Thursday, February 2, 2023

ತಲಪಾಡಿ ಟೋಲ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿ.12 ಜಿಲ್ಲಾ ಇಂಟಕ್ ಪ್ರತಿಭಟನೆ..!

ತಲಪಾಡಿ ಟೋಲ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿ.12 ಜಿಲ್ಲಾ ಇಂಟಕ್ ಪ್ರತಿಭಟನೆ..! 

ಮಂಗಳೂರು: ತಲಪಾಡಿ ಟೋಲ್ ಗೇಟ್ ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇಲ್ಲಿ ವಾಹನ ಸವಾರರಿಂದ ಬೇಕಾಬಿಟ್ಟಿ ಸುಂಕ ವಸೂಲು‌ ಮಾಡಲಾಗುತ್ತಿದೆ‌ ಜಿಲ್ಲಾ ಇಂಟಕ್   ಆರೋಪಿಸಿದೆ  , ಈ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ, ಡಿಸೆಂಬರ್12ರಂದು ಪ್ರತಿಭಟನೆಗೆ ಮುಂದಾಗಿದೆ.ಈ ವಿಚಾರವಾಗಿ ಗುರುವಾರ ತೊಕ್ಕೊಟ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಇಂಟೆಕ್ ಪ್ರಧಾನ ಕಾರ್ಯದರ್ಶಿ
ದಿನಕರ್ ಶೆಟ್ಟಿ, ತಲಪಾಡಿ ಟೋಲ್ ಗೇಟ್ ಸಮಸ್ಯೆಯ ತಾಣವಾಗಿದ್ದು, ಇದರ ವಿರುದ್ಧ ಹಲವು ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದರೂ ಗುತ್ತಿಗೆದಾರರು ನಿರ್ಲಕ್ಷಿಸುತ್ತಿದ್ದಾರೆ.

ಟೋಲ್ ಗೇಟ್ ನಿಂದ ಮೂರು ಕಿ.ಮೀ. ವ್ಯಾಪ್ತಿಯ ನಿವಾಸಿಗರಿಗೆ ಉಚಿತ ಪಾಸ್ ನೀಡಬೇಕು ಇಲ್ಲವೇ ಗುರುತು ಚೀಟಿ ಆಧಾರದಲ್ಲಿ ಸುಂಕದಿಂದ ವಿನಾಯಿತಿ ನೀಡಬೇಕೆನ್ನುವ ನ್ಯಾಯಾಲಯದ ಆದೇಶ ಇದ್ದರೂ ತಲಪಾಡಿ ಪಂಚಾಯಿತಿ ವ್ಯಾಪ್ತಿಯವರಿಗೆ ಮಾತ್ರ ಸುಂಕ ವಿನಾಯಿತಿ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೋಲ್ ಗುತ್ತಿಗೆದಾರರು 24 ತಾಸಿಗೆ ದುಪ್ಪಟ್ಟು ಹಣ‌ ಪಡೆಯುವ ಮೂಲಕ ವಾಹನ ಸವಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದೇ ಸಮಸ್ಯೆ ಮುಂದಿಟ್ಟುಕೊಂಡು ಕರ್ನಾಟಕದ ಬಸ್ಸುಗಳು ಟೋಲ್‌ಗೇಟ್ ದಾಟದೆ ಪ್ರಯಾಣಿಕರನ್ನು ಒಂದು ಕಿ.ಮೀ.‌ ದೂರದಲ್ಲೇ ಇಳಿಸಿ ನಡೆದಾಡುವಂತೆ ಮಾಡಿದ್ದಾರೆ.

ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತವಾಗಲಿ, ಉಸ್ತುವಾರಿ ಸಚಿವರಾಗಲೀ ಪರಿಹಾರ ಕಲ್ಪಿಸಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂಟಕ್ ವತಿಯಿಂದ ಮೊದಲ ಹಂತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಳಿಕ ಪ್ರಾಧಿಕಾರದ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ.

ಆ ಬಳಿಕವೂ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಇಂಟಕ್ ಮಂಗಳೂರು ಕ್ಷೇತ್ರಾಧ್ಯಕ್ಷ ಹರೀಶ್ ರಾವ್, ಯುವ ಇಂಟಕ್ ಅಧ್ಯಕ್ಷ ಸಿದ್ದೀಕ್ ಹಸನ್, ದಕ್ಷಿಣ ಕ್ಷೇತ್ರ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ಉಪಾಧ್ಯಕ್ಷ ಸಿರಾಜುದ್ದಾನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಜತೆಕಾರ್ಯದರ್ಶಿ ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯನ ಪೀಡನೆಗೆ ಬೇಸತ್ತು ವೈದ್ಯೆ ಜೀವಾಂತ್ಯ..!

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರು: ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು...

ಬಂಟ್ವಾಳ : ಕೆಲಿಂಜ ಕಲ್ಮಲೆ ವೀರಕಂಭ ರಕ್ಷಿತಾ ಅರಣ್ಯದಲ್ಲಿ ಅಗ್ನಿ ಅವಘಡಕ್ಕೆ ಮರ, ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ..!   

ಬಂಟ್ವಾಳ : ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿ ಅಪಾರ ನಷ್ಡ ಸಂಭವಿಸಿದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜ ಕಲ್ಮಲೆ  ವೀರಕಂಭ ರಕ್ಷಿತಾ ಅರಣ್ಯದಲ್ಲಿ ನಡೆದಿದೆ.ಬೆಂಕಿ ಬೀಳಲು ಸ್ಪಷ್ಟವಾದ ಕಾರಣ...

ಕಾರ್ಕಳದಲ್ಲಿ ಟ್ಯಾಂಕರ್- ಬೈಕ್ ಅಪಘಾತ: ಸವಾರ ಮೃತ್ಯು, ಸಹಸವಾರೆ ಗಾಯ..!

ಕಾರ್ಕಳ: ಟ್ಯಾಂಕರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರ್ಕಳದ ಬಜಗೋಳಿ ಸಮೀಪದ ಮಾಳ ಚೆಕ್ ಪೋಸ್ಟ್ ಬಳಿ ಇಂದು ಅಪರಾಹ್ನ ನಡೆದಿದೆ.ಮೃತರನ್ನು ಮಹಾರಾಷ್ಟ್ರ ಮೂಲದ ವೈಭವ್...