ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ದಾವೋಸ್ನ ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ವರ್ಚುವಲ್ ಭಾಷಣ ಮಾಡುತ್ತಿದ್ದಾಗ ಟೆಲಿಪ್ರಾಂಪ್ಟರ್ ಕೈಕೊಟ್ಟಿತು. ಇದೀಗ ಈ ಎಡವಟ್ಟು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದೆ.
ನಿನ್ನೆ ಮೋದಿಯವರು ಭಾಷಣ ಮಾಡುತ್ತಿದ್ದಾಗ ಟೆಲಿಪ್ರಾಂಪ್ಟರ್ ಕೈಕೊಟ್ಟು ವಿಶ್ವ ಆರ್ಥಿಕ ವೇದಿಕೆಯ ಭಾಷಣವನ್ನು ಅವರು ಅರ್ಧಕ್ಕೆ ಮೊಟಕುಗೊಳಿಸಬೇಕಾಗಿ ಬಂದು ನಂತರ ಮೊದಲಿನಿಂದ ಆರಂಭಿಸಿದ ಪ್ರಸಂಗ ನಡೆಯಿತು.
ಒಂದು ಬಾರಿ ಟೆಲಿಪ್ರಾಂಪ್ಟರ್ ಕೈಕೊಟ್ಟಾಗ ಪ್ರಧಾನಿಯವರು ಎಡಗಡೆಗೆ ತಮ್ಮ ತಂಡದವರತ್ತ ನೋಡಿ ಏನಾಯಿತು ಎಂಬಂತೆ ಸನ್ನೆ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ, ಅಲ್ಲದೆ ಭಾಷಣದಲ್ಲಿ ತಡವರಿಸುತ್ತಾರೆ.
ನಂತರ ತಮ್ಮ ಇಯರ್ ಫೋನನ್ನು ಸರಿಪಡಿಸಿ ತಮ್ಮ ಮಾತು ಕೇಳಿಸುತ್ತಿದಿಯೇ ಎಂದು ವರ್ಚುವಲ್ ಭಾಷಣದಲ್ಲಿ ಭಾಗಿಯಾಗಿದ್ದವರನ್ನು ಕೇಳುತ್ತಾರೆ. ನಂತರ ಸ್ವಲ್ಪ ಹೊತ್ತು ಅವರ ಭಾಷಣ ಪ್ರಸಾರವಾಗಲೇ ಇಲ್ಲ. ಟೆಲಿಪ್ರಾಂಪ್ಟರ್ ಸರಿಯಾದಾಗ ಮತ್ತೆ ಪ್ರಧಾನಿ ಆರಂಭದಿಂದ ಮಾತು ಆರಂಭಿಸಿದರು.
ಇಂದು ಬೆಳಗ್ಗೆಯಿಂದಲೇ ಟ್ವಿಟ್ಟರ್ ನಲ್ಲಿ ಪ್ರಧಾನಿ ಕಳೆದ ರಾತ್ರಿ ಮಾಡಿದ್ದ ಭಾಷಣದ ತುಣುಕುಗಳು ಹರಿದಾಡುತ್ತಿವೆ. ಪ್ರತಿಪಕ್ಷಗಳು ಪ್ರಧಾನಿಯವರ ಭಾಷಣದ ವಿಡಿಯೊ ತುಣುಕನ್ನು ಹಾಕಿ ಹಲವು ರೀತಿಯಲ್ಲಿ ಟೀಕಿಸುತ್ತಿದ್ದಾರೆ,
ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಮೋದಿಯನ್ನು ಟೀಕಿಸುತ್ತಾ ಬರುತ್ತಿರುವ ಅವರ ವಿರೋಧಿಗಳು ಸಹ ನಿಜವಾದ ಪಪ್ಪು ಯಾರೆಂದು ನೋಡಿ,
ಟೆಲಿಪ್ರಾಂಪ್ಟರ್ ನಿಂತು ಹೋದರೆ ನಿಜವಾದ ಪಪ್ಪು ಯಾರೆಂದು ಸ್ಪಷ್ಟವಾಗುತ್ತದೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ ಇಂದು ಟೆಲಿಪ್ರಾಂಪ್ಟರ್ ಪಿಎಂ ಹ್ಯಾಶ್ ಟ್ಯಾಗ್ ಟ್ರೆಂಡಿಯಾಗಿದೆ.
ಬಿಜೆಪಿ ಮತ್ತು ಮೋದಿ ಬೆಂಬಲಿಗರು ಈ ದೋಷವನ್ನು ಸಭೆಯ ಮಾತಿನ ಅಂತ್ಯದಲ್ಲಿ ಹೀಗಾಯಿತಷ್ಟೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡರೆ,
ಇತರರು ಟೆಲಿಪ್ರಾಂಪ್ಟರ್ ಇಲ್ಲದೆ ಪ್ರಧಾನಿ ಮೋದಿ ಎರಡು ನಿಮಿಷ ಮಾತನಾಡಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ ಅಪಹಾಸ್ಯ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, ವಿಶ್ವದಲ್ಲಿನ ಒಬ್ಬ ಉತ್ತಮ ನಟ ಅವರು, ಆದರೆ ಸ್ಕ್ರಿಪ್ಟ್ ಇಲ್ಲದೆ ಒಂದು ನಿಮಿಷ ಮಾತನಾಡಲು ಅವರಿಗೆ ಸಾಧ್ಯವಿಲ್ಲ, ನೀರಿನಿಂದ ಹೊರೆತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
Clearly visible that it was a technical and not teleprompter issue .
Try harder next time Pappu 👍 pic.twitter.com/o8bahXkvi1
— BALA (@erbmjha) January 18, 2022