ಮಂಗಳೂರು/ನವದೆಹಲಿ : 9/11 ಅಮೆರಿಕಾ ಟ್ವಿನ್ ಟವರ್ ಮೇಲೆ ವೈಮಾನಿಕ ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಜೀವಂತವಾಗಿದ್ದಾನೆ. ಆತ ಭ*ಯೋತ್ಪಾದಕ ಗುಂಪನ್ನು ಸಕ್ರಿಯವಾಗಿ ಮುನ್ನಡೆಸ್ತಾ ಇದ್ದಾನೆ ಎಂಬ ಗುಪ್ತಚರ ವರದಿ ಲಭ್ಯವಾಗಿದೆ.
2019 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸದ್ಯ ತಾಲಿಬಾನ್ ನಾಯಕರ ಸಂಪರ್ಕದಲ್ಲಿ ಇದ್ದಾನೆ ಎಂಬ ಮಾಹಿತಿ ಕೂಡ ಇದೆ. ಅಲ್ ಖೈದಾ ಸಂಘಟನೆಯನ್ನು ಮತ್ತೆ ಪುನರ್‌ಸ್ಥಾಪಿಸಲು ಹಮ್ಜಾ ಬಿನ್ ಲಾಡೆನ್ ಪ್ರಯತ್ನ ನಡೆಸಿದ್ದಾನೆ ಎಂದು ಗುಪ್ತಚರ ವರದಿ ಹೇಳಿದೆ.
ತಾಲಿಬಾನ್ ನಾಯಕರ ಜೊತೆ ಸಭೆಗಳನ್ನು ನಡೆಸುತ್ತಿರುವ ಹಮ್ಜಾ ಬಿನ್ ಲಾಡೆನ್‌ನನ್ನು ತಾಲಿಬಾನ್ ರಕ್ಷಣೆ ಮಾಡುತ್ತಿದ್ದು, ಇದು ಅಲ್ ಖೈದಾ ಮತ್ತು ತಾಲಿಬಾನ್ ನಡುವಿನ ಈ ಸಂಬಂಧ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಇರಾಕ್ ಯುದ್ಧದ ನಂತರ ಅಲ್ ಖೈದಾ ಸಂಘಟನೆಯನ್ನು ಅತ್ಯಂತ ಪ್ರಬಲವಾಗಿ ಕಟ್ಟಲಾಗುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
34 ವರ್ಷದ ಹಮ್ಜಾ ಕಾಬೂಲ್‌ನಿಂದ ಪೂರ್ವಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜಲಾಲಾಬಾದ್‌ನಲ್ಲಿ ನೆಲೆಸಿದ್ದಾನೆ. ಅವನ ಗುರಿ ಪಾಶ್ಚಿಮಾತ್ಯ ದೇಶಗಳಾಗಿದ್ದು, ಭವಿಷ್ಯದಲ್ಲಿ ಈ ದೇಶಗಳ ಮೇಲೆ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಕೂಡ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾನೆ.
ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹಮ್ಜಾ ಮತ್ತು ಅವನ ನಾಲ್ವರು ಪತ್ನಿಯರು ಇರಾನ್‌ನಲ್ಲಿ ಆಶ್ರಯ ಪಡೆದಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಮ್ಜಾ ಬಿನ್ ಲಾಡೆನ್ ಯಾರು?
ಹಮ್ಜಾ ಬಿನ್ ಲಾಡೆನ್ ಜಿಹಾದ್‌ನ ರಾಜಕುಮಾರ ಎಂದು ಕು*ಖ್ಯಾತಿಯನ್ನು ಪಡೆದುಕೊಂಡ ಉ*ಗ್ರನಾಗಿದ್ದಾನೆ. ಒಸಾಮಾ ಬಿನ್ ಲಾಡೆನ್ ನ 20 ಮಕ್ಕಳಲ್ಲಿ ಈತ 15ನೇಯವನು . ಒಸಾಮಾ ಬಿನ್ ಲಾಡೆನ್‌ನ ಮೂರನೇ ಹೆಂಡತಿಯಲ್ಲಿ ಈತ ಜನಿಸಿದ್ದಾನೆ. 9/11 ರ ದಾಳಿಯ ಮೊದಲು ಅಫ್ಘಾನಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಜೊತೆ ಹಾಜರಿದ್ದ ಈತ ವಿಡಿಯೋ ಸಂದೇಶದಲ್ಲೂ ತಂದೆಯ ಜೊತೆ ಕಾಣಿಸಿಕೊಂಡಿದ್ದ.
ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ
ದಾ*ಳಿಯಲ್ಲಿ ಹ*ತನಾಗಿದ್ದಾನೆ ಎಂದು ಟ್ರಂಪ್ ಘೋಷಣೆ :
2019 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮ್ಜಾ ಬಿನ್ ಲಾಡೆನ್ ಹತನಾಗಿದ್ದಾನೆ ಎಂದು ಘೋಷಣೆ ಮಾಡಿದ್ದರು. ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ನಡೆದ ಭ*ಯೋತ್ಪಾನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹಮ್ಜಾನನ್ನು ಕೊ*ಲ್ಲಲಾಗಿದೆ ಎನ್ನಲಾಗಿತ್ತು. ಆದ್ರೆ, ಆತನ ಮ*ರಣವನ್ನು ದೃಢೀಕರಿಸಲು ಡಿಎನ್‌ಎ ಸಾಕ್ಷ್ಯಗಳು ಲಭಿಸಿರಲಿಲ್ಲ.