Connect with us

    LATEST NEWS

    ಸ್ವಾಮಿ ನಿತ್ಯಾನಂದನ ಕೈಲಾಸದಲ್ಲಿ ಸ್ಥಾಪನೆಯಾಗಿದೆ ಹಿಂದು ರಿಸರ್ವ್​ ಬ್ಯಾಂಕ್​

    Published

    on

    ಬೆಂಗಳೂರು : ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿತ್ಯಾನಂದ ಸ್ವಾಮೀಜಿ, ಈಗ ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್‌’ ಜತಗೆ ತನ್ನದೇ ಭಾವಚಿತ್ರವಿರುವ ಕರೆನ್ಸಿಯನ್ನು ಸಹ ಇನ್ನು 4 ದಿನದೊಳಗಾಗಿ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡಿದ್ದಾನೆ.


    ಈ ಬಗ್ಗೆ ಸುಮಾರು 2.43 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿರುವ ನಿತ್ಯಾನಂದ, ಗಣೇಶ ಹಬ್ಬದ ಅಂಗವಾಗಿ ನೂತನ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗುವುದು. ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಎಂಬ ಹೆಸರಿನೊಂದಿಗೆ ಇದು ಆರ್ಥಿಕತೆಗೆ ಸಹಾಯಕವಾಗಲಿದೆ ಎಂದಿದ್ದಾನೆ.


    ಇದಕ್ಕಾಗಿ 300 ಪುಟಗಳ ಆರ್ಥಿಕತೆಯ ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಆಂತರಿಕ ಹಾಗೂ ಬಾಹ್ಯ ಆಂತರಿಕತೆಯ ಎಲ್ಲವೂ ಕಾನೂನು ಬದ್ದವಾಗಿಯೇ ಇದೆ. ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ಆಫ್ ಕೈಲಾಶ್ ಕಾರ್ಯನಿರ್ವಹಿಸಲಿದೆ ಎಂದಿದ್ದಾನೆ. ಚೌತಿಯಂದು ನೋಟು ಬಿಡುಗಡೆ.

    ಸ್ವಾಮಿ ನಿತ್ಯಾನಂದ ಬಿಡದಿಯಿಂದ ಪಲಾಯನ ಮಾಡಿ, ಅದ್ಯಾವುದೋ ದ್ವೀಪದಲ್ಲಿ ‘ಕೈಲಾಸ’ ದೇಶ ನಿರ್ಮಿಸಿಕೊಂಡು, ಸಕಲ ವೈಭೋಗಗಳೊಂದಿಗೆ ಬದುಕುತ್ತಿದ್ದಾರೆಂದು ಹೇಳಲಾಗಿದೆ. ಹೀಗಿರುವಾಗ ಸ್ವಾಮಿ ನಿತ್ಯಾನಂದನ ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

    ಜಗತ್ತಿನಾದ್ಯಂತ ಇರುವ ಹಲವು ದೇಶಗಳಲ್ಲಿರುವ ಹಿಂದುಗಳು, ತಮ್ಮ ದೇಶದಲ್ಲಿ ಧರ್ಮಾಚರಣೆ ಮಾಡಲಾಗದೆ ಬಂದು ಈ ನಿತ್ಯಾನಂದನ ಕೈಲಾಸ ಸೇರಿಕೊಂಡಿದ್ದಾರೆ ಎಂದೂ ಕೆಲವು ವೆಬ್​ಸೈಟ್​ಗಳು ವರದಿ ಮಾಡಿವೆ.

    Click to comment

    Leave a Reply

    Your email address will not be published. Required fields are marked *

    FILM

    ಕೋಟಿ ಬೆಲೆಯ ಕಾರಿದ್ರೂ ಆಟೋದಲ್ಲಿ ಆಸ್ಪತ್ರೆಗೆ ಹೋದ್ರಾ ಸೈಫ್? ಈಗ ಹೇಗಿದ್ದಾರೆ ನಟ?

    Published

    on

    ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ನಡೆದ ಚೂ*ರಿ ಇ*ರಿತ ಪ್ರಕರಣ ಇಡೀ ಬಾಲಿವುಡನ್ನೇ ಬೆಚ್ಚಿ ಬೀಳಿಸಿದೆ. ಆರು ಕಡೆಗಳಿಗೆ  ಚೂ*ರಿ ಇರಿ*ತಕ್ಕೊಳಗಾಗಿ ತೀ*ವ್ರ ರ*ಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ  ಪ್ರಾ*ಣಾಪಾಯದಿಂದ ಅವರು ಪಾರಾಗಿದ್ದಾರೆ.  ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ.

    ಆಟೋದಲ್ಲಿ ಆಸ್ಪತ್ರೆಗೆ ಹೋದ್ರಾ ಸೈಫ್?

    ಸದ್ಯ ಈ ಪ್ರಕರಣ ಹಲವು ಅನುಮಾನ ಹುಟ್ಟು ಹಾಕಿದೆ. ಏನೇನೋ  ವದಂತಿಗಳು ಹರಿದಾಡುತ್ತಿವೆ.  ಈ ನಡುವೆ ಗಮನಕ್ಕೆ ಬಂದ ಮತ್ತೊಂದು ವಿಚಾರವಂದ್ರೆ ಅದು ಸೈಫ್ ಆಸ್ಪತ್ರೆ ಸೇರಿದ್ದು ಹೇಗೆ ಎಂಬುದು.

    ಹೇಳಿ ಕೇಳಿ ಸಿನಿಮಾ ನಟ. ಅದರಲ್ಲೂ ಶ್ರೀಮಂತ ಮನೆತನದ ನಟ. ಭವ್ಯವಾದ ಮನೆ, ಆಳು ಕಾಳು ಇದ್ದಾರೆ.  ಸಿನಿಮಾ ಮಂದಿಗೆ ಕಾರಿನ ಕ್ರೇಜ್ ಇದ್ದೇ ಇದೆ. ಸೈಫ್ ಬಳಿಯೂ ಕೋಟಿಗಟ್ಟಲೆ ಬೆಲೆ ಬಾಳುವ ಕಾರುಗಳಿವೆ. ಆದ್ರೆ, ಹ*ಲ್ಲೆಗೊಳಗಾದ ವೇಳೆ ಅವರು ಆಟೋದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.

    ಸದ್ಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆಟೋ ಹಾಗೂ ಅದರ ಪಕ್ಕದಲ್ಲಿ ಕರೀನಾ ಕಪೂರ್ ನಿಂತಿರೋದನ್ನು ಕಾಣಬಹುದಾಗಿದೆ.  ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ದಾ*ಳಿಗೊಳಗಾದಾಗ ಕಾರು ರೆಡಿ ಇರಲಿಲ್ಲ. ತೀವ್ರ ರ*ಕ್ತಸ್ರಾವದಿಂದ ಪರದಾಡುತ್ತಿದ್ದಾಗ ಆಟೋ ಹಿಡಿದು ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.

    ಸೈಫ್ ಹಿರಿಯ ಪುತ್ರ ಇಬ್ರಾಹಿಂ  ಸೈಫ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದು, ಕಾರಿನಲ್ಲಿ ಹೋದ್ರೆ ಹೆಚ್ಚು ಸಮಯವಾಗುತ್ತೆ ಎಂಬ ಕಾರಣಕ್ಕೆ ಈ ನಿರ್ಧಾರ ತಳೆಯಲಾಗಿತ್ತು ಎಂದೂ ಹೇಳಲಾಗಿದೆ.

    ಸೈಫ್ ಔಟ್ ಆಫ್ ಡೇಂ*ಜರ್ :

    ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಚೇತರಿಸಿಕೊಳ್ಳುತ್ತಿದ್ದಾರೆ. ಖಾನ್ ಅವರ ದೇಹಕ್ಕೆ 6 ಬಾರಿ ಇರಿಯಲಾಗಿದೆ. ಎರಡು ಕಡೆ ಆಳವಾದ ಗಾ*ಯಗಳಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಜೀ*ವಕ್ಕೆ ಯಾವುದೇ ಅ*ಪಾಯವಿಲ್ಲ.

    ಇದನ್ನೂ ಓದಿ : ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂ*ಡಿನ ದಾ*ಳಿ; 93 ಲಕ್ಷ ದರೋಡೆ

    ಬೆನ್ನು ಮೂಳೆಯಿಂದ ಚಾ*ಕುವಿನ ತುದಿಯನ್ನು ಹೊರತೆಗೆಯಲಾಗಿದೆ. ಖಾನ್ ಆರೋಗ್ಯ ಸ್ಥಿರವಾಗಿದೆ. ನಾಳೆ ಬೆಳಿಗ್ಗೆ ಐಸಿಯುವಿನಿಂದ ಹೊರತರುತ್ತೇವೆ ಎಂದು ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಮಾಹಿತಿ ನೀಡಿದ್ದಾರೆ.

     

     

     

    Continue Reading

    LATEST NEWS

    2 ದಿನದ ಕಂದಮ್ಮನನ್ನು ತೋಟದಲ್ಲಿ ಬಿಟ್ಟು ಹೋದ ಹೆತ್ತಮ್ಮ

    Published

    on

    ಮಂಗಳೂರು/ಚಿಕ್ಕಮಗಳೂರು: ಮಗು ಹುಟ್ಟಿದ ಎರಡನೇ ದಿನವೇ ಹೆತ್ತ ತಾಯಿ ಕಾಫಿ ತೋಟದಲ್ಲಿ ಕಂದಮ್ಮನನ್ನು ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.


    ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಚಂದ್ರಮ್ಮ ಎಂಬುವವರು ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಪಾಪುವನ್ನು ಬಿಟ್ಟು ಹೋಗಿದ್ದು, ಇಂದು (ಜ.16) ಬೆಳಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಸ್ಥಳೀಯ ಮಹಿಳೆಯೊಬ್ಬಳಿಗೆ ಮಗು ಅಳುವ ಸದ್ದು ಕೇಳಿಸಿದೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತೋಟಕ್ಕೆ ಬಂದು ನೋಡಲು ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ.

     

    ಇದನ್ನೂ ಓದಿ : ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?

     

    ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.

    Continue Reading

    LATEST NEWS

    ಬಾಂಬೆ ಐಐಟಿಯ ಅಭಯ್ ಸಿಂಗ್ ನಾಗಸಾಧು ಆಗಿದ್ದು ಹೇಗೆ ?

    Published

    on

    ಮಂಗಳೂರು/ಪ್ರಯಾಗ್‌ರಾಜ್ : ಮಕರ ಸಂಕ್ರಾಂತಿ ಹಬ್ಬದ ದಿನದಂದು ಮಹಾಕುಂಭ ಮೇಳದಲ್ಲಿ ಕೋಟಿಗಟ್ಟಲೆ ಭಾರತೀಯರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

    ಈಗಗಾಲೇ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ 40 ಕೋಟಿ ಜನರು ಭಾಗವಹಿಸಿದರೂ ಪ್ರಮುಖ ಆಕರ್ಷಣೆ ಮಾತ್ರ ನಾಗಸಾಧುಗಳು. ಆಧ್ಯತ್ಮಿಕತೆಯ ಒಲವನ್ನು ಹೊಂದಿರುವ ಹಲವಾರು ನಾಗಸಾಧುಗಳು ಈ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಇಂಜಿನಿಯರ್ ಕೆಲಸಕ್ಕೆ ಗುಡ್‌ಬೈ ಹೇಳಿದ ಬಾಬಾ ಕೂಡ ಒಬ್ಬರಾಗಿದ್ದಾರೆ.

    ಐಐಟಿ ಬಾಂಬೆಯಲ್ಲಿ ಕಲಿತ ಬಾಬಾ ಅಭಯ್ ಸಿಂಗ್ ಅವರು ಮೂಲತ: ಹರಿಯಾಣದವರು. ವೈಜ್ಞಾನಿಕ ಅನ್ವೇಷಣೆಗಳನ್ನು ತೊರೆದು ಆಧ್ಯಾತ್ಮಿಕದತ್ತ ವಾಲಿದ್ದಾರೆ. ಅಂದರೆ ವಿಜ್ಞಾನದಿಂದ ಆಧ್ಯಾತ್ಮಿಕತೆಗೆ ವಾಲಿದ್ದಾರೆ. ಇವರು ಏರೋಸ್ಪೇಸ್ ಇಂಜಿನಿಯರ್ ಮುಖ್ಯಸ್ಥರಾಗಿದ್ದರು. ಇವರನ್ನು ಇಂಜಿನಿಯರ್ ಬಾಬಾ ಎಂತಲೂ ಕರೆಯುತ್ತಾರೆ. ಪ್ರತಿಷ್ಠಿತ ಕಂಪನಿಯ ಉದ್ಯೋಗವನ್ನು ತೊರೆದು ಆಧ್ಯಾತ್ಮಿಕತೆ ಕಡೆಗೆ ಒಲವು ಹರಿಸಿ ಈಗ ಬಾಬಾ ಆಗಿದ್ದಾರೆ.

    ಇದನ್ನೂ ಓದಿ: ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

    ಅಭಯ್ ಸಿಂಗ್ ಅವರು, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಬಾಂಬೆ (ಐಐಟಿ ಬಾಂಬೆ) ಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಇರುವಾಗಲೇ ಕ್ಯಾಂಪಸ್‌ನಲ್ಲಿ ಆಯ್ಕೆ ಆಗಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಕಾರ್ಪೊರೇಟ್ ಜಗತ್ತಿನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.

    ಮಾಸ್ಟರ್ ಇನ್ ಡಿಸೈನ್ (MDes) ಅಧ್ಯಯನ ಮಾಡಿದರು ಮತ್ತು ಛಾಯಾಗ್ರಾಹಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅದರಲ್ಲೂ ಯಶಸ್ಸು ಕಾಣದೇ ಕೋಚಿಂಗ್ ಸೆಂಟರ್ ಓಪನ್ ಮಾಡಿ ಭೌತಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಕೊನೆಗೆ ಇಂಜಿನಿಯರಿಂಗ್, ಫೋಟೋಗ್ರಾಫಿ, ಕೋಚಿಂಗ್ ಎಲ್ಲವನ್ನು ತ್ಯಜಿಸಿ ಆಧ್ಯಾತ್ಮಿಕತೆಯನ್ನು ಆಯ್ಕೆ ಮಾಡಿಕೊಂಡರು. ಆಧ್ಯಾತ್ಮಿಕತೆ ಸ್ವೀಕರಿಸಿದ ಬಳಿಕ ಅಭಯ್ ಅವರು ಶಿವನ ಪರಮ ಭಕ್ತರಾಗಿದ್ದಾರೆ.

    ಅಭಯ್ ಸಿಂಗ್ ಬಾಬಾ ಆಗಿದ್ದು ಹೇಗೆ?
    ಜೀವನದ ನಿಜವಾದ ಅರ್ಥವನ್ನು ಕಂಡುಹಿಡಿಯಲು ಅವರು ಸಾಕ್ರೆಟೀಸ್, ಪ್ಲೇಟೋ ಮತ್ತು ಆಧುನಿಕ ಪರಿಕಲ್ಪನೆಗಳ ಪುಸ್ತಕಗಳನ್ನು ಓದಲು ಶುರು ಮಾಡಿದರು. ಈ ಬಗ್ಗೆ ಅಭಯ್ ಸಿಂಗ್, ‘ಇದು ನಿಜವಾದ ಜ್ಙಾನ ಎಂದು ನಾನು ಈಗ ಅರ್ಥಮಾಡಿಕೊಂಡಿದ್ದೇನೆ. ನೀವು ಮನಸ್ಸು ಅಥವಾ ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ, ನೀವು ಆಧ್ಯಾತ್ಮಿಕತೆಯ ಮೂಲಕ ಮಾಡಬಹುದು. ಯಾಕೆಂದರೆ ಈ ಹಂತವು ಅತ್ಯುತ್ತಮ ಹಂತವಾಗಿದೆ’ ಎಂದು ಹೇಳಿದ್ದಾರೆ.

     

    Continue Reading

    LATEST NEWS

    Trending