ಟೆಂಪೋ ಟ್ರಾವೆಲ್ಲರ್ ಪಲ್ಟಿ.. ಪರಿಶೀಲನೆ ವೇಳೆ ವಾಹನದಲ್ಲಿ ಪತ್ತೆಯಾಗಿದ್ದೇನು.?
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ಮಂಗಳವಾರ (ಮಾರ್ಚ್ 17) ಮುಂಜಾನೆ ಟೆಂಪೋ ಟ್ರಾವೆಲ್ಲರ್‌ವೊಂದು ಪಲ್ಟಿಯಾಗಿದೆ.
ಪರಿಶೀಲನೆ ವೇಳೆ ವಾಹನದಲ್ಲಿ ಜಾನುವಾರು ಮಾಂಸ ಪತ್ತೆಯಾಗಿದೆ.
ವಾಹನ ಪಲ್ಟಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಟಾರ್ಪಲ್‌ವೊಂದರಲ್ಲಿ ಕಟ್ಟಿಟ್ಟಿದ್ದ ಜಾನುವಾರು ಮಾಂಸ ಪತ್ತೆಯಾಗಿದೆ.
ಟೆಂಪೋ ಟ್ರಾವೆಲ್ಲರ್ ವಾಹನ ಹಾಸನ ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ವೇಳೆ ಲಾವತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಇದೀಗ ಮಾಂಸ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.