿಸುತ್ತಿರಬೇಕು. ಏನಾದರೂ ತಿನ್ನಲು ಕೊಡುವಾಗಲಂತೂ ಜಾಗೃತೆ ವಹಿಸಲೇಬೇಕು.
ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಗುವೊಂದು ಬಾಟಲಿ ಮುಚ್ಚಳ ನುಂಗಿ ಅಸುನೀಗಿತ್ತು. ಇದೀಗ ಮತ್ತೊಂದು ಘಟನೆ ಕೇರಳದಲ್ಲಿ ವರದಿಯಾಗಿದೆ.
ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಲ್ಲಿ ಸಿಲುಕಿ 6 ವರ್ಷದ ಮಗು ಇಹಲೋಕ ತ್ಯಜಿಸಿರುವ ಘಟನೆ ಪೆರುಂಬವೂರಿನಲ್ಲಿ ನಡೆದಿದೆ. ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಎಂಬವರ ಪುತ್ರಿ ನೂರಾ ಫಾತಿಮಾ(6) ಮೃ*ತ ಬಾಲಕಿ.
ಇದನ್ನೂ ಓದಿ : ಅಯ್ಯೋ ಗಣಪ, ಎಡವಟ್ಟಾಯ್ತು! 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು
ಭಾನುವಾರ(ಸೆ.8) ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ಹಣ್ಣನ್ನು ತಿನ್ನುತ್ತಿದ್ದಾಗ ಈ ದುರಂ*ತ ಸಂಭವಿಸಿದೆ. ಗಂಟಲಲ್ಲಿ ರಂಬುಟಾನ್ ಹಣ್ಣಿನ ಬೀಜ ಸಿಲುಕಿದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಇಹಲೋಕ ತ್ಯಜಿಸಿದ್ದಳು. ನೂರಾ ಫಾತಿಮಾ, ಕಂಡಂತರ ಹಿದಾಯತುಲ್ ಇಸ್ಲಾಂ ಶಾಲೆಯಲ್ಲಿ ಯು.ಕೆ.ಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
LATEST NEWS
ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು
ಕೋಟ: ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನಂಬಿ ಯುವತಿಯೊಬ್ಬಳು 60 ಸಾವಿರ ರೂ. ಹಣವನ್ನು ಕಳೆದುಕೊಂಡಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನೋಡಿ ಯುವತಿಯೊಬ್ಬಳು 60 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಬಂದ ಲಿಂಕನ್ನು ಅಕ್ಷತಾ(26 ವ) ಸ್ವೀಕರಿಸಿದ್ದಾರೆ. ಅದರಂತೆ ಲಿಂಕ್‌ಅನ್ನು ಒತ್ತಿದ ಕೂಡಲೇ ಅದು ವ್ಯಾಟ್ಸಾಪ್ ನಂಬರ್‌ಗೆ ಸಂಪರ್ಕಗೊಂಡಿದೆ. ಅದರಲ್ಲಿ ಮೊಬೈಲ್‌ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ 200 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಬೋನಸ್ ಎಂದು ಹೇಳಿ ಅಕ್ಷತಾ ರವರಿಗೆ 60 ರೂಪಾಯಿ ಹಣವನ್ನು ನೀಡಲಾಗಿದೆ. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯರಿಗೆ ಕೋಟ್ಯಾಂತರ ರೂಪಾಯಿ ಆನ್ಲೈನ್ ವಂಚನೆ..! ಆರೋಪಿಗಳಿಂದ 13,95,000 ನಗದು ವಶ..!!
ಜಾಹಿರಾತುದಾರರು 1/09/2024ರಂದು ಒಂಭತ್ತು ಆರ್ಡರ್‌ಗಳನ್ನು ಮುಗಿಸುವಂತೆ ತಿಳಿಸಿದ್ದು ಮೊದಲಿಗೆ 500ರೂ. ಪಾವತಿಸಿ ಅಕ್ಷತಾ ಕೆಲಸವನ್ನು ಆರಂಭಿಸಿದ್ದಾರೆ. ಪ್ರತಿಯೊಂದು ಆರ್ಡರ್‌ಗೆ ಹಣ ಪಾವತಿಸಲು ಅವರು ತಿಳಿಸಿದ್ದು ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ಹಣ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
LATEST NEWS
ಮಣಿಪುರದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ: 3 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ
ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಲಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಗಸ್ತು ತಿರುಗಲು ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.
- LATEST NEWS6 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- DAKSHINA KANNADA5 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM5 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
- LATEST NEWS1 day ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್