Connect with us

    International news

    ಸ್ಟಾರ್ಕ್ ದಾಳಿಗೆ ಸರ್ವಪತನ ಕಂಡ ಟೀಂ ಇಂಡಿಯಾ !

    Published

    on

    ಮಂಗಳೂರು/ಅಡಿಲೆಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಕಂಟಕವಾದರು.


    ಮೊದಲು ಬ್ಯಾಟಿಂಗ್ ಆರಂಭಿಸಿದ್ದ ರೋಹಿತ್ ಪಡೆ ಕೇವಲ 180 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಮುಗಿಸಿದೆ. ಟೀಂ ಇಂಡಿಯಾ ಪಾಲಿಗೆ ವೇಗಿ ಸ್ಟಾರ್ಕ್ ಶಾಕ್ ನೀಡಿದರು. 14.1 ಓವರ್ ಬೌಲಿಂಗ್ ಮಾಡಿದ ಸ್ಟಾರ್ಕ್, ಬರೋಬ್ಬರಿ 6 ವಿಕೆಟ್ ಕಿತ್ತು ಟೀಂ ಇಂಡಿಯಾಗೆ ಅಘಾತ ನೀಡಿದರು. ಪರಿಣಾಮ ರೋಹಿತ್ ಪಡೆ, ಊಟದ ವಿರಾಮದ ವೇಳೆಗೆ ಎಲ್ಲಾ ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ.

    ಇದನ್ನೂ ಓದಿ: ಪಿಂಕ್ ಬಾಲ್ ನ ಬೆಲೆ ಕೇಳಿದರೆ ನೀವೂ ಶಾಕ್ ಆಗ್ತಿರಾ !

    ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟ್ ದರೆ, ಕೆ ಎಲ್ ರಾಹುಲ್ 37 ರನ್ ಮತ್ತು ಶುಭ್ ಮನ್ ಗಿಲ್ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಬಂದ ಕೂಡಲೇ ಕೆಟ್ಟ ಶಾಟ್ ಆಡುವ ಮೂಲಕ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ನಂತರ ಬ್ಯಾಟಿಂಗ್ ಗೆ ಇಳಿದ ರಿಷಭ್ ಪಂತ್ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡರು ಕೂಡ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾಗೆ, ಎರಡನೇ ಟೆಸ್ಟ್ ನಲ್ಲಿ ಅದೃಷ್ಟ ಕೈಕೊಟ್ಟಿತ್ತು. 3 ರನ್ ಗಳಿಸಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.

    ನಿತೀಶ್ ಅದ್ಭುತ ಬ್ಯಾಟಿಂಗ್
    ಒಂದೆಡೆ ಭಾರತದ ಅನುಭವಿ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದರೆ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಿತೀಶ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. 54 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 42 ರನ್ ಗಳಿಸಿ, ವೇಗಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಆರ್. ಅಶ್ವಿನ್ ಕೂಡ 22 ರನ್ ಗಳಿಸಿ ಔಟಾದರು.

     

    International news

    ಶ್ರೀಮಂತನನ್ನು ಬಿಕಾರಿಯನ್ನಾಗಿಸಿತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು !

    Published

    on

    ಮಂಗಳೂರು/ಕ್ಯಾಲಿಫೋರ್ನಿಯಾ : ಲಾಸ್ ಎಂಜಲೀಸ್ ನ ವಿನಾಶಕಾರಿ ಕಾಡ್ಗಿಚ್ಚಿಗೆ ಕನಿಷ್ಠ ಐದು ಮಂದಿಯನ್ನು ಬಲಿಪಡೆದಿದೆ. ಸುಂದರ ನಗರಿಯಾದ ಕ್ಯಾಲಿಫೋರ್ನಿಯಾ ನಗರದ ಸುಮಾರು ನಾಲ್ಕು ಸಾವಿರ ಕಟ್ಟಡಗಳನ್ನು ಭಸ್ಮಗೊಳಿಸಿದೆ. ಕೋಟ್ಯಾಧಿಪತಿಗಳಾಗಿದ್ದವರೆಲ್ಲಾ, ಬೀದಿಪಾಲಾಗಿದ್ದಾರೆ.

    ಹೀಗೆ ಬೀದಿಪಾಲಾದವರಲ್ಲಿ ಕೋಟ್ಯಾಧಿಪತಿ ಎಡ್ವಿನ್ ಕ್ಯಾಸ್ಟ್ರೋ ಕೂಡ ಒಬ್ಬರು. ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಬರೊಬ್ಬರಿ 2.04 ಬಿಲಿಯನ್ (16,590 ಕೋಟಿ) ಗೆದ್ದಿದ್ದರು. ಈ ಲಾಟರಿ ಹಣದಿಂದ ಎಡ್ವಿನ್ ಅವರು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್ ನಲ್ಲಿ ಬರೊಬ್ಬರಿ 3.8 ಮಿಲಿಯನ್ ಗೆ ಐಷಾರಾಮಿ ಮನೆ ತೆಗೆದುಕೊಂಡಿದ್ದರು.

    ಆದರೆ ದುರಾದೃಷ್ಟವಶಾತ್ ಎಡ್ವಿನ್ ಕ್ಯಾಸ್ಟ್ರೋ ಅವರ ಐಷಾರಾಮಿ ಮನೆ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಮಾರಣಾಂತಿಕ ಬೆಂಕಿಯು ಕ್ಯಾಸ್ಟ್ರೋ ಅವರ 3.8 ಮಿಲಿಯನ್ ನ ಮನೆಯಲ್ಲಿ ಉಳಿದಿರುವುದು ಕಾಂಕ್ರೀಟ್ ಕಂಬಗಳು ಮತ್ತು ಹೊಗೆಯಾಡುತ್ತಿರುವ ಮರಗಳು ಮಾತ್ರ.

    ಇದನ್ನೂ ಓದಿ: ‘ಹಮಾರಿ ಅಧೂರಿ ಕಹಾನಿ’ ಫೇಸ್ ಬುಕ್ ಪೋಸ್ಟ್ ಹಾಕಿ ವ್ಯಕ್ತಿ ಆ*ತ್ಮಹತ್ಯೆ;ಡೆತ್ ನೋಟ್ ನಲ್ಲಿತ್ತು ನೋವಿನ ಕಥೆ !

    ಎಡ್ವಿನ್ ಅವರ ಭವ್ಯ ಬಂಗಲೆಯಲ್ಲಿ ಐದು ಬೆಡ್ ರೂಮ್ ಮತ್ತು ಆರು ಸ್ನಾನಗೃಹಗಳನ್ನು ಒಳಗೊಂಡಿತ್ತು. ವರದಿಗಳ ಪ್ರಕಾರ ಈ ಐಷಾರಾಮಿ ಮನೆ ಐಕಾನಿಕ್ ಮಾರ್ಮೊಂಟ್ ಹೋಟೆಲ್ ನ ಮೇಲೆ ಇದೆ ಮತ್ತು ಖ್ಯಾತ ಗಾಯಕಿ ಅರಿಯಾನಾ ಗ್ರಾಂಡೆ, ನಟಿ ಡಕೋಟಾ ಜಾನ್ಸನ್ ಮತ್ತು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಸೇರಿದಂತೆ ಪ್ರಸಿದ್ದ ಹಾಲಿವುಡ್ ತಾರೆಯರ ನೆರೆಹೊರೆಯಲ್ಲಿ ಎಡ್ವಿನ್ ಅವರ ಮನೆ ಇತ್ತು.

    ಆದರೆ ಇಂದು ಭವ್ಯ ಅರಮನೆಯ ಭವ್ಯ ನೆನಪು ಮಾತ್ರ ಉಳಿದಿದೆ. ಶ್ರೀಮಂತಿಕೆಯ ಉತ್ತಂಗುದಲ್ಲಿದ್ದ ಎಡ್ವಿನ್ ಈಗ ಬೀದಿಪಾಲಾಗಿದ್ದಾನೆ.

     

    Continue Reading

    International news

    ಮತ್ತೆ ವಿವಾದ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್ !

    Published

    on

    ಮಂಗಳೂರು/ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕ್ ಈಗ ಜಾಗತಿಕವಾಗಿ ಸಂಚಲನ ಸೃಷ್ಟಿ ಮಾಡುತ್ತಿದೆ.

    ಕೆನಡಾವನ್ನು ಅಮೆರಿಕದ ಭಾಗವಾಗಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದ ನಿಯೋಜಿತ ಅಧ್ಯಕ್ಷ ಟ್ರಂಪ್, ಇದೀಗ ತಮ್ಮ ದೇಶದ ಭೂಪಟದಲ್ಲಿ ಕೆನಡಾದ ಭಾಗವನ್ನೂ ಸೇರಿಸಿರುವ ಚಿತ್ರವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅವರ ಕ್ರಮಕ್ಕೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಮೆರಿಕದ 51 ರಾಜ್ಯಗಳ ಭೂಪಟದೊಂದಿಗೆ ಕೆನಡಾದ ಕೆಲವು ಭಾಗವನ್ನೂ ಅಮೆರಿಕ ಎಂದೇ ಗುರುತಿಸಿರುವ ಚಿತ್ರವೊಂದನ್ನು ಟ್ರಂಪ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಓಹ್ ಕೆನಡಾ” ಎಂದು ಶೀರ್ಷಿಕೆ ನೀಡಿದ್ದಾರೆ.

    ಇದನ್ನೂ ಓದಿ: ಶೇರು ಮಾರ್ಕೆಟ್‌ ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭಾಂಶ ಆಮಿಷ

    ತಕ್ಷಣವೇ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರ ಲಿಬರಲ್ ಪಕ್ಷವು ಇದಕ್ಕೆ ತಿರುಗೇಟು ನೀಡಿದ್ದು, ಕೆನಡಾ ಹಾಗೂ ಅಮೆರಿಕದ ಭೂಪಟವನ್ನು ಪ್ರತ್ಯೇಕಿಸಿರುವ ಚಿತ್ರ ಹಂಚಿಕೊಂಡಿದೆ.

    ಅಮೆರಿಕ ಜೊತೆ ಕೆನಡಾ ವಿಲೀನ?
    ಕೆನಡಾ ಮತ್ತು ಅಮೆರಿಕ ನಡುವೆ ಮೊದಲಿನಿಂದ ಕೂಡ ಉತ್ತಮ ಸಂಬಂಧ ಇದೆ. ಆದರೆ ಇದೇ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಪ್ರತಿಬಾರಿ ಕೂಡ ಏನಾದರೂ ಒಂದು ಕಿರಿಕ್ ಆಗುತ್ತಲೇ ಇದೆ. 2016 ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾಗಿದ್ದ ವೇಳೆ ಇದೇ ರೀತಿ ಕೆನಡಾ ಜೊತೆ ಭರ್ಜರಿ ಕಿರಿಕ್ ಮಾಡಿದ್ದರು.

    ಇದೀಗ ಕೆನಡಾ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ರೀತಿ ಮ್ಯಾಪ್ ಹಾಕಿದ್ದಾರೆ. ಟ್ರಂಪ್ ಶೇರ್ ಮಾಡಿರುವ ಕೆನಡಾ ಮತ್ತು ಅಮೆರಿಕ ಮ್ಯಾಪ್ ಈಗ ಸಂಚಲನ ಸೃಷ್ಟಿ ಮಾಡಿದೆ.

     

    Continue Reading

    International news

    ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿ*ಚ್ಚು; ಐವರು ಸಜೀವದ*ಹನ, ಬೆಂ*ಕಿ ನಂದಿಸಲು ಹರಸಾಹಸ

    Published

    on

    ಮಂಗಳೂರು/ನ್ಯೂಯಾರ್ಕ್ : ಲಾಸ್ ಏಂಜಲೀಸ್‌ನ ಪೆಸಿಫಿಕ್ ಪ್ಯಾಲಿಸೈಡ್ಸ್ ಮತ್ತು ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚಿನಿಂದಾಗಿ ಅಪಾರ ಹಾ*ನಿ ಸಂಭವಿಸಿದೆ. ಕಾಡ್ಗಿಚ್ಚಿನ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿ ತೊಡಗಿದ್ದಾರೆ.

    ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ರಕ್ಷಣಾ ಸಿಬ್ಬಂದಿ ಮಾಡುತ್ತಿದ್ದಾರೆ. ಯವರು ಸಜೀವ ದಹನವಾಗಿದ್ದಾರೆ. 1 ಲಕ್ಷ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಒಂದು ಸಾವಿರಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ.

    ಸನ್‌ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್ ಕಾಣಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ‘ಸಾಂಟಾ ಅನಾ’ ಚಂಡಮಾರುತದಿಂದ ಪರಿಸ್ಥಿತಿ ತೀರ ಹದಗೆಟ್ಟಿದ್ದು, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಬೆಂಕಿಗಾಹುತಿಯಾಗಿದೆ.

    ಒರೆಗಾನ್, ವಾಷಿಂಗ್ಟನ್ ಮತ್ತು ಉತಾಹ್ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಅ*ಗ್ನಿಶಾಮಕ ದಳದ ಸಿಬ್ಬಂದಿ ಕಾಡ್ಗಿ*ಚ್ಚು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.  ನೀರಿನ ಅಭಾವದಿಂದಾಗಿ ಬೆಂ*ಕಿ ನಂದಿಸುವ ಕಾರ್ಯಾಚರಣೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈಜುಕೊಳಗಳು, ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    Continue Reading

    LATEST NEWS

    Trending