ಮಂಗಳೂರು/ಬ್ರಿಸ್ಟೇನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್ ಗಳಿಂದ ಸೋಲಿಸಿದೆ. ಇದೀಗ ಎರಡು ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೆ ನೇರವಾಗಿ ಪ್ರವೇಶಿಸಬೇಕ್ಕಿದ್ದರೆ, ಆಸ್ಟ್ರೇಲಿಯಾ ವಿರುದ್ದ ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿ ಟಿಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ ಎಂದು ಹೇಳಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಟೇನ್ ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ ಐದು ಟೆಸ್ಟ್ ಪಂದ್ಯಗಳಿವೆ. ಇಲ್ಲಿ ಟೀಮ್ ಇಂಡಿಯಾ ವಿರುದ್ದ 3 ಮ್ಯಾಚ್ ಗೆದ್ದರೆ ಫೈನಲ್ ಗೆ ಪ್ರವೇಶಿಸುವುದು ಖಚಿತ. ಒಂದು ವೇಳೆ ಭಾರತದ ವಿರುದ್ದ 2 ಮ್ಯಾಚ್ ಗಳಲ್ಲಿ ಸೋತರೆ, ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಲು ಉತ್ತಮ ಅವಕಾಶವಿದೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಈ ಎಲ್ಲಾ ಕಾರಣಗಳಿಂದಾಗಿ ಭಾರತಕ್ಕೆ ಇನ್ನೂ ಮೂರು ಪಂದ್ಯಗಳು ಕಂಬ್ಯಾಕ್ ಮಾಡುವ ಒತ್ತಡದಲ್ಲಿದೆ. ಆದರೆ ಭಾರತ ತಂಡದ ಒತ್ತಡದ ಲಾಭ ಪಡೆಯುವುದರಲ್ಲಿ ಆಸ್ಟ್ರೇಲಿಯನ್ನರು ನಿಸ್ಸೀಮರು.
ಆಸ್ಟ್ರೇಲಿಯನ್ನರು ಒತ್ತಡದ ಲಾಭ ಪಡೆಯುವುದರಲ್ಲಿ ನಿಸ್ಸೀಮರು ಎಂಬುದು ಈಗಾಗಲೇ 2023ರ ಏಕದಿನ ವಿಶ್ವಕಪ್ ನಲ್ಲಿ ಈಗಾಗಲೇ ನಿರುಪಿಸಿದ್ದಾರೆ. ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾದ ಒತ್ತಡವನ್ನು ಹೆಚ್ಚಿಸುವಂತಹ ಮಾಸ್ಟರ್ ಪ್ಲಾನ್ ರೂಪಿಸುವುದರಲ್ಲಿ ನಿಪುಣರು.
ಕಳೆದ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯದವರೆಗೆ ಸೋಲಿಲ್ಲದ ಸರದಾರರಾಗಿ ಮುನ್ನುಗ್ಗಿದ್ದ ಟೀಮ್ ಇಂಡಿಯಾವನ್ನು ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು ಮಣಿಸಿದ್ದರು. ಈ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಮಿನ್ಸ್, ”ಅಹಮದಾಬಾದ್ ಸ್ಟೇಡಿಯಂನಲ್ಲಿ ಭಾರತದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ನಾವು ಮೌನವಾಗುವಂತೆ ಮಾಡುತ್ತೇವೆ” ಎಂದಿದ್ದರು.
ಹೀಗಾಗಿ, ಅಂದಿನ ಪ್ರಯೋಗ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಪ್ರಯೋಗಿಸಿದರೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆಸೆ ನಿರಾಸೆಯಾಗಿಬಿಡುತ್ತದೆ. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಭಾರತ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಸೆ ಜೀವಂತವಾಗಿರಲಿದೆ.
ಈ ಮೂಲಕ ಬ್ರಿಸ್ಬೇನ್ ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ರಣರೋಚಕ ಹೋರಾಟಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿದೆ.
Pingback: ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ ! - NAMMAKUDLA NEWS - ನಮ್ಮಕುಡ್ಲ ನ್ಯೂಸ್