Friday, August 12, 2022

ಬಂದು ಹೋದರು-ತಿಂದು ಹೋದರು: ಚಹಾ-ಚಟ್ಟಂಬಡೆಗೆ ಸೀಮಿತವಾದ ತಲಪಾಡಿ ಗ್ರಾಮಸಭೆ..!

ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ನಿನ್ನೆ ನಡೆದ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿದವರು ಸಭೆ ನಡೆಸದೇ ಚಹಾ- ಚಟ್ಟಂಬಡೆ ತಿಂದು ಹೋದ ವಿದ್ಯಮಾನ ನಡೆದಿದೆ.

24 ಗ್ರಾ.ಪಂ ಸದಸ್ಯರ ಪೈಕಿ 4 ಮಂದಿ ಸದಸ್ಯರು ಹಾಗೂ ಪ್ರಮುಖವಾಗಿ ಭಾಗವಹಿಸಬೇಕಾಗಿದ್ದ 14-15 ನೇ ಹಣಕಾಸು ಯೋಜನೆಯ ಅಧಿಕಾರಿಯೇ ಇಲ್ಲದೆ ಗ್ರಾಮಸ್ಥರ ವಿರೋಧಕ್ಕೆ ಸಭೆ ಅರ್ಧದಲ್ಲೇ ರದ್ದುಗೊಂಡಿದೆ.


ಅಕ್ಷರದಾಸೋಹ ಮಂಗಳೂರು ಇದರ ಸಹಾಯಕ ನಿರ್ದೇಶಕಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಗೈರಾಗಿದ್ದರು.

ಅದಕ್ಕಾಗಿ ಸಭೆಯಲ್ಲಿ ಭಾಗವಹಿಸಿದ 60 ವರ್ಷ ಪ್ರಾಯ ಮೇಲ್ಪಟ್ಟ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಅಧಿಕಾರಿ ಸೂಚಿಸಿದರು. ಆದರೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ 11.30 ಆದರೂ ಆರಂಭವಾಗಿಲ್ಲ,

14-15 ನೇ ಹಣಕಾಸು ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ 2021-22 ನೇ ಸಾಲಿನ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮಸಭೆ ಆಗಿರುವುದರಿಂದ 14-15 ನೇ ಹಣಕಾಸು ಯೋಜನೆ ಇಂಜಿನಿಯರ್ ಅವರ ಭಾಗವಹಿಸುವಿಕೆ ಅಗತ್ಯ.

ಅವರೇ ಇಲ್ಲದಿದ್ದಲ್ಲಿ ಸಭೆಯಿಂದ ಮಾಹಿತಿ ಸಿಗುವುದು ಅಸಾಧ್ಯ. ಈವರೆಗೆ ಯೋಜನೆಯಡಿ ನಡೆಸಲಾದ ಕಾಮಗಾರಿಯ ಪರಿಶೀಲನೆಗೂ ಇಂಜಿನಿಯರ್ ಭೇಟಿ ಕೊಟ್ಟಿಲ್ಲ. ಕಾಮಗಾರಿಗಳೆಲ್ಲವೂ ಕಳಪೆಯಿಂದ ಕೂಡಿದೆ. ನಾಲ್ಕು ವರ್ಷಗಳಿಂದ ಇಂಜಿನಿಯರ್ ನಾಪತ್ತೆಯಾಗಿದ್ದಾರೆ. ಈವರೆಗೂ ಕೋರ್ ವೆಲ್ ರಚನೆಯಾಗಿಲ್ಲ.

ಇಂಜಿನಿಯರ್ ಬಾರದೇ ಇದ್ದಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಯಶು ಪಕಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಗ್ರಾಮಸ್ಥ ಅಬ್ಬಾಸ್ ಉಚ್ಚಿಲ್ ಅವರು ದನಿಗೂಡಿಸಿದರು. ಈ ಹಿಂದೆ ನಡೆದ ಗ್ರಾಮಸಭೆಯಲ್ಲೂ ಇದೇ ವಿಚಾರಕ್ಕೆ ಸಂಬಂಧಿಸಿ ಗದ್ದಲಗಳು ಉಂಟಾದಾಗ ಗ್ರಾಮ 24 ಮಂದಿ ಸದಸ್ಯರು ಮುಂದಿನ ಸಭೆಯಲ್ಲಿ ಇಂಜಿನಿಯರ್ ಅವರನ್ನು ಕರೆಸುವ ವಿಶ್ವಾಸ ನೀಡಿದ್ದರು.

ಆದರೆ ವಿಶೇಷ ಗ್ರಾಮಸಭೆಗೆ ವಿಶ್ವಾಸ ನೀಡಿದ 20 ಮಂದಿ ಗ್ರಾ.ಪಂ ಸದಸ್ಯರೇ ಗೈರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರಿಂದ ಸಭೆ ಅರ್ಧದಲ್ಲೇ ರದ್ದುಗೊಂಡು, ಇದೇ ತಿಂಗಳ 23 ರಂದು ಇಂಜಿನಿಯರ್ ಉಪಸ್ಥಿತಿಯಲ್ಲಿ ಮತ್ತೊಮ್ಮೆ ವಿಶೇಷ ಗ್ರಾಮಸಭೆ ನಡೆಸುವ ತೀರ್ಮಾನಕ್ಕೆ ಅಭಿವೃದ್ಧಿ ಅಧಿಕಾರಿ ಕೇಶವ ಮುಂದಾದರು.

ಅರ್ಧ ಗಂಟೆ ಕಾಲ ನಡೆದ ವಿಶೇಷ ಗ್ರಾಮಸಭೆ ಕೇವಲ ಚಹಾ- ಚಟ್ಟಂಬಡೆಗೆ ಮಾತ್ರ ಸೀಮಿತವಾಯಿತು.
ಸಭೆಯಲ್ಲಿ ಗ್ರಾ.ಒಂ ಅಧ್ಯಕ್ಷೆ ಪುಷ್ಪ ಶೆಟ್ಟಿ, ಉಪಾಧ್ಯಕ್ಷ ಫಯಾಝ್,ಮಾಜಿ ಪಂ ಸದಸ್ಯ ಫಾರುಕ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಶರತ್ ಮಡಿವಾಳ ಹತ್ಯೆಗೆ 5 ವರ್ಷ : ಇನ್ನೂ ಸಿಕ್ಕಿಲ್ಲ ಓರ್ವ ಆರೋಪಿ- ಅರೆಸ್ಟಾದವರೆಲ್ಲರೂ ರಿಲೀಸ್..!

ವಿಶೇಷ ವರದಿಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು...

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...