Wednesday, July 28, 2021

ನಟ ಸುಶಾಂತ್ ಆತ್ಮಹತ್ಯೆ ಕೇಸ್ ನಲ್ಲಿ ವಿಚಿತ್ರ ತಿರುವು: 8 ಮಂದಿಯ ಮೇಲೆ ಕೇಸ್ ದಾಖಲು..!!

Array

ನಟ ಸುಶಾಂತ್ ಆತ್ಮಹತ್ಯೆ ಕೇಸ್ ನಲ್ಲಿ ವಿಚಿತ್ರ ತಿರುವು: 8 ಮಂದಿಯ ಮೇಲೆ ಕೇಸ್ ದಾಖಲು..!!

ಮುಂಬೈ: ಬಾಲಿವುಡ್ ನ ಹ್ಯಾಂಡ್ಸಮ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ.

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ್ದ ನಟ ಒಮ್ಮಿಂದೊಮ್ಮೆಲೆ ಆತ್ಮಹತ್ಯೆಗೆ ಶರಣಾದಾಗ ಇಡೀ ಬಿಟೌನ್ ಸ್ತಬ್ದವಾಗಿತ್ತು.

ಇದೀಗ ಈ ನಟನ ಆತ್ಮಹತ್ಯೆ ವಿಚಾರದಲ್ಲಿ ಬಾಲಿವುಡ್ ನ ಕೆಲ ಸ್ಟಾರ್ ಗಳು ಹಾಗೂ ನಿರ್ಮಾಪಕರ ವಿರುದ್ಧ ದೂರು ಕೇಳಿ ಬರುತ್ತಿದೆ.

ಅಲ್ಲದೇ ಇದೀಗ ಬಿಟೌನ್ ನ ಬರೋಬ್ಬರಿ ಎಂಟು ಮಂದಿಯ ಮಂದಿ ಮೇಲೆ ಕೇಸ್​ ದಾಖಲಾಗಿದೆ.

ವಕೀಲ ಸುಧೀರ್​ ಕುಮಾರ್ ಓಜಾ, ಪ್ರಕರಣ ದಾಖಲಿಸಿದ್ದು, ಅದರಲ್ಲಿ ಸಲ್ಮಾನ್​ ಖಾನ್​, ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ, ಏಕ್ತಾ ಕಪೂರ್​ ಸೇರಿ ಇನ್ನೂ ಹಲವರ ಹೆಸರುಗಳಿವೆ.

ನಟ ಕಮಲ್​ ಆರ್​ ಖಾನ್​ ಮಂಗಳವಾರವಷ್ಟೇ ಬಾಲಿವುಡ್ ಆಳುತ್ತಿರುವ ಕೆಲ ನಿರ್ಮಾಣ ಕಂಪನಿಗಳ ಬಗ್ಗೆ ಟ್ವಿಟ್​ ಮಾಡಿದ್ದರು.

ಅದರಲ್ಲಿ ಸಲ್ಮಾನ್​ ಖಾನ್​ ಫಿಲಂಸ್​, ಕರಣ್​ ಜೋಹರ್​ ಒಡೆತನದ ಧರ್ಮ ಪ್ರೊಡಕ್ಷನ್ಸ್ ಮತ್ತು ಯಶ್​ ರಾಜ್​ ಫಿಲಂಸ್​ ಕಂಪನಿಗಳು ಸುಶಾಂತ್​ ಸಿಂಗ್​ ಸಿನಿಮಾ ಬ್ಯಾನ್​ ಮಾಡಿದ್ದವು.

ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಲಿವುಡ್​ನಲ್ಲಿ ಸುಶಾಂತ್​ಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಈ ರೀತಿ ಮಾಡಿದ್ದರಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

‘ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...