DAKSHINA KANNADA
‘ತಾಳಮದ್ದಲೆ ಸಂಘಗಳು ಯಕ್ಷಗಾನಕ್ಕೆ ಭದ್ರ ಬುನಾದಿ’
Published
2 years agoon
By
Adminಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘದ 27 ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯೀ ದೇವಸ್ಥಾನದ ವಠಾರದಲ್ಲಿ ಜರಗಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಶುಭವನ್ನು ಯಕ್ಷಗಾನದ ಅಭಿಮಾನಿ, ಪ್ರೇಕ್ಷಕ ಎನ್. ಟಿ. ರೈ ಅಧ್ಯಕ್ಷ ಸ್ಥಾನದಿಂದ ಹಾರೈಸಿದರು.ಈ ಸಂಘದ ಏಳಿಗೆಗೆ ತನ್ನಿಂದಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಸುದಾಸ್ ಆಚಾರ್ಯ ಕಾವೂರು 5 ನೆಯ ತರಗತಿಯಲ್ಲಿ ಇರುವಾಗಲೇ ಯಕ್ಷಗಾನದ ವೇಷಗಳನ್ನು ಮಾಡುತ್ತಿದ್ದವರು.
7 ನೆಯ ತರಗತಿಯಲ್ಲಿರುವಾಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಚೆಂಡೆ ಮದ್ದಳೆ ವಾದನವನ್ನು ಕಲಿತರು.
ಪೊಲಿಟೆಕ್ನಿಕ್ ವಿದ್ಯಾಭ್ಯಾಸದ ಬಳಿಕ ವೃತ್ತಿಯ ಜೊತೆಗೇ ಹಿಮ್ಮೇಳ ವಾದಕರಾಗಿ ಕಲಾ ಸೇವೆಯನ್ನು ಮಾಡುತ್ತ ಬಂದವರು.
ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ಸಂಮಾನಕ್ಕೆ ಉತ್ತರಿಸಿದ ಸುದಾಸ್ ಆಚಾರ್ಯ ಕಲಾ ಜೀವನದಲ್ಲಿ ತನ್ನನ್ನು ತಿದ್ದಿದ ಹಿರಿಯರನ್ನು ಸ್ಮರಿಸಿಕೊಂಡರು.
ಹಿಮ್ಮೇಳ ವಾದನ ಕಲಿತ ಬಳಿಕ ಅದನ್ನು ಅಭ್ಯಾಸ ಮಾಡಿದ್ದೇ ಈ ಸಂಘದಲ್ಲಿ. ಇಂದು ಸಂಮಾನ ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಕೀರ್ತಿಶೇಷ ತಿಮ್ಮಪ್ಪ ಗುಜರನ್ ತಲಕಳ ಮೇಳವನ್ನು 38 ವರ್ಷ ಹಾಗೂ ಉಳ್ಳಾಲ ಭಗವತಿ ಮೇಳವನ್ನು 18 ವರ್ಷ ಮುನ್ನಡೆಸಿದವರು.40 ಕ್ಕೂ ಮಿಕ್ಕಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು. ಈ ಸಂಘಕ್ಕೆ ನೀಡಿದ ಸಹಕಾರವನ್ನು ಸಂಜಯ ಕುಮಾರ್ ಸಂಸ್ಮರಣೆ ಮಾಡಿದರು.
ಇನ್ನೋರ್ವ ಅತಿಥಿ ಪ್ರೊ. ಶೃತ ಕೀರ್ತಿ ರಾಜ್ ಸಂಘದ ನೂರು ವರ್ಷಗಳಲ್ಲಿ ದುಡಿದ ಹಲವು ತಲೆಮಾರಿನವರ ಸೇವೆಯನ್ನು ನೆನಪಿಸಿಕೊಂಡರು.
ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಇಂದಿನ ಸುಖದ ಯಕ್ಷಗಾನಕ್ಕೆ ಹಲವು ಕಲಾವಿದರ ತ್ಯಾಗವೇ ಕಾರಣ ಎಂದು ಹೇಳಿದ ಮಾತುಗಳನ್ನು ನೆನಪಿಸಿದರು.
ತಾಳ ಮದ್ದಳೆ ಕ್ಷೇತ್ರ ಯಕ್ಷಗಾನಕ್ಕೆ ಭದ್ರ ಬುನಾದಿ. ಯಕ್ಷಗಾನದಲ್ಲಿ ಮಾತೆ ಮುಖ್ಯ. ವೇಷ ಭೂಷಣ, ಹೆಜ್ಜೆಗಾರಿಕೆ, ಮುಖವರ್ಣಿಕೆ ದಿನವೂ ಒಂದೇ ರೀತಿ ಇದ್ದರೂ ಮಾತುಗಾರಿಕೆ ಪ್ರತಿ ದಿನ ಬೇರೆಯೇ ಇರುತ್ತದೆ.
ಅದು ಸಾಧ್ಯವಾಗುವುದು ತಾಳಮದ್ದಳೆ ಸಂಘಗಳ ಮೂಲಕ. ಇಂತಹ ಅಪೂರ್ವ ಇತಿಹಾಸವುಳ್ಳ ಸಂಘ ಇನ್ನೂ ಹಲವು ವರ್ಷ ಕಲಾ ಸೇವೆ ಮಾಡಲೆಂದು ಹಾರೈಸಿದರು.
ಇನ್ನೋರ್ವ ಅತಿಥಿ ತಿಮ್ಮಪ್ಪ ಗುಜರನ್ ಇವರ ಪುತ್ರಿ, ತಲಕಳ ಮೇಳದ ಸಂಚಾಲಾಕಿ ತಮ್ಮ ಮೇಳ ಆಸಕ್ತ ಎಲ್ಲಾ ಕಲಾವಿದರಿಗೆ ಅವಕಾಶವನ್ನು ಕೊಡುತ್ತಿದೆ. ಈ ಸಂಘಕ್ಕೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಸಂಮಾನ ಪತ್ರವನ್ನು ಅಶೋಕ ಬೋಳೂರ್ ಪ್ರಸ್ತುತಪಡಿಸಿದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ. ಎಸ್. ಭಂಡಾರಿ ಸ್ವಾಗತವನ್ನು ಕೋರಿದರು.
ಹಿರಿಯ ಕಲಾವಿದ ಮೋಹನ್ ಬಂಗೇರ,ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಾಗಾಸ್ತ್ರ ಕುಂಭಕರ್ಣ ಕಾಳಗ ತಾಳಮದ್ದಳೆ ಜರಗಿತು.
DAKSHINA KANNADA
ಮಂಗಳೂರು: 73ನೇ ವರ್ಷದ ಬಳ್ಳಾಲ್‌ಭಾಗ್ ಗುರ್ಜಿ ದೀಪೋತ್ಸವ ಸಂಭ್ರಮ
Published
3 hours agoon
29/11/2024ಮಂಗಳೂರು: ಬಳ್ಳಾಲ್‌ಭಾಗ್ ಗುರ್ಜಿ ದೀಪೋತ್ಸವ ಸಮಿತಿ ವತಿಯಿಂದ 73ನೇ ವರ್ಷದ ಗುರ್ಜಿ ದೀಪೋತ್ಸವ ಬಹಳ ಸಂಭ್ರಮದಿಂದ ಜರುಗಿತು.
ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ , ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನೆರವೇರಿಸಲಾಯಿತು. ಅತ್ಯಂತ ಜನಮಣ್ಣನೆ ಗಳಿಸಿದ ಈ ಗುರ್ಜಿ ದೀಪೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಬಾರಿಯೂ ನಡೆಯಿತು. ಸಂಜೆ 5.55ಕ್ಕೆ ದೀಪಾರಾಧನೆ, ಸಂಜೆ 6 .30ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ರಾತ್ರಿ 9.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಿತು. ವೈಭವದ ಮೆರವಣಿಗೆ ಮೂಲಕ ಶ್ರೀದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬರಲಾಯಿತು. ವಿದ್ಯುತ್ ಅಲಂಕಾರ, ಹೂವಿನ ಅಲಂಕಾರದಿಂದ ರಥವನ್ನು ಶೃಂಗರಿಸಲಾಗಿತ್ತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ಉದ್ಯಮಿ ಕುಡ್ಪಿ ಜಗದೀಶ್ ಶೆಣೈ ಅವರು ನೀಡಿದರು. ಕಾರ್ಮಿಕ ನಾಯಕ ಸುರೇಶ್ಚಂದ್ರ ಶೆಟ್ಟಿ, ಉದ್ಯಮಿ ರವೀಂದ್ರ ಶೇಟ್, ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್ , ರಂಗ ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲು, ಸುಶಾಂತ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಪ್ರಮೋದ್ ಭಂಢಾರಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸನಾತನ ನೃತ್ಯಾಂಜಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಇದೇ ವೇಳೆ ಗುರ್ಜಿ ದೀಪೋತ್ಸವದಲ್ಲಿ ಹಲವು ಮಂದಿ ಸಾಧಕರನ್ನು ಗೌರವಿಸಲಾಯಿತು.
BANTWAL
ನಾಲ್ಕು ಪತ್ನಿಯರಿಗೆ ಕೈಕೊಟ್ಟು ಐದನೇ ಮದುವೆಗೆ ಸಜ್ಜಾಗುತ್ತಿದ್ದ ರಸಿಕ ಅರೆಸ್ಟ್ !!
Published
8 hours agoon
29/11/2024ಬಂಟ್ವಾಳ: ನಾಲ್ಕು ಮದುವೆಯಾಗಿ, ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹ*ಲ್ಲೆ ನಡೆಸಿ ಮನೆಯಿಂದ ಹೊರದಹಾಕಿದ್ದ ರಾ*ಕ್ಷಸೀಯ ಕೃ*ತ್ಯವೊಂದು ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಬುಧವಾರ (ನ.27) ರಾತ್ರಿ ನಡೆದಿದೆ.
ಈ ಬಗ್ಗೆ ಸಂತ್ರಸ್ತ ಪತ್ನಿ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದನ್ನೇ ಕಸುಬಾಗಿಸಿಕೊಂಡ ನಟೋರಿಯಸ್ ಬಹುಪತ್ನಿ ವಲ್ಲಭನನ್ನು ಮಾಣಿ ರಫೀಕ್ ಯಾನೆ ಮಹಮ್ಮದ್ ರಫೀಕ್(42)ನನ್ನು ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ. ಆರೋಪಿ ಮಾಣಿ ರಫೀಕ್ ಈಗಾಗಲೇ ನಾಲ್ಕು ಮದುವೆಯಾಗಿದ್ದು, ಒಂದೆರಡು ವರ್ಷ ಜೊತೆಯಾಗಿ ಜೀವನ ಮಾಡಿ ಮಕ್ಕಳನ್ನು ಕರುಣಿಸಿದ ಬಳಿಕ ವಿಚ್ಚೇದನ ನೀಡಿ ಪರಾರಿಯಾಗುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಲ್ಕನೇ ಪತ್ನಿಯಿಂದ ದೂರು ದಾಖಲು :
‘ನಿನ್ನೆ ( ನ.26) ಸಂಜೆ ಐದು ಗಂಟೆ ಸುಮಾರಿಗೆ ರಫೀಕ್ ನ ಮನೆಗೆ ನಾನು ಹೋಗಿದ್ದೇನೆ. ಹೋದಂತ ಸಂದರ್ಭದಲ್ಲಿ ಆರೋಪಿಯಾದ ರಫೀಕ್ ಅ*ವಾಚ್ಯ ಶಬ್ದಗಳಿಂದ ಬೈದು, ಹ*ಲ್ಲೆ ನಡೆಸಿದ್ದಲ್ಲದೇ ಮಗುವನ್ನು ಕೊಂ*ದು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಲ್ಲದೇ, ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆದು ಎಸೆಯಲು ಮುಂದಿಗಿದ್ದಾನೆ’ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾಳೆ. ಅಲ್ಲದೇ ತ್ರಿವಳಿ ತಲಾಖ್ ಎಂದು ಹೇಳಿ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ದಬ್ಬಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡಿರುವ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.
ಮಾಣಿ ರಫೀಕ್ ಯಾರು ? ಹಿನ್ನಲೆ ಏನು ?
ಮಾಣಿ ರಫೀಕ್ ಯಾನೆ ನಟೋರಿಯಸ್ ಕಿರಾತಕ. ಮಾಣಿಯಿಂದ ವಲಸೆ ಬಂದ ರಫೀಕ್ ವಿಟ್ಲ ಸಮೀಪದ ಮಂಗಲಪದವು ಎಂಬಲ್ಲಿ ಮನೆ ಕಟ್ಟಿಕೊಂಡಿದ್ದ. ಅಲ್ಲಿಯೂ ನೆರೆಹೊರೆಯವರ ಜೊತೆ ಗಲಾಟೆ, ಗದ್ದಲ ಎಬ್ಬಿಸಿ ಕೊನೆಗೆ ಮನೆ ಮಾರಾಟ ಮಾಡಿ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲೂ ಕೂಡಾ ಪರಿಸರದ ಶಾಂತಿಪ್ರಿಯ ನಿವಾಸಿಗಳ ಜೊತೆ ತಕರಾರು ಎಬ್ಬಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಜನ್ಮ ನೀಡಿದ ತಾಯಿಯ ಮೇಲೆಯೇ ಮನಬಂದಂತೆ ಹ*ಲ್ಲೆ ನಡೆಸಿ ಆಕೆಯ ಚಿನ್ನಾಭರಣ ಕಿತ್ತು ಕಾಲಿನಿಂದ ತುಳಿದು ಮನೆಯಿಂದ ಹೊರದಬ್ಬಿ ರಾ*ಕ್ಷಸೀಯ ಕೃ*ತ್ಯ ನಡೆಸಿದ್ದ. ಈತನ ಹ*ಲ್ಲೆ, ಕಿರುಕುಳದಿಂದ ಮನನೊಂದ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಠಾಣೆಯಲ್ಲೂ ಹೆತ್ತ ತಾಯಿಯ ಮೇಲೆ ಮನಬಂದಂತೆ ಅ*ವಾಚ್ಯ ಶಬ್ದಗಳಿಂದ ನಿಂದಿಸಿ ರಾ*ಕ್ಷಸೀ ಕೃ*ತ್ಯ ನಡೆಸಿರುವುದು ಪ್ರತಿಯೊಬ್ಬನಿಗೂ ತಿಳಿದ ವಿಚಾರವಾಗಿದೆ. ಅದಾದ ಬಳಿಕ ಅನಾರೋಗ್ಯದಿಂದ ಮೃ*ತಪಟ್ಟ ಮೊದಲ ಪತ್ನಿಯ ಹಿರಿಮಗಳ ಮೇಲೆ ಹ*ಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಆಕೆಯೂ ತನ್ನ ಅಜ್ಜಿ ಜೊತೆ ಮಂಗಲಪದವು ಬಳಿ ಬಾಡಿಗೆ ಮನೆಯಲ್ಲಿದ್ದಾರೆ।
ಇದೀಗ ನಾಲ್ಕನೇ ಪತ್ನಿಯ ಚಿನ್ನಾಭರಣವನ್ನೆಲ್ಲಾ ಕಿತ್ತುಕೊಂಡು ಬಳಿಕ ಆಕೆಯ ಮಗುವಿನ ಮೇಲೆ ಹ*ಲ್ಲೆ ನಡೆಸಿ ಹೊರದಬ್ಬಿದ್ದ ಕಿರಾತಕನ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸೆಕ್ಷನ್ BNS/-85,86,352,351(1),115(2) ರಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಮಂಗಳೂರು : ದಿ.ಉಮೇಶ್ ಕಾಜಿಲ ಸವಿನೆನಪಿಗಾಗಿ ಡಿ.1 ರಂದು ಬೃಹತ್ ರಕ್ತದಾನ ಶಿಬಿರ
Published
8 hours agoon
29/11/2024By
NEWS DESK4ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ವೀರಾಂಜನೇಯ ಶಾಖೆ ಕಾಜಿಲ, ಭಾರತೀಯ ಜನತಾ ಪಾರ್ಟಿ ತೆಂಕುಳಿಪಾಡಿ ವಾರ್ಡ್ ಸಮಿತಿ ಕಾಜಿಲ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗ ಮೋರ್ಚಾ ಮಂಗಳೂರು ಉತ್ತರ ಮಂಡಲ ಇದರ ಸಹಯೋಗದಿಂದ ರಕ್ತಕೇಂದ್ರ ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಿ.ಉಮೇಶ್ ಕಾಜಿಲ ಇವರ ಸವಿನೆನಪಿಗಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಡಿಸೆಂಬರ್ 1 ರಂದು ಭಾನುವಾರ ಕಾಜಿಲ ಮಾಧವ ಮನೆ ವಠಾರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8.30 ರಿಂದ 1 ರ ವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.
LATEST NEWS
ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಮಂಗಳೂರು: ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ; ಆರೋಪಿಯ ಬಂಧನ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ; ಕಾರಣವೇನು?
Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್ನಂತೆ ಬೈಕ್ ಹಾರಿಸಿದ ವ್ಯಕ್ತಿ
ಮೆಗಾ ಹರಾಜಿನಲ್ಲಿ ಅನ್ಸೋಲ್ಡ್; ನಿವೃತ್ತಿ ಘೋಷಿಸಿದ ಆರ್ಸಿಬಿ ಮಾಜಿ ಆಟಗಾರ
ಅಪರಾಧ ಪ್ರಕರಣಗಳಿಂದ ಸುಸ್ತಾದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ !
Trending
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL1 day ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru2 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು