LATEST NEWS
ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರ ತಂಡದಿಂದ ಹಲ್ಲೆ
Published
1 day agoon
By
NEWS DESK2ಉಳ್ಳಾಲ: ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ಎಸಗಿರುವ ಘಟನೆ ರಾ.ಹೆ. 66ರ ತಲಪಾಡಿಯಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಮಂಗಳೂರಿನಿಂದ ಕೇರಳ ಕಡೆಗೆ ಉತ್ತರಪ್ರದೇಶ ನೋಂದಾಯಿತ ಐ-20 ಕಾರೊಂದರಲ್ಲಿ ಐವರು ಯುವಕರು ತೆರಳುತ್ತಿದ್ದರು. ತಲಪಾಡಿ ಟೋಲ್ ಗೇಟಿನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕಾರಿನಲ್ಲಿದ್ದ ಯುವಕರ ತಂಡ ಕಾರನ್ನ ಮುಂದೆ ನಿಲ್ಲಿಸಿ ಸಿಬ್ಬಂದಿ ಬಳಿಗೆ ಬಂದು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿರುತ್ತಾರೆ.
ಘಟನೆಯಲ್ಲಿ ಟೋಲ್ ಸಿಬ್ಬಂದಿ ಮನು, ಸುಧಾಮ, ಅಮನ್ ಅವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಮೂವರು ಆರೋಪಿಗಳು ಮೂಲತಃ ಉಳ್ಳಾಲ ನಿವಾಸಿಗಳಾಗಿದ್ದು, ಅವರನ್ನು ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
DAKSHINA KANNADA
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Published
20 minutes agoon
04/12/2024ಉಳ್ಳಾಲ: ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರವು ಪ್ರಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ನಟ , ನಿರ್ದೇಶಕ ಉಪೇಂದ್ರ ಹೇಳಿದರು.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿಸೆಂಬರ್ 20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ ಯುಐ ಸಿನೆಮಾದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.
ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪ್ರಕೃತಿ ರಮಣೀಯವಾಗಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು. ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ , ರಾಜೇಶ್ ಭಟ್ ಮೊದಲಾದವರಿದ್ದರು. ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನು ಕ್ಷೇತ್ರದ ಪರವಾಗಿ ಅಭಿನಂದಿಸಿದರು.
ಮಂಗಳೂರು/ಅಮೃತಸರ : ಅಮೃತಸರದ ಗೋಲ್ಡನ್ ಟೆಂಪನ್ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿಕದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂ*ಡಿನ ದಾ*ಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಹೊರಗೆ ನಿಂತಿದ್ದವರು ಗುಂ*ಡು ಹಾರಿಸಿದ ನರೇನ್ ಸಿಂಗ್ ಎಂಬಾತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಸುಖ್ ಬೀರ್ ಸಿಂಗ್ ಬಾದಲ್‌ರನ್ನು ಗುರಿಯಾಗಿಸಿ ವ್ಯಕ್ತಿ ಹಾರಿಸಿದ ಗುಂಡು ಗೋಡೆಗೆ ತಗುಲಿದ್ದರಿಂದ, ಅದೃಷ್ಟವಶಾತ್ ಪ್ರಾ*ಣಾಪಾ*ಯದಿಂದ ಪಾರಾಗಿದ್ದಾರೆ. ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಎಸ್‌ಎಡಿ ಆರೋಪಿಸಿದೆ.
ಇದನ್ನೂ ಓದಿ : ‘ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ’: ಜಿತೇಶ್ ಶರ್ಮಾ !
ಇತ್ತೀಚೆಗಷ್ಟೇ, ಅಕಾಲಿ ದಳದ ನಾಯಕನಿಗೆ 2015ರಲ್ಲಿ ಗುರು ಗ್ರಂಥ ಸಾಹಿಬ್‌ನ ತ್ಯಾಗದಲ್ಲಿ ಡೇರಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದಕ್ಕಾಗಿ ಅಕಾಲ್ ತಖ್ತ್ ಶಿಕ್ಷೆ ವಿಧಿಸಿತ್ತು. ಅವರು ಪ್ರತಿದಿನ ಒಂದು ಗಂಟೆ ದೇವಸ್ಥಾನದಲ್ಲಿ ದ್ವಾರಪಾಲಕನಾಗಿ ಕೆಲಸ ಮಾಡಬೇಕಾಗುತ್ತದೆ. ಶೌಚಾಲಯ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ.
LATEST NEWS
ಸರ್ಕಾರಿ ಉದ್ಯೋಗಿಗಳೇ ಬಿಪಿಎಲ್ ಕಾರ್ಡ್ ನಿಮ್ಮ ಬಳಿ ಇದೆಯಾ ? ಇದನ್ನೊಮ್ಮೆ ಓದಿ ..
Published
44 minutes agoon
04/12/2024ಈಗಾಗಲೇ ಕರ್ನಾಟಕ ಸರ್ಕಾರ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ನಡೆಸುತ್ತಿದ್ದು, ಬಿಪಿಎಲ್ ಕಾರ್ಡ್ (BPL Card) ಪಡೆಯುವ ಅರ್ಹತೆ ಷರತ್ತುಗಳ ಆಧಾರದಲ್ಲಿ ಸರ್ಕಾರೀ ನೌಕರರು, ತೆರಿಗೆದಾರರ ಬಳಿ ಬಿಪಿಎಲ್ ಇದ್ದರೆ ಅದನ್ನು ಎಪಿಎಲ್ ಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ. ಅಂತೆಯೇ ಈ ನಡುವೆ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರೀ ನೌಕರರಿಗೆ ಬಿಗ್ ಶಾಕ್ ಸಿಕ್ಕಿದೆ.
ಸರ್ಕಾರದ ಮಾನದಂಡದ ಪ್ರಕಾರ ಸರ್ಕಾರೀ ನೌಕರರು, ತೆರಿಗೆ ಪಾವತಿ ಮಾಡುವವರಿಗೆ ಬಿಪಿಎಲ್ ಕಾರ್ಡ್ ರದ್ದಾಗಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿದ್ದ ನೌಕರರ ರೇಷನ್ ಕಾರ್ಡ್ ನ್ನು ಎಪಿಎಲ್ ಗೆ ವರ್ಗಾಯಿಸಿರುವುದಲ್ಲದೆ ದಂಡದ ಬರೆ ನೀಡಿದೆ.
ಇನ್ನು ಇದುವರೆಗೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 4,12, 890 ರೂ. ದಂಡ ವಿಧಿಸಲಾಗಿದೆ ಹಾಗೂ ಸುಮಾರು 72 ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಅರ್ಹತೆ ಇರುವ ಬಡವರಿಗೆ ಮಾತ್ರ ಲಭಿಸುವಂತಾಗಬೇಕು. ಬಿಪಿಎಲ್ ಕಾರ್ಡ್ ಮೂಲಕ ಅನರ್ಹರೂ ಉಚಿತ ಯೋಜನೆಗಳ ಲಾಭ ಪಡೆಯುತ್ತಿದ್ದರೆ ಅದು ಸರ್ಕಾರಕ್ಕೆ ನಷ್ಟ ಉಂಟು ಮಾಡಲಿದೆ.
LATEST NEWS
ಕ್ರೂರ ವ್ಯಾಘ್ರನೊಂದಿಗೆ ಹೋರಾಡಿ ಪತಿಯನ್ನು ರಕ್ಷಿಸಿದ ಪತ್ನಿ…
ಶಬರಿಮಲೆ ಯಾತ್ರಿಕರಿದ್ದ ಬಸ್ ಅ*ಪಘಾತ; 19 ಮಂದಿಗೆ ಗಾ*ಯ, ಒಂದು ಸಾ*ವು
ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!
ಇಸ್ರೊದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಮಿಷನ್ ಉಡಾವಣೆ
ವಿಟ್ಲ: ಬಾಡಿಗೆಗೆಂದು ಹೋದ ಅಟೋ ಚಾಲಕ ನಾಪತ್ತೆ
ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?
Trending
- BANTWAL6 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM5 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru7 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !