Home ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.16 ರಂದು TEDxSJEC ಯ ಮೊದಲ ಆವೃತ್ತಿ..

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.16 ರಂದು TEDxSJEC ಯ ಮೊದಲ ಆವೃತ್ತಿ..

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.16 ರಂದು TEDxSJEC ಯ ಮೊದಲ ಆವೃತ್ತಿ

ಮಂಗಳೂರು : ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಇದೇ ಫೆ.16ರಂದು ಕಾಲೇಜಿನ ಕಲಾಂ ಆಡಿಟೋರಿಯಂನಲ್ಲಿ TEDxSJEC ಯ ಮೊದಲ ಆವೃತ್ತಿಯನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ  “LOVE CONQUERS ALL” ಎಂಬ ಥೀಮ್ ಗೆ ಅನುಗುಣವಾಗಿ ತಮ್ಮ ಕೆಲಸದ ಮೇಲಿನ ಪ್ರೀತಿಯಿಂದ ಜೀವನದಲ್ಲಿ ಯಶಸ್ವಿಯಾದ ಸಂಪನ್ಮೂಲ ವ್ಯಕ್ತಿಗಳನ್ನು ಭಾಷಣಗಾರರಾಗಿ ಆಯ್ಕೆಮಾಡಲಾಗಿದೆ.

ವಿಶ್ವದಾಖಲೆ ಹೊಂದಿರುವ ಭಾರತೀಯ ಪೈಲಟ್  ಆರೋಹಿ ಪಂಡಿತ್, ಸಮಾಜ ಸೇವಕಿ ಕೊರಿನ್ ರಸ್ಕಿನ್ಹಾ,ಗಿರೀಶ್ ಭಾರದ್ವಾಜ್, ಓಂಕಾರ್ ಪ ವೈಷಾಕ್  ಜೆ.ಪಿ.,  ಡಾ. ಸ್ಮಿತಾ ಹೆಗ್ಡೆ,  ಅಭಿರಾಜ್,ರಿಯಾ ಶರ್ಮಾ ಸೇರಿದಂತೆ ಇನ್ನಿತರ  ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು  ಜನರನ್ನು ಒಟ್ಟುಗೂಡಿಸುವ ಗುರಿ ಹೊಂದಿದ್ದು, ಭಾಗವಹಿಸುವವರಲ್ಲಿ ತಮ್ಮ ಕೆಲಸದ ಬಗ್ಗೆ ಪ್ರೀತಿಯ ಚಿಂಗಾರಿಯನ್ನು ಹೊತ್ತಿಸಲಿದೆ.

ಈ ಏಕದಿನ ಕಾರ್ಯಕ್ರಮವು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಕಾಲೇಜಿನ ಅಡಳಿತ ಮಂಡಳಿ ಹೇಳಿದೆ.

ವಿಡಿಯೋಗಾಗಿ..

- Advertisment -

RECENT NEWS

 ಪಿ.ಯು.ಸಿ ಪರೀಕ್ಷೆ – ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್

 ಪಿ.ಯು.ಸಿ ಪರೀಕ್ಷೆ - ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್ ಮಂಗಳೂರು : ಮಾರ್ಚ್ 4 ರಿಂದ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಪಿ.ಯು.ಸಿ. ಪರೀಕ್ಷೆಗಳು ನಡೆಯಲಿದ್ದು,  ಪರೀಕ್ಷೆಯನ್ನು...

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!   ಮಂಗಳೂರು :  ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಭೇಧಿಸಿದ್ದಾರೆ. ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್‌...

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು ರಾಜಸ್ಥಾನ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಾಯಗೊಂಡಿರುವ...

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನ

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬಿದ್ರೆ: ವರ್ಷಾವಧಿ ರಥೋತ್ಸವ ಪ್ರಯುಕ್ತ ಪಡುಬಿದ್ರಿಯ ಪಲಿಮಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಸಂಭ್ರಮದ ರಥೋತ್ಸವ ನಡಯಿತು. ಊರ-ಪರವೂರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನಡೆದ...