Saturday, May 21, 2022

‘ಮೊದಲು ಹಿಂಸಿಸುತ್ತಾರೆ, ಮತ್ತೆ ಹಸಿದ ನಾಯಿಗಳಿಗೆ ಎಸೆಯುತ್ತಾರೆ’ ತಾಲಿಬಾನಿ ಶಿಕ್ಷೆ ಅನುಭವಿಸಿದ ಮಹಿಳೆಯ ಮಾತು

ನವದೆಹಲಿ: “ಘಜ್ನಿಯಲ್ಲಿ ನಾನು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ತಾಲಿಬಾನ್​ ಉಗ್ರರು ನನ್ನನ್ನು ಸುತ್ತುವರೆದರು. ನನ್ನ ಐಡಿ ಕಾರ್ಡ್​ ನೋಡಿದ ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಕ್ರೂರಿಗಳು ನನ್ನ ಕಣ್ಣಿಗೆ ಮಾರಕಾಸ್ತ್ರದಿಂದ ಇರಿದು ಕಣ್ಣು ಕಿತ್ತರು ತಾಲಿಬಾನಿಗಳು ಮೊದಲು ನಮ್ಮನ್ನು ಹಿಂಸಿಸುತ್ತಾರೆ. ಬಳಿಕ ನಮ್ಮ ದೇಹವನ್ನು ನಾಯಿಗಳಿಗೆ ಆಹಾರವಾಗಲು ಎಸೆಯುತ್ತಾರೆ. ನಾನು ಬದುಕಿರುವುದೇ ನನ್ನ ಅದೃಷ್ಟ’ ಇದು ಅಫಘಾನಿನಲ್ಲಿ ನರಕ ಯಾತನೆ ಅನುಭವಿಸಿದ ಖತೇರಾ ಮಾತು.


ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನಿಗಳಿಂದ ದೌರ್ಜನ್ಯದಿಂದ ಕಣ್ಣು ಕಳೆದುಕೊಂಡ ಮಹಿಳೆಯೊಬ್ಬರು ದೆಹಲಿಗೆ ಬಂದು ಉಗ್ರ ಸಂಘಟನೆಯ ಭಯಾನಕತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ತಾಲಿಬಾನಿಗಳ ದೃಷ್ಟಿಯಲ್ಲಿ ಮಹಿಳೆಯರೆಂದರೆ ಬದುಕುವ, ಉಸಿರಾಡುವ ಜೀವಿಗಳಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ ಕೊಂದು, ಅವರ ದೇಹವನ್ನ ನಾಯಿಗೆ ಎಸೆಯುತ್ತಾರೆ.
ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ ತಮ್ಮ ಕಹಿ ನೆನಪುಗಳನ್ನು ಹೇಳುತ್ತಾ ಹೋದರು. ಆಕೆಗೆ ಈ ಶಿಕ್ಷೆ ಅನುಭವಿಸುವ ವೇಳೆ ಎರಡು ತಿಂಗಳ ಗರ್ಭಿಣಿ. ಆಕೆಯ ತಂದೆ ತಾಲಿಬಾನ್​ ಸಂಘಟನೆಯ ಮಾಜಿ ಸದಸ್ಯನಾಗಿದ್ದು, ಆಕೆಯ ಮೇಲೆ ದಾಳಿ ನಡೆಸಲು ಅವರೇ ಪಿತೂರಿ ನಡೆಸಿದ್ದಾರೆ ಎಂದು ಆಕೆ ದೂರಿದಳು.
ಕಳೆದ 20 ವರ್ಷಗಳಲ್ಲಿ ಮಹಿಳೆಯರು ಮತ್ತು ಯುವಕರು ಜೀವನೋಪಾಯಕ್ಕಾಗಿ ಸೂಕ್ತ ಶಿಕ್ಷಣ ಪಡೆಯುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರೇ ತುಂಬಿರುತ್ತಿದ್ದರು. ಆದರೆ ಈಗ ತಾಲಿಬಾನಿಗಳಿಂದ ರಕ್ಷಿಸಲು ಮಹಿಳೆಯರ ಶೈಕ್ಷಣಿಕ ಪ್ರಮಾಣಪತ್ರಗಳನ್ನೇ ಕುಟುಂಬಸ್ಥರು ಸುಡುತ್ತಿದ್ದಾರೆ. ತಾಲಿಬಾನ್ ಉಗ್ರರು ಮಹಿಳೆಯರಿಗೆ ಪುರುಷ ವೈದ್ಯರನ್ನೂ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗಕ್ಕೂ ಬಿಡುವುದಿಲ್ಲ. ಹೀಗಿದ್ದ ಮೇಲೆ ಅಲ್ಲಿ ಮಹಿಳೆಯರಿಗೆ ಸಾವು ಬಿಟ್ಟು ಬೇರೇನಾದರೂ ಉಳಿದಿದೆಯೇ ಎಂದು ಖತೇರಾ ನೋವು ತೋಡಿಕೊಂಡಿದ್ದಾರೆ.
ಕಾಬೂಲ್​ನಿಂದ ತಪ್ಪಿಸಿಕೊಂಡು ದೆಹಲಿಗೆ ಬಂದಿರುವ ಖತೇರಾ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕೆಯ ಪತಿ ಹಾಗೂ ಮಗು ಕೂಡ ದೆಹಲಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮುಂಬೈನಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಂಭ್ರಮ

ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಾಯನ್ ಪೂರ್ವದ ಕಿಂಗ್‍ಸರ್ಕಲ್‍ನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ನಡೆಯಿತು.ಕೇಂದ್ರ...

ಮಲ್ಪೆ: ಸ್ಕೂಟರ್‌ನಲ್ಲಿ ಚಲಿಸುತ್ತಿದ್ದಾಗ ಹಾರ್ಟ್ ಅಟ್ಯಾಕ್-ವ್ಯಕ್ತಿ ಸಾವು

ಮಲ್ಪೆ: ಕೆಲಸ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಬುಧವಾರ ನಡೆದಿದೆ.ಮಲ್ಪೆ ಕಂಬಳತೋಟ ನಿವಾಸಿ ಪ್ರತಾಪ್ (32) ಮೃತ...

ಬಂಟ್ವಾಳ: SVS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ...