Connect with us

LATEST NEWS

ದೇಶದಲ್ಲೇ ತಯಾರಾಗಲಿದೆ ಸರಕು ಸಾಗಾಣೆ ವಿಮಾನ – ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಲೋಕಾರ್ಪಣೆ

Published

on

ವಡೋದರ: ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 ಅತ್ಯಾಧುನಿಕ ವಿಮಾನಗಳು ಮೇಕ್‌ ಇನ್‌ ಇಂಡಿಯಾ ಅಡಿ ದೇಶದಲ್ಲೇ ತಯಾರಾಗಲಿದೆ.

ಗುಜರಾತ್‌ನ ವಡೋದರಾದಲ್ಲಿ ಸಿ-295 ಅತ್ಯಾಧುನಿಕ ವಿಮಾನಗಳನ್ನು ತಯಾರಿಸಲಿರುವ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಜಂಟಿಯಾಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ, ಟಾಟಾ-ಏರ್‌ಬಸ್ ಉತ್ಪಾದನಾ ಸೌಲಭ್ಯವು ಭಾರತ-ಸ್ಪೇನ್ ಸಂಬಂಧಗಳನ್ನು ಮತ್ತು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ವಿಷನ್ ಅನ್ನು ಬಲಪಡಿಸುತ್ತದೆ. ವಡೋದರಾ ಸೌಲಭ್ಯದಲ್ಲಿ ತಯಾರಾದ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರತನ್‌ ಟಾಟಾ ಅವರನ್ನು ಸ್ಮರಿಸಿದ ಮೋದಿ, ನಾನು ಟಾಟಾ ಮತ್ತು ಏರ್‌ಬಸ್ ತಂಡಗಳನ್ನು ಅಭಿನಂದಿಸುತ್ತೇನೆ. ಕೆಲ ದಿನಗಳ ಹಿಂದೆ ನಮ್ಮ ದೇಶ ರತನ್‌ ಟಾಟಾ ಅವರನ್ನು ಕಳೆದುಕೊಂಡಿದೆ. ಇಂದು ಟಾಟಾ ನಮ್ಮೊಂದಿಗೆ ಇದ್ದಿದ್ದರೆ ಅವರು ತುಂಬಾ ಸಂತೋಷವಾಗಿರುತ್ತಿದ್ದರು. ಎಲ್ಲಿಯೇ ಇದ್ದರೂ ಅವರ ಆತ್ಮ ಸಂತೋಷವಾಗಿರುತ್ತದೆ. ಈ ಕಾರ್ಖಾನೆಯು ನವ ಭಾರತದ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ವಿಮಾನ ಪ್ರೇಮಿ ಆಗಿದ್ದ ರತನ್‌ ಟಾಟಾ ಅವರು ಈ ಯೋಜನೆ ಕನಸು ಕಂಡಿದ್ದರು. 2012ರಲ್ಲೇ ಟಾಟಾ ಅವರು ಏರ್‌ಬಸ್‌ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದರು. 12 ವರ್ಷದ ಬಳಿಕ ರತನ್‌ ಟಾಟಾ ಅವರ ಕನಸು ಈಗ ನನಸಾಗಿದೆ. ಅಕ್ಟೋಬರ್ 2022 ರಲ್ಲಿ ಈ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

2021 ರಲ್ಲಿ ರಕ್ಷಣಾ ಸಚಿವಾಲಯವು C-295 56 ವಿಮಾನಗಳ ಪೂರೈಕೆಗಾಗಿ ಸ್ಪೇನ್‌ನ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಎಸ್‌ಎ ಜೊತೆ 21,935 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ 16 ವಿಮಾನಗಳು ಸ್ಪೇನ್‌ನಿಂದ ಬರಲಿದ್ದು, ಉಳಿದ 40 ಭಾರತದಲ್ಲಿ ಉತ್ಪಾದನೆಯಾಗಬೇಕು ಎಂದು ಒಪ್ಪಂದದಲ್ಲಿ ಷರತ್ತು ವಿಧಿಸಲಾಗಿತ್ತು.

ಮೊದಲ ವಿಮಾನ 2026ರ ಸೆಪ್ಟೆಂಬರ್‌ನಲ್ಲಿ ನಿರ್ಮಾಣ ಆಗಿ ವಾಯುಪಡೆ ಸೇರ್ಪಡೆಯಾಗಲಿದ್ದು ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ. ಈಗಾಗಲೇ ಬರಬೇಕಾಗಿದ್ದ 16 ವಿಮಾನಗಳ ಪೈಕಿ 6 ವಿಮಾನಗಳು ಸ್ಪೇನ್‌ನಿಂದ ಬಂದಿವೆ. 2025ರ ಆಗಸ್ಟ್ ಒಳಗೆ ಉಳಿದ 10 ವಿಮಾನ ಭಾರತಕ್ಕೆ ಆಗಮಿಸಲಿವೆ.

LATEST NEWS

ಮಕ್ಕಳ ಜೀವಕ್ಕೆ ಕುತ್ತು ತಂದ ಇಲಿ ಪಾಷಾಣ

Published

on

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯು*ಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ,. ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಇಲಿ ವಿಷವನ್ನು ಪುಡಿಮಾಡಿಟ್ಟು ಮಲಗಿದ್ದರು. ಫ್ಯಾನ್​ನಿಂದಾಗಿ ಆ ಪುಡಿಯನ್ನು ಅವರು ಗಾಳಿಯ ಮೂಲಕ ಉಸಿರಾಡಿದ್ದ ಕಾರಣ ಇಬ್ಬರು ಸಾ*ವನ್ನಪ್ಪಿದ್ದಾರೆ.

ಮರುದಿನ ಅಕ್ಕಪಕ್ಕದ ಮನೆಯವರು ಗಿರಿಧರನ್, ಪವಿತ್ರಾ, ಅವರ ಒಂದು ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲರೂ ವಾಂತಿ ಮಾಡಿಕೊಂಡಿದ್ದರು. ಮಗ ಸಾಯಿ ಸುದರ್ಶನ್ ಮತ್ತು ಮಗಳು ವಿಶಾಲಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಗಿರಿಧರನ್ ಮತ್ತು ಪವಿತ್ರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಕುಂದ್ರತ್ತೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕೀಟ ನಿಯಂತ್ರಣ ಕಂಪನಿಯ ಇಬ್ಬರು ಸಿಬ್ಬಂದಿ ಇಲಿ ವಿಷವನ್ನು ಹಾಕಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ತೋರಿಸುತ್ತವೆ.

ಈ ಇಲಿ ವಿಷವನ್ನು ಪುಡಿಯ ರೂಪದಲ್ಲಿ ಇರಿಸಿದ್ದರು. ಮುಚ್ಚಿದ ಹವಾನಿಯಂತ್ರಿತ ಕೋಣೆಯಾಗಿದ್ದ ಕಾರಣ ಆ ವಿಷ ಇಡಿ ರೂಮನ್ನು ಆಕ್ರಮಿಸಿತ್ತು. ನಾಲ್ವರೂ ರಾತ್ರಿಯಿಡೀ ತಿಳಿಯದೆ ವಿಷಗಾಳಿಯನ್ನು ಉಸಿರಾಡಿದ್ದರು. ಕೀಟ ನಿಯಂತ್ರಣ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾ*ತಕ್ಕೊಳಗಾಗಿ ದಾರುಣ ಸಾ*ವು

Published

on

ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾತಕ್ಕೊಳಗಾಗಿ ದಾರುಣ ರೀತಿಯಲ್ಲಿ ಮೃ*ತಪಟ್ಟ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ಸಂಭವಿಸಿದೆ. ಗುರುವಾರ ರಾತ್ರಿ ಈ ಘಟನೆಯಲ್ಲಿ ಲಲಿತಾ ಬೋಂಡ್ರ ಮೃ*ತಪಟ್ಟ ಮಹಿಳೆ.

ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃ*ತಪಟ್ಟಿದ್ದರು. ಅಣ್ಣನ‌ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ಅಘಾ*ತಕ್ಕೊಳಗಾಗಿ ಘಟನಾ ಸ್ಥಳದಲ್ಲಿ ಕುಸಿದು ಬಿದ್ದು ದಾರು*ಣ ಅಂ*ತ್ಯ ಕಂಡಿದ್ದಾರೆ.

ಶಾಮೀಯನ ಅಳವಡಿಸಿದಾಗ ಅದರ ಕಬ್ಬಣದ ಕಂಬಕ್ಕೆ‌ ಟ್ಯೂಬ್ ಲೈಟ್ ಅಳವಡಿಸಲಾಗಿ ಅದರ ಮೂಲ ವಿದ್ಯುತ್ ಸೋರಿಕೆಯಾಗಿ ಈ ಘಟನೆ ಸಂಭವಿಸಿಎಬಹುದೆಂಬ ಮಾಹಿತಿ ತಿಳಿದು ಬಂದಿದೆ.

Continue Reading

LATEST NEWS

ಹೆಂಡತಿ ಮೇಲೆ ಶಂಕೆ; ಪತ್ನಿಯನ್ನು ಕೊಂ*ದು ತಾನೂ ಆ*ತ್ಮಹತ್ಯೆ

Published

on

ಮಂಗಳೂರು/ಲಂಗಾಣ: ಪತ್ನಿಯನ್ನು ಕೊಂ*ದು ರೈತನೊಬ್ಬ ಆ*ತ್ಮಹತ್ಯೆಗೆ ಶರಣಾದ ಘಟನೆ ಗುರುವಾರ(ನ.14) ತೆಲಂಗಾಣದ ಸಿರ್ಸಿಲ್ಲ ಪಟ್ಟಣದಲ್ಲಿ ನಡೆದಿದೆ.

ಸಿರ್ಸಿಲ್ಲಾ ಪಟ್ಟಣದ ಶಾಂತಿನಗರ ನಿವಾಸಿ ಮುದಂ ವೆಂಕಟೇಶಂ (40) ತನ್ನ ಪತ್ನಿ ಬೊಳ್ಳ ವಸಂತ (35) ನನ್ನು ನರ್ಸಿಂಗ್ ಕಾಲೇಜು ಹಿಂಭಾಗದಲ್ಲಿರುವ ತನ್ನ ಗದ್ದೆಗೆ ಕರೆದೊಯ್ದಿದ್ದಾನೆ. ಬಳಿಕ ಪತ್ನಿಯನ್ನು ಕೊಂದು, ಬಳಿಕ ತಾನು ಕೀಟನಾಶಕ ಸೇವಿಸಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರಂಭದಲ್ಲಿ ದಂಪತಿ ಕೀಟನಾಶಕ ಸೇವಿಸಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಭಾವಿಸಿದ್ದರು. ಆದರೆ, ಸ್ಥಳದಲ್ಲಿಯೇ ರ*ಕ್ತ ಬಿದ್ದಿರುವುದನ್ನು ಗಮನಿಸಿದ ಬಳಿಕ ಕೊ*ಲೆ ಶಂಕೆ ವ್ಯಕ್ತವಾಗಿದೆ.

ಕೊ*ಲೆಗೆ ಕಾರಣ :

ಪತ್ನಿಯ ಶೀ*ಲ ಶಂಕಿಸಿದ ವೆಂಕಟೇಶಂ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ದಂಪತಿಗೆ ವರ್ಷಿಣಿ ಮತ್ತು ಅಜಿತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ದ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

LATEST NEWS

Trending

Exit mobile version