Home ಪ್ರಮುಖ ಸುದ್ದಿ ಲಾಕ್ ಡೌನ್ ನಡುವೆ ತಮಿಳು ಸ್ಟಾರ್ ನಟ ವಿಜಯ್ ಗೆ ಮುದ್ದು ಮಗನದೇ ಚಿಂತೆ

ಲಾಕ್ ಡೌನ್ ನಡುವೆ ತಮಿಳು ಸ್ಟಾರ್ ನಟ ವಿಜಯ್ ಗೆ ಮುದ್ದು ಮಗನದೇ ಚಿಂತೆ

ಲಾಕ್ ಡೌನ್ ನಡುವೆ ತಮಿಳು ಸ್ಟಾರ್ ನಟ ವಿಜಯ್ ಗೆ ಮುದ್ದು ಮಗನದೇ ಚಿಂತೆ..

ತಮಿಳು ಚಿತ್ರರಂಗದ ಸ್ಟಾರ್ ನಟ ಇಳೆಯದಳಪತಿ ವಿಜಯ್ ಸಿನಿಮಾ ಕ್ಷೇತ್ರದಲ್ಲಿ ಮಿರಿ-ಮಿರಿ ಮಿಂಚುತ್ತಿರುವಾಗಲೇ, ಅವರ ಪುತ್ರನನ್ನು ಸಿನಿಮಾ ಉದ್ಯಮಕ್ಕೆ ಎಳೆ ತರಲಿದ್ದಾರೆ.

ದಳಪತಿ ವಿಜಯ್ ಪುತ್ರ ನಾಯಕನಾಗಿ ಮಿಂಚಲು ವೇದಿಕೆ ಕೂಡ ಸಿದ್ಧವಾಗಿದೆ.

ಎಸ್.. ವಿಜಯ್ ಪುತ್ರ ಜೇಸನ್ ಸಂಜಯ್ ಕಲರ್ ಫುಲ್ ದುನಿಯಾ ಸಿನಿಮಾ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ.

ಈ ಹಿಂದೆ ಸಿನಿಮಾವೊಂದರಲ್ಲಿ ಅಪ್ಪನೊಂದಿಗೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಜೇಸನ್ ಸಂಜಯ್ ಈಗ ಪೂರ್ಣ ಪ್ರಮಾಣದ ನಾಯಕನಾಗಿ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರಂತೆ.

ವಿಜಯ್ ಮಗನ ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಜಯ್ ಸ್ನೇಹಿತ, ಖ್ಯಾತ ನಟ ವಿಜಯ್ ಸೇತುಪತಿ.

ತೆಲುಗಿನ ರೀಮೇಕ್‌ ಸಿನಿಮಾದ ಮೂಲಕ ಜೇಸನ್ ಕಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರಂತೆ.

ತೆಲುಗಿನ ‘ಉಪ್ಪೆನಾ’ ಸಿನಿಮಾದ ರೀಮೇಕ್‌ ತಮಿಳಿನಲ್ಲಿ ನಿರ್ಮಿಸಲಾಗುತ್ತಿದೆ. ಇದೇ ವಿಜಯ್ ಮಗನ ಮೊದಲ ಸಿನಿಮಾ ಆಗಲಿದೆ.

ಏಪ್ರಿಲ್ ಎರಡರಂದು ಬಿಡುಗಡೆಯಾಗಬೇಕಿದ್ದ ‘ಉಪ್ಪೆನಾ’ ಚಿತ್ರ ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಇನ್ನೂ ತೆರೆ ಕಾಣಲು ಸಾಧ್ಯವಾಗಿಲ್ಲ.

ಜೇಸನ್ ಸಂಜಯ್ ಸದ್ಯ ಕೆನಡಾದಲ್ಲಿ ಸಿನಿಮಾ ಕುರಿತ ಎಬಿಸಿಡಿ ಕಲಿಯುತ್ತಿದ್ದಾರೆ. ಅಲ್ಲಿ ಅವರು ಸಿನಿಮಾ ಸಂಬಂಧಿತ ಕೋರ್ಸ್ ಕಲಿಯುತ್ತಿದ್ದಾರೆ.

ಸದ್ಯ ಇದೂ ಕೂಡ ನಟ ವಿಜಯ್ ಗೆ ತಲೆನೋವಾಗಿದೆ. ಪತ್ನಿ ಸಂಗೀತಾ ಹಾಗೂ ಮಗಳು ದಿವ್ಯ ಸಾಶಾ ಜೊತೆ ಮನೆಯಲ್ಲಿ ಸೇಫ್ ಆಗಿರೋ ವಿಜಯ್ ಗೆ ಹೊರದೇಶದಲ್ಲಿರುವ ಮಗನದೇ ಚಿಂತೆಯಾಗಿದೆ.

ಕೊರೊನಾ ಹಿನ್ನಲೆ ಒಮ್ಮಿಂದೊಮ್ಮೆಲೆ ಎಲ್ಲಾ ವಿಮಾನಗಳ ಹಾರಾಟ ರದ್ದಾದ ಹಿನ್ನಲೆ ಸಂಜಯ್ ಅಲ್ಲೆ ಸ್ಟಕ್ ಆಗಿದ್ದಾರೆ.

ಇನ್ನು ಲಾಕ್‌ಡೌನ್ ಅಂತ್ಯವಾಗಿ ಜೇಸನ್ ವಾಪಸ್ ಭಾರತಕ್ಕೆ ಬಂದ ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ.

ತೆಲುಗಿನಲ್ಲಿ ‘ಉಪ್ಪೆನ’ ಸಿನಿಮಾ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಅವರೇ ತಮಿಳಿನಲ್ಲಿಯೂ ನಿರ್ದೇಶನ ಮಾಡಲಿದ್ದಾರೆ.

ಇದು ಅವರ ಎರಡನೇ ಸಿನಿಮಾ ಎನಿಸಿಕೊಳ್ಳಲಿದೆ. ಉಪ್ಪೆನ ಸಿನಿಮಾ ಮರ್ಯಾದೆ ಹತ್ಯೆಯ ಕತೆ ಹೊಂದಿತ್ತು, ತೆಲುಗಿನಲ್ಲಿ ನಟ ವರುಣ್ ತೇಜ ಸಹೋದರ ಪಂಜ ವೈಷ್ಣವ್ ತೇಜ್ ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಅಂದಹಾಗೆ ನಟ ವಿಜಯ್ ಸೇತುಪತಿ ಈ ಸಿನಿಮಾದ ನಿರ್ಮಾಣ ಮಾಡುವ ಜೊತೆಗೆ ವಿಲನ್ ಆಗಿ ಅಭಿನಯಿಸಲಿದ್ದಾರೆ.

ವಿಜಯ್ ಸೇತುಪತಿ ಪ್ರಸ್ತುತ ‘ಮಾಸ್ಟರ್’ ಸಿನಿಮಾದಲ್ಲಿ ವಿಜಯ್‌ ಗೆ ವಿಲನ್ ಆಗಿದ್ದಾರೆ. ಮಾಸ್ಟರ್ ಸಿನಿಮಾ ಲಾಕ್‌ಡೌನ್ ನಂತರ ಬಿಡುಗಡೆ ಆಗಲಿದೆ.

ಒಟ್ಟಾರೆ ಅಪ್ಪ-ಮಗ ಇಬ್ಬರಿಗೂ ವಿಲನ್ ಆಗಲಿದ್ದಾರೆ ವಿಜಯ್ ಸೇತುಪತಿ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...