ಐಸ್‌ಕ್ರೀಮ್ ಅನ್ನು ಇಷ್ಟಪಡದವರು ಯಾರೂ ಇಲ್ಲ. ಇದನ್ನು ಕೋನ್, ಸ್ಕೂಪ್, ಬಾರ್ ರೀತಿಯಲ್ಲಿ ಸವಿಯಬಹುದು. ಇನ್ನು ವೆನಿಲಾ ಐಸ್‌ಕ್ರೀಮ್, ಸ್ಟ್ರಾಬೆರಿ, ಚಾಕೋಲೆಟ್, ಪಿಸ್ತಾ ಹೇಳುತ್ತಾ ಹೋದರೆ ವೆರೈಟಿ ವೈರೆಟಿ ಐಸ್‌ಕ್ರೀಮ್‌ಗಳ ದೊಡ್ಡ ಪಟ್ಟಿಯೇ ಇದೆ. ಬಗೆಬಗೆಯ ಐಸ್‌ಕ್ರೀಮ್‌ಗಳು ಒಂದು ಕಡೆಯಾದರೆ, ಇಲ್ಲೊಂದು ವಿಶೇಷ ಬಗೆಯ ಐಸ್‌ಕ್ರೀಮ್ ಇದೆ.
ವೈರಲ್ ಆಯ್ತು ತಂದೂರಿ ಐಸ್‌ಕ್ರೀಮ್:
ಹೌದು… ಈ ಐಸ್‌ಕ್ರೀಮ್‌ನ ಹೆಸರು ತಂದೂರಿ ಐಸ್‌ಕ್ರೀಮ್. ಇತ್ತೀಚಿನ ದಿನಗಳಲ್ಲಿ ಫುಡ್ ಮೇಲಿನ ಪ್ರಯೋಗಗಳು ಹೆಚ್ಚಾಗುತ್ತಿವೆ. ಐಸ್‌ಕ್ರೀಮ್ ಮತ್ತು ಚಾಕಲೇಟ್ ದೋಸೆ, ಜಾಮೂನ್ ದೋಸೆ, ದಹಿ ಮ್ಯಾಗಿ, ಓರಿಯೊ ಪಕೋಡಾ, ಚಾಕೊಲೇಟ್ ರೈಸ್ ಬೌಲ್, ಡ್ರೈ ಫ್ರೂಟ್ ಆಮ್ಲೆಟ್, ವೋಡ್ಕಾ ಆಲೂ ಪರಾಠ, ಡಿಸೇಲ್ ಪರೋಟ ಹೀಗೆ ವಿಚಿತ್ರ ಕಾಂಬಿನೇಷನ್‌ನ ಆಹಾರಗಳು, ಖಾದ್ಯ ತಿಂಡಿಗಳಲ್ಲಾಗುವ ಹೊಸ ಪ್ರಯೋಗಗಳ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಇಂಟರ್‌ನೆಟ್‌ನಲ್ಲಿ ಇಂತಹ ಹೊಸ ಪ್ರಯೋಗಗಳು ಕಾಣ ಸಿಗುತ್ತಲೇ ಇರುತ್ತವೆ. ಈಗ ಸದ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದು ಹಾಟ್ ಹಾಟ್ ತಂದೂರಿ ಐಸ್‌ಕ್ರೀಮ್.
ಗ್ರಿಲ್ ಮೇಲೆ ಬೇಯುತ್ತಿದೆ ಐಸ್‌ಕ್ರೀಮ್:
ಬಿಸಿಲಿನ ಬೇಗೆ ತಣಿಸಿಕೊಳ್ಳಲು, ತಂಪಾಗಿರಲು ಐಸ್‌ಕ್ರೀಮ್ ತಿನ್ನೋದು ಸರಿ. ಆದರೆ ಈ ಐಸ್‌ಕ್ರೀಮ್ ನೋಡಿದರೆ ಬೇಸಿಗೆಯಲ್ಲಿ ತಿನ್ನೋದೆ ಕಷ್ಟ ಎನಿಸಿದೆ. ಗ್ರಿಲ್ ಮೇಲೆ ಬೇಯುತ್ತಿರುವ ಐಸ್‌ಕ್ರೀಮ್ ಈಗ ವೈರಲ್ ಆಗಿದೆ.
ಈ ತಂದೂರಿ ಐಸ್‌ಕ್ರೀಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ನಾಲ್ಕು ಐಸ್ ಕ್ರೀಮ್ ಬಾರ್‌ಗಳನ್ನು ತೆಗೆದುಕೊಂಡಿದ್ದಾನೆ. ಅದರಲ್ಲಿ ಎರಡು ಚಾಕೊಲೇಟ್ ಫ್ಲೇವರ್‌ಗಳು ಮತ್ತು ಇತರ ಎರಡು ವೆನಿಲ್ಲಾ ಫ್ಲೇವರ್‌ಗಳು.
ಈ ನಾಲ್ಕು ಐಸ್‌ಕ್ರೀಮ್ ಬಾರ್‌ಗಳನ್ನು ಆ ವ್ಯಕ್ತಿ ಸೀದಾ ಬಿಸಿ ಬಿಸಿ ಕೆಂಡದಲ್ಲಿ ಉಗಿ ಹಾಯುತ್ತಿರುವ ಗ್ರಿಲ್ ಮೇಲೆ ಇರಿಸುತ್ತಾನೆ. ಆಮೇಲೆ ಸ್ವಲ್ಪ ಹೊತ್ತಿನ ಬಳಿಕ ಆ ಐಸ್‌ಕ್ರೀಮ್ ಮೇಲೆ ಕಲರ್‌ಫುಲ್ ಆಗಿರುವ ಒಂದಿಷ್ಟು ಸಿಂಪರಣೆಗಳನ್ನು ಹಾಕಿ ಆ ಐಸ್‌ಕ್ರೀಮ್ ಬಾರ್‌ಗಳನ್ನು ಅಲಂಕರಿಸುತ್ತಾನೆ.
ಫುಡ್‌ಬಿ..ಯುಎನ್‌ಕೆ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋಗೆ “ತಂದೂರಿ ಚಾಕೊ-ಬಾರ್” ಎಂದು ಕ್ಯಾಪ್ಷನ್ ನೀಡಲಾಗಿದೆ.