Home ಉಡುಪಿ ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ವಿವಾದದ ಕಿಡಿ ಹತ್ತಿಸಿದ ಶೋಭಾ..

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ವಿವಾದದ ಕಿಡಿ ಹತ್ತಿಸಿದ ಶೋಭಾ..

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ

ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಈ ರೀತಿ ಹೇಳುವ ಮೂಲಕ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಪಾದರಾಯಣಪುರ, ಸಿದ್ಧಿಕ್ ಲೇಔಟ್ ನಲ್ಲಿ ಉದ್ದೇಶಪೂರ್ವಕವಾಗಿ ಸೋಂಕು ಹಂಚಿದರು.

ಅವರ ನಡತೆ ನೋಡಿದರೆ ಉದ್ದೇಶಪೂರ್ವಕವಾಗಿ ಕೊಟ್ಟಂತೆ ಕಾಣಿಸುತ್ತದೆ. ಉಡಾಫೆಯಿಂದ ಹಂಚಿದರೋ ನನಗೆ ಗೊತ್ತಿಲ್ಲ ಎಂದು ಸಂಸದೆ ಶೋಭಾ ವ್ಯಂಗ್ಯವಾಡಿದ್ದಾರೆ.

ಇನ್ನು ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ.

ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ ನಿಮಗೆ ಕ್ಷಮೆ ಇಲ್ಲ. ಕುಮ್ಮಕ್ಕು ಕೊಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆ ಕ್ರಮ ಆಗಲಿ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

RECENT NEWS

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ… ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು...

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!!

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈಬ್ ಅವರಿಗೂ ಕೋವಿಡ್ 19 ಸೋಂಕು...

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!!

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!! ಮಂಗಳೂರು: ಉಳ್ಳಾಲದಲ್ಲಿ ಬುಧವಾರ ನಡೆಸಲಾದ ರ್ಯಾಂಡಮ್ ಟೆಸ್ಟ್ ವರದಿ ನಿನ್ನೆ (ಜುಲೈ 3) ಬಂದಿದ್ದು ಮತ್ತೆ 28 ಮಂದಿಯಲ್ಲಿ...

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!!

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!! ಉಡುಪಿ: ಉಡುಪಿಯಲ್ಲಿ ಇಂದು 14 ಕೊರೊನಾ ಪಾಸಿಟಿವ್ ವರದಿಯಾಗಿದೆ. ಮಹಾರಾಷ್ಟ್ರ4, ಕೇರಳ ರಾಜ್ಯದ 1 ಕೇಸ್ ಪತ್ತೆಯಾಗಿದೆ. ಬೆಂಗಳೂರಿಂದ ಬಂದ ನಾಲ್ವರಲ್ಲಿ...
error: Content is protected !!