ಮಂಗಳೂರು/ಕಜಕಿಸ್ತಾನ: ಪೈಲಟ್ ನಿಯಂತ್ರಣ ಕಳೆದುಕೊಂಡ ಪರಿಣಾಮ ವಿಮಾನ ನೋಡ ನೋಡುತ್ತಲೇ ನೆಲಕ್ಕೆ ಅಪ್ಪಳಿಸಿ ಸ್ಪೋಟಗೊಂಡಿದೆ. ಕಜಕಿಸ್ತಾನದಲ್ಲಿ ಈ ಭೀಕರ ಅ*ಪಘಾತವಾಗಿದ್ದು, ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನವಾಗಿ, ಕನಿಷ್ಠ 67 ಮಂದಿ ಸಾ*ವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
70ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಅಜರ್ ಬೈಜಾನ್ ಏರ್ ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.
ಇನ್ನೂ ಮೂಲಗಳ ಪ್ರಕಾರ ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ರಷ್ಯಾದ ಗ್ರೋಜ್ನಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಗ್ರೋಜ್ನಿಯಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ ವಿಮಾನ ಹಾರಾಟ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಗ ಬದಲಾವಣೆಗೆ ಸೂಚಿಸಲಾಗಿತ್ತು.
ಇದನ್ನೂ ಓದಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರ ಸಾ*ವು !
ಆದರೆ ಅಕ್ತಾವು ಬಳಿ ವಿಮಾನ ಆಗಸದಲ್ಲೇ ಕೆಲ ಹೊತ್ತು ಸುತ್ತು ಹೊಡೆದಿದೆ. ಪೈಲಟ್ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಮನವಿ ಮಾಡಿದ್ದರಂತೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನಂತರ ವಿಮಾನ ನೇರವಾಗಿ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.
ಹಲವು ಪ್ರಯಾಣಿಕರ ರಕ್ಷಣೆ
ಇನ್ನು ವಿಮಾನ ಅಪಘಾತದಲ್ಲಿ ಅಚ್ಚರಿ ರೀತಿಯಲ್ಲಿ ಹಲವು ಪ್ರಯಾಣಿಕರು ಪಾರಾಗಿದ್ದು ಸುಮಾರು 25 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಪತನವಾದ ಕೂಡಲೇ ಸ್ಥಳೀಯರು ವಿಮಾನದೊಳಗಿದ್ದ 14 ಪ್ರಯಾಣಿಕರನ್ನು ಹೊರಗೆಳೆದಿದ್ದು, ಬಳಿಕ ಇತರರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಐದು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.