ಶಾಲೆಗೆ ಲೆಗ್ಗಿನ್ಸ್ ಧರಿಸಿ ಬಂದ ಶಿಕ್ಷಕಿಯೋರ್ವರನ್ನು ನಿಂದಿಸಿ ಮುಖ್ಯ ಶಿಕ್ಷಕಿಯೊಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದೆ.
ಮಲಪ್ಪುರಂ: ಶಾಲೆಗೆ ಲೆಗ್ಗಿನ್ಸ್ ಧರಿಸಿ ಬಂದ ಶಿಕ್ಷಕಿಯೋರ್ವರನ್ನು ನಿಂದಿಸಿ ಮುಖ್ಯ ಶಿಕ್ಷಕಿಯೊಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದೆ.
ಈ ಬಗ್ಗೆ ಶಿಕ್ಷಕಿ ಸರಿತಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಿಸಸ್ ಕೇರಳ ಎಂಬ ಬಿರುದಿಗೆ ಪಾತ್ರರಾಗಿರುವ ಸರಿತಾ 13 ವರ್ಷಗಳಿಂದ ಶಿಕ್ಷಕಿ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಅವರು ಹಾಕಿದ ವಸ್ತ್ರ ನೋಡಿ ಮುಖ್ಯ ಶಿಕ್ಷಕಿ ರಾಮಲತಾ ‘ಶಿಕ್ಷಕಿ ಆಗಿ ಸರಿತಾ ಅವರೇ ಇಂತಹ ಬಟ್ಟೆ ಧರಿಸಿ ಶಾಲೆಗೆ ಬರುವಾಗ ಮಕ್ಕಳಿಗೆ ಶಿಸ್ತಿನ ಉಡುಪು ಧರಿಸಿ ಶಾಲೆಗೆ ಬನ್ನಿ ಎಂದು ಹೇಳುವುದು ಹೇಗೆ ಎಂದು ಅವಮಾನಿಸಿದ್ದಾರೆ.
ಮೊದಲಿಗೆ ಇದನ್ನು ತಮಾಷೆಯಾಗಿ ತೆಗೆದುಕೊಂಡ ಶಿಕ್ಷಕಿ ‘ಶಿಕ್ಷಕರಿಗೆ ಸಮವಸ್ತ್ರ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಾಮಲತಾ ‘ನಮ್ಮ ಶಾಲೆಯ ಹೆಣ್ಣು ಮಕ್ಕಳು ಕೂಢಾ ಇಂತಹ ಬಟ್ಟೆ ಧರಿಸಿ ಶಾಲೆಗೆ ಬರೋದಿಲ್ಲ. ಅವರ ಸಂಸ್ಕೃತಿ ಅವರು ಹಾಕಿರೋ ಪ್ಯಾಂಟಿನಿಂದಲೇ ಗೊತ್ತಾಗುತ್ತೆ’ ಎಂದಿದ್ದಾರೆ.
ಇದರ ಬಗ್ಗೆ ಮಾತನಾಡಿರುವ ಸರಿತಾ ‘ನಾನು ಸಭ್ಯವಾಗಿ ಬಟ್ಟೆ ಧರಿಸಿದ್ದೆ. ಇವರ ಆ ವರ್ತನೆ ನನ್ನನ್ನು ಮಾನಸಿಕ ಯಾತನೆಗೆ ದೂಡಿದೆ.
ನಾನು ಹಾಕಿದ್ದ ಫೋಟೋ ಸಮೇತ ದೂರು ನೀಡಿದ್ದೇನೆ. ಯಾವುದೇ ಕ್ರಮ ಮಾತ್ರ ಜಾರಿಯಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.