ತೆಲುಗು ಸಿನಿಮಾ ರಂಗದ ‘ಕುಂದನಪು ಬೊಮ್ಮ’ ಖ್ಯಾತಿಯ ತೆಲುಗು ನಟ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದ್ : ಭಾರತೀಯ ಚಿತ್ರರಂಗಕ್ಕೆ ಒಂದಲ್ಲ ಒಂದು ಅಘಾತಗಳು ಎದುರಾಗುತ್ತಲೇ ಇದ್ದು ಒಂದೆಡೆ ವಯಸ್ಸಿನ ಅಂತರವಿಲ್ಲದೆ ನಟ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದರೆ ಮತ್ತೊಂದೆಡೆ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.
ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇದೀಗ ತೆಲುಗು ಸಿನಿಮಾ ರಂಗದ ‘ಕುಂದನಪು ಬೊಮ್ಮ’ ಖ್ಯಾತಿಯ ತೆಲುಗು ನಟ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ನಿನ್ನೆ ತಮ್ಮ ವೈಜಾಗ್ ನ ಮನೆಯಲ್ಲಿ ಸುಧೀರ್ ತನ್ನ ಬದುಕನ್ನೇ ಅಂತ್ಯಗೊಳಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಶೂಟೌಟ್ ವೆಬ್ ಸಿರೀಸ್ ನಲ್ಲಿ ನಟಿಸಿದ್ದ ಹಾಗೂ ‘ಸೆಕೆಂಡ್ ಹ್ಯಾಂಡ್’ ಸಿನಿಮಾದ ಮೂಲಕ ತೆಲುಗು ಚಿತ್ರೋದ್ಯಮದಲ್ಲಿ ಹೆಸರು ಗಳಿಸಿದ್ದ ಸುಧೀರ್ ವರ್ಮಾ ಈ ಹಠತ್ ನಿರ್ಧಾರ ತೆಲುಗು ಚಿತ್ರರಂಗಕ್ಕೆ ದೊಡ್ಡ ಅಘಾತ ನೀಡಿದೆ.
ಸೆಕೆಂಡ್ ಹ್ಯಾಂಡ್, ಕುಂದನಪು ಬೊಮ್ಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಸುಧೀರ್, ಎರಡೂ ಚಿತ್ರಗಳ ಮೂಲಕ ಒಳ್ಳೆಯ ಹೆಸರನ್ನು ಸಂಪಾದಿಸಿದ್ದರು.
ಆದರೆ, ಇತ್ತೀಚಿನ ದಿನಗಳ ಲ್ಲಿ ಹೇಳಿಕೊಳ್ಳುವಂತಹ ಅವಕಾಶ ಅವರಿಗೆ ಸಿಗಲಿಲ್ಲ. ಹಾಗಾಗಿ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಪೊಲೀಸರು ಪ್ರಕರಣ ದಾಖಲು ಮಾಡಿ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.