ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿಸಿದ ಸಾಹಸವಂತ ಪತಿ ಮಹಾಶಯ..!
ನೈಜೀರಿಯಾ: ವಿವಾಹವಾದರೆ ಹೆಂಡತಿಯನ್ನು ಸಂಭಾಳಿಸುವುದು ಕಷ್ಟ ಎಂದು ವಿವಾಹಿತ ಪುರುಷರು ತಮಾಷೆಗೆ ಹೇಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಆರು ಮಹಿಳೆಯರನ್ನು ವಿವಾಹವಾಗಿದ್ದಲ್ಲದೆ ಏಕಕಾಲದಲ್ಲಿ ಅವರೆಲ್ಲರನ್ನು ಗರ್ಭಿಣಿಯರನ್ನಾಗಿ ಮಾಡಿದ್ದಾನೆ.!ನೈಟ್ಕ್ಲಬ್ ಮಾಲೀಕ ಮೈಕ್ ಈಜ್ ನ್ವಾಲಿ ನ್ವೊಗು (ಪ್ರೆಟ್ಟಿ ಮೈಕ್) ಎಂಬಾತ ಆರು ಮಹಿಳೆಯರನ್ನು ವಿವಾಹವಾಗಿ ಅವರೆಲ್ಲರನ್ನು ಒಂದೇ ಬಾರಿಗೆ ಬಸುರಿ ಮಾಡಿದ್ದಾನೆ.
ವಿಲಿಯಂ ಉಚೆಂಬಾ ಅವರ ವಿವಾಹದಂದು ಮೈಕ್ ಈಜ್ ನ್ವಾಲಿ ನ್ವೊಗು (ಪ್ರೆಟ್ಟಿ ಮೈಕ್) ತನ್ನ ಆರು ಗರ್ಭಿಣಿ ಮಡದಿಯರ ಜೊತೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಪರಿಚಯ ಮಾಡಿಸಿದ್ದಾನೆ.
ಜೊತೆಗೆ ಒಬ್ಬೊಬ್ಬರನ್ನೇ ಸರದಿಯಲ್ಲಿ ಕರೆದು ಅವರ ಹೊಟ್ಟೆಯನ್ನು ಉಜ್ಜುತ್ತಾ ವಿಡಿಯೋಗೆ ಫೋಸು ನೀಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೈಕ್ ಈಜ್ ನ್ವಾಲಿ ನ್ವೊಗು (ಪ್ರೆಟ್ಟಿ ಮೈಕ್) ಮತ್ತು ಅವನ ಹೆಂಡತಿಯರ ವಿಡಿಯೋ ವೈರಲ್ ಆಗಿದೆ.