Connect with us

LATEST NEWS

ಅಶ್ವಿನ್ ಜಾಗಕ್ಕೆ ತನುಷ್ ಕೋಟ್ಯಾನ್ ಆಯ್ಕೆ !

Published

on

ಮಂಗಳೂರು/ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತನುಷ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಈ ಹಿಂದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬೈ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ಸ್ಥಾನದಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯುವ ಆಲ್ ರೌಂಡರ್ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

26 ವರ್ಷ ಪ್ರಾಯದ ತನುಷ್ ಅವರು ಇತ್ತಿಚೇಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿದ್ದರು. ವಾಷಿಂಗ್ಟನ್ ಸುಂದರ್ ಅವರಿಗೆ ಬ್ಯಾಕಪ್ ಆಗಿ ತನುಷ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ಕೋಟ್ಯಾನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ವಾಷಿಂಗ್ಟನ್ ಸುಂದರ್ ಅಥವಾ ರವೀಂದ್ರ ಜಡೇಜ ಗಾಯಾಳುಗಳಾದಲ್ಲಿ ಮಾತ್ರ ಅವಕಾಶ ಪಡೆಯಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ತನುಷ್ ಕೋಟ್ಯಾನ್ ಅವರು ಮಂಗಳವಾರ ಬೆಳಿಗ್ಗೆ ಮುಂಬೈನಿಂದ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ. ಸೋಮವಾರ ಹೈದರಾಬಾದ್ ವಿರುದ್ದ ನಡೆದ ಪಂದ್ಯದಲ್ಲಿ ಅವರು ಎರಡು ವಿಕೆಟ್ ಗಳ ಜೊತೆ ಅಜೇಯ 39 ರನ್ ಬಾರಿಸಿದ್ದರು.

33 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 101 ವಿಕೆಟ್ ಮತ್ತು 1525 ರನ್ ಗಳಿಸಿದ್ದಾರೆ. ಎರಡು ಶತಕಗಳು ಇದರಲ್ಲಿ ಸೇರಿವೆ.

LATEST NEWS

ಬಿಹಾರದಲ್ಲಿ ಪುರುಷ ಶಿಕ್ಷಕ ಗರ್ಭಿಣಿ : ಶಿಕ್ಷಣ ಇಲಾಖೆಯಿಂದಲೂ `ಹೆರಿಗೆ ರಜೆ’ ಮಂಜೂರು.!

Published

on

ಪಾಟ್ನಾ: ಬಿಹಾರದ ಶಿಕ್ಷಣ ಇಲಾಖೆ ಆಗಾಗ ಸುದ್ದಿಯಲ್ಲಿದೆ. ಶಿಕ್ಷಣ ಇಲಾಖೆ ಪುರುಷ ಬಿಪಿಎಸ್‌ಸಿ ಶಿಕ್ಷಕನನ್ನು ಗರ್ಭಿಣಿಯನ್ನಾಗಿ ಮಾಡಿ ಹೆರಿಗೆ ರಜೆಯನ್ನೂ ನೀಡಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಬಿಹಾರ ಶಿಕ್ಷಣ ಇಲಾಖೆ ಎಡವಟ್ಟು ಹೊರಬಿದ್ದಿದೆ.

ಶಿಕ್ಷಣ ಇಲಾಖೆಯು ಹಾಜಿಪುರ್ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಗೆ ಸಂಬಂಧಿಸಿದೆ. ಇಲ್ಲಿ ನೇಮಕಗೊಂಡಿರುವ ಬಿಪಿಎಸ್‌ಸಿ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರು ಗರ್ಭಿಣಿ ಎಂದು ಹೆರಿಗೆ ರಜೆ ಮಾಡಿದೆ. ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಶಿಕ್ಷಣ ಇಲಾಖೆಯ ಪೋರ್ಟಲ್ ಇ-ಶಿಕ್ಷಾ ಕೋಶ್‌ನಲ್ಲಿ ಹೆರಿಗೆ ರಜೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ದೃಷ್ಟಿಯಲ್ಲಿ ಮತ್ತು ಅಧಿಕೃತ ವೆಬ್‌ಸೈಟ್ ಪ್ರಕಾರ, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಗರ್ಭಿಣಿಯಾಗಿದ್ದು, ರಜೆಯಲ್ಲಿದ್ದಾರೆ ಎಂದು ನಮೂದಾಗಿದೆ.

ಹೆರಿಗೆ ರಜೆ ಮಹಿಳಾ ಶಿಕ್ಷಕರಿಗೆ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ. ಮಹಿಳಾ ಶಿಕ್ಷಕರು ಗರ್ಭಿಣಿಯಾಗಿದ್ದಾಗ ಮತ್ತು ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಈ ರಜೆಯನ್ನು ಪಡೆಯುತ್ತಾರೆ. ಆದರೆ ಹಾಜಿಪುರದಲ್ಲಿ ಪರಿಸ್ಥಿತಿ ಬದಲಾಗಿದೆ. ಇಲ್ಲಿ ಪುರುಷ ಶಿಕ್ಷಕರಿಗೂ ಹೆರಿಗೆ ರಜೆ ನೀಡಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ.

ಈ ವಿಚಾರದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು ಇಲಾಖೆಯ ತಪ್ಪನ್ನು ಒಪ್ಪಿಕೊಂಡು ಪೋರ್ಟಲ್‌ನಲ್ಲಿನ ದೋಷದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಪುರುಷ ಶಿಕ್ಷಕರಿಗೆ ಈ ರೀತಿಯ ರಜೆ ನೀಡುವುದಿಲ್ಲ. ಇದನ್ನು ಶೀಘ್ರದಲ್ಲೇ ಸುಧಾರಿಸಲಾಗುವುದು. ಶಿಕ್ಷಕಿಯೊಬ್ಬರು ಮಹಿಳೆಯರಿಗೆ ರಜೆ ನೀಡಿರುವ ರೀತಿ ಜಿಲ್ಲೆಯ ಪುರುಷ ಶಿಕ್ಷಕರನ್ನು ಕೆರಳಿಸಿದ್ದು ವಿಶಿಷ್ಟ ನಗೆಪಾಟಲಿಗೀಡಾಗಿದೆ.

Continue Reading

LATEST NEWS

ಗ್ಯಾಸ್ ಸ್ಟವ್ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ

Published

on

Gas Stove : ಅಸ್ತಮಾ ಮತ್ತು ತಲೆನೋವು ಇಂದು ಅನೇಕ ಜನರಲ್ಲಿ ಸಾಮಾನ್ಯ ಕಾಯಿಲೆಗಳಾಗಿವೆ. ಈ ರೋಗಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಅರ್ಧದಷ್ಟು ಮಂದಿ ಅಡುಗೆ ಮನೆಯ ಲಿಂಕ್ ಆಗುತ್ತದೆ. ಏಕೆಂದರೆ, ಅಡುಗೆ ಮನೆಯು ಗೃಹಿಣಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ. ಅನೇಕ ಮಹಿಳೆಯರು ಗ್ಯಾಸ್ ಸ್ಟವ್‌ನಲ್ಲಿ ದೀರ್ಘಕಾಲ ಅಡುಗೆ ಮಾಡುತ್ತಾರೆ.

ಗೃಹಿಣಿಯರು ಗ್ಯಾಸ್ ಸ್ಟವ್‌ಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ತಲೆನೋವು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗ್ಯಾಸ್ ಸ್ಟವ್ ಅನ್ನು ಉರಿಸುವಾಗ ಜ್ವಾಲೆಯ ಬಣ್ಣ ಬದಲಾವಣೆಯು ಕೂಡ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ, ಸ್ಟವ್ ಉರಿಯುವಾಗ ನೀಲಿ ಜ್ವಾಲೆಗಳು ಉತ್ಪತ್ತಿಯಾದರೆ, ಭಯಪಡುವಂಥದ್ದೇನೂ ಇಲ್ಲ. ಆದರೆ ಜ್ವಾಲೆಗಳು ಕೆಂಪು ಅಥವಾ ಹಳದಿಯಾಗಿದ್ದರೆ, ನೀವು ಜಾಗರೂಕರಾಗಿರಬೇಕು. ಈ ಬಣ್ಣ ಬದಲಾವಣೆಯು ಒಲೆಯಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೆಡ್ ಅನಿಲದಿಂದ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಬೆಂಕಿಯು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಉರಿದರೆ ಕಾರ್ಬನ್ ಮಾನಾಕ್ಸೆಡ್ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದು ಶ್ವಾಸಕೋಶ ಸೇರಿದಂತೆ ವಿವಿಧ ಅಂಗಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದು ಭವಿಷ್ಯದಲ್ಲಿ ಅಸ್ತಮಾ, ತಲೆನೋವು ಮತ್ತು ಹೆಚ್ಚಿನದನ್ನು ಉಂಟುಮಾಡಬಹುದು.

ಕೊಳಕಿನಿಂದ ಮುಚ್ಚಿ ಹೋಗಿರುವ ಬರ್ನರ್ ತೂತುಗಳು ಜ್ವಾಲೆಯ ಬಣ್ಣ ಬದಲಾವಣೆಗೆ ಸಾಮಾನ್ಯ ಕಾರಣವಾಗಿದೆ. ಅಡಿಗೆ ಸೋಡಾ ಮತ್ತು ಬ್ರಶ್‌ನಿಂದ ಬರ್ನರ್ ಅನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸಬಹುದು. ಇಲ್ಲದಿದ್ದರೆ, ನೀವು ವೃತ್ತಿಪರ ಗ್ಯಾಸ್ ಸ್ಟವ್ ರಿಪೇರಿ ತಂತ್ರಜ್ಞರಿಂದ ಸಹಾಯ ಪಡೆಯಬೇಕು.

Continue Reading

LATEST NEWS

ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಟೀಂ ಇಂಡಿಯಾ ಕ್ರಿಕೆಟಿಗ ?

Published

on

ಮಂಗಳೂರು/ಮುಂಬೈ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಈ ವರ್ಷ ವಿಚ್ಚೇದನ ಪಡೆದರು. ಇದೀಗ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಪತ್ನಿಯಿಂದ ಬೇರ್ಪಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ವೈಕ್ತಿಕ ಜೀವನದಲ್ಲಿ ತೀವ್ರ ಏರಿಳಿತಗಳನ್ನು ಎದುರಿಸುತ್ತಿರುವಂತಿದೆ. ಅಲ್ಲದೆ ಟೀಂ ಇಂಡಿಯಾದಿಂದಲೂ ದೂರ ಉಳಿದಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ

2020ರಲ್ಲಿ ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿತ್ತು. ಅದೇ ಸಮಯದಲ್ಲಿ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಧನಶ್ರೀಗೆ ಪರಿಚಯವಾಯಿತು. ಇಬ್ಬರೂ ಪ್ರೀತಿಸಿ ಡಿಸೆಂಬರ್ 22, 2020 ರಂದು ವಿವಾಹವಾದರು.

ಯುಜುವೇಂದ್ರ-ಧನಶ್ರೀ ಮದುವೆಯಾಗಿ ಡಿಸೆಂಬರ್ 22ಕ್ಕೆ ನಾಲ್ಕು ವರ್ಷ ಪೂರೈಸಿದೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಇವರಿಬ್ಬರೂ ಕನಿಷ್ಟ ತಮ್ಮ ವಿವಾಹ ವಾರ್ಷಿಕೋತ್ಸವದ ಪೋಸ್ಟ್ ಗಳನ್ನಾಗಲಿ, ಶುಭಾಶಯಗಳನ್ನಾಗಲಿ ಹಂಚಿಕೊಂಡಿರಲಿಲ್ಲ. ಇದರಿಂದಾಗಿ ಇಬ್ಬರೂ ಬೇರೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಾಲಿವುಡ್ ನಿರ್ಮಾಪಕ ಮತ್ತು ಚಲನಚಿತ್ರ ವಿಮರ್ಶಕ ಕಮಲ್ ಆರ್ ಖಾನ್ ಚಾಹಲ್-ಧನಶ್ರೀ ಬೇರ್ಪಟ್ಟಿದ್ದಾರೆ ಎಂದು ಡಿಸೆಂಬರ್ 22ರಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ಚಹಲ್ ಧನಶ್ರೀ ಅವರ ದಾಂಪತ್ಯ ಹೆಚ್ಚು ದಿನ ನಡೆಯುವುದಿಲ್ಲ ಎಂದು ನನಗೆ ಮೊದಲಿನಿಂದಲೂ ತಿಳಿದಿತ್ತು. ಈಗ ಇಬ್ಬರೂ ಬೇರೆಯಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ಚಾಹಲ್-ಧನುಶ್ರೀ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು ಇವರಿಬ್ಬರ ವಿಚ್ಚೇದನದ ಸುದ್ದಿಗೆ ಬಲ ನೀಡುತ್ತಿವೆ.

 

Continue Reading

LATEST NEWS

Trending

Exit mobile version