Saturday, May 21, 2022

ಮುಲ್ಕಿ: ಅನುಮಾನಾಸ್ಪದವಾಗಿ ಆಟೋ ಚಾಲಕ ಸಾವು

ಕಿನ್ನಿಗೋಳಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗೋಳಿಜೋರಾ ನೀರಪಲ್ಕೆ ನಿವಾಸಿ ಆಟೋ ಚಾಲಕ ಪ್ರಶಾಂತ್ ಶೆಟ್ಟಿಗಾರ (38) ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.


ಮೃತ ಪ್ರಶಾಂತ್ ಶೆಟ್ಟಿಗಾರ್ ಕಳೆದ ನಾಲ್ಕು ವರ್ಷಗಳಿಂದ ಕಿನ್ನಿಗೋಳಿಯಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದು, ಭಾನುವಾರ ರಾತ್ರಿ 11 ಗಂಟೆಗೆ ತನ್ನ ಮನೆಗೆ ಬಂದು ಊಟ ಮಾಡಿ ಮಲಗಿದ್ದರು.

ಆದರೆ ಬೆಳಗ್ಗೆ ಸುಮಾರು ಎಂಟು ಗಂಟೆಗೆ ಮಗ ಇನ್ನೂ ಕೋಣೆಯಿಂದ ಹೊರ ಬಾರದಿರುವುದನ್ನು ಗಮನಿಸಿ ತಾಯಿ ಸಂಶಯದಿಂದ ಬಂದು ನೋಡಿದಾಗ ಮಗ ಮಂಚದ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ.

ಮಂಚದ ಮೇಲೆ ಮಧ್ಯದ ಬಾಟಲಿಗಳು ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮುಲ್ಕಿ: ಮರಕ್ಕೆ ನೇಣು ಬಿಗಿದು ಯುವಕ ಆತ್ಮಹತ್ಯೆ

ಮುಲ್ಕಿ: ಇಲ್ಲಿನ ಬಳ್ಕುಂಜೆಯ ಕೋಟ್ನಾಯಗುತ್ತು ಗುಡ್ಡೆಯಲ್ಲಿ ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ಯುವಕನನ್ನು ಕಾರ್ಕಳದ ಕಲ್ಯಾ ನಿವಾಸಿ ಮೂಡಬಿದ್ರೆ ಒಂಟಿಕಟ್ಟೆ ಬಳಿ ವಾಸ್ತವ್ಯವಿದ್ದ ರಾಕೇಶ್ ಪೂಜಾರಿ (26) ಎಂದು ಗುರುತಿಸಲಾಗಿದೆ. ಮೃತ...

ಬಂಟ್ವಾಳ: SVS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ...

‘ಟಿಪ್ಪು ಸುಲ್ತಾನ್ ಪ್ರತಾಪನಂತೆ ಬೆತ್ತಲೆ ಲೇಖನಿ ಸಿಂಹವಲ್ಲ’- ಕೆ.ಅಶ್ರಫ್

ಮಂಗಳೂರು: ಬೆತ್ತಲೆ ಜಗತ್ತಿನಲ್ಲಿ ಸುಳ್ಳುಗಳನ್ನು ಪೋಣಿಸಿ ಬರೆದು ಇಸ್ಲಾಮೂ ಫೋಬಿಯಾದ ಮೂಲಕ ಈ ರಾಜ್ಯದ ಹಿಂದುಳಿದ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದ ದೃಷ್ಟಿಯಲ್ಲಿ ಈ ದೇಶದ ಮುಸ್ಲಿಮರ ಬಗ್ಗೆ ವೈರತ್ವವನ್ನು ಸೃಷ್ಟಿಸಿ,ಕೇಶವ...