FILM
‘ಸೂರ್ಯವಂಶ’ ಹೀರೋಯಿನ್ ‘ಬಿಗ್‌ಬಾಸ್’ ಎಂಟ್ರಿ
ಮುಂಬೈ: ಕನ್ನಡಿಗರ ನೆಚ್ಚಿನ ಸಿನೆಮಾ ಸೂರ್ಯವಂಶ ಸಿನೆಮಾದಲ್ಲಿ ವಿಷ್ಣುವರ್ಧನ್ ಜೋಡಿಯಾಗಿದ್ದ ನಟಿ ಇಶಾ ಕೊಪಿಕರ್ ಇದೀಗ ಬಿಗ್‌ಬಾಸ್ ಎಂಟ್ರಿಕೊಡಲಿದ್ದಾರೆ. ಹೌದು, ಕನ್ನಡ, ತೆಲುಗು, ಹಿಂದಿ ಹೀಗೆ ಬಿಗ್‌ಬಾಸ್ ಶೋನ ಅಪ್ಡೇಟ್‌ಗಳು ಬರುತ್ತಲೇ ಇವೆ.
ಸದ್ಯ ಈ ಬಾರಿಯ ಬಿಗ್‌ಬಾಸ್‌ಗೆ ಸಾಕಷ್ಟು ನಟ ನಟಿಯರ ಹೆಸರುಗಳು ಕೇಳಿ ಬರುತ್ತಿವೆ. ಇದೇ ಸೆಪ್ಟಂಬರ್ ತಿಂಗಳಿನಿಂದ ತೆಲುಗು ಬಿಗ್‌ಬಾಸ್ ಸೀಸನ್-8 ಶುರುವಾಗಲಿದೆ ಎಂಬ ಮಾಹಿತಿ ಕೂಡಾ ಹೊರಬಿದ್ದಿದೆ.
ಜ್ಯೋತಿ ರೈಗೆ ‘ಬಿಗ್ ಬಾಸ್ ಕನ್ನಡ 11’ ಆಫರ್; ನೇರವಾಗಿ ನಿರ್ಧಾರ ತಿಳಿಸಿದ ನಟಿ
ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ನಲ್ಲಿ ಇದೀಗ ಕುತೂಹಲ ಹೆಚ್ಚಾಗಿದೆ. ಬಿಗ್‌ಬಾಸ್ ಸೀಸನ್ 18 ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿಯಾಗಲಿದ್ದಾರೆ ಎಂಬುದು ನೋಡಬೇಕಿದೆ. ಈ ಬಾರಿಯ ಬಿಗ್‌ಬಾಸ್ ಒಟಿಟಿ ಸೀಸನ್-3 ರ ಬಗ್ಗೆ ವೀಕ್ಷಕರು ಬೇಸರ ಹೊರಹಾಕಿದ್ದರು. ಸದ್ಯ ಈ ಬಾರಿಯ ಬಿಗ್‌ಬಾಸ್ 18 ರಿಯಾಲಿಟಿ ಶೋ ಅ.5ರಂದು ಆರಂಭವಾಗಲಿದೆ. ಇದೀಗ ಈ ಸೀಸನ್‌ನಲ್ಲಿ ನಟಿ ಇಶಾ ಕೊಪ್ಪಿಕರ್ ರವರು ಎಂಟ್ರಿ ಕೊಡಲಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಖುದ್ದು ಇಶಾ ಕೊಪ್ಪಿಕರ್ ರವರು ನಡೆದ ಸಂದರ್ಶನವೊಂದರಲ್ಲಿ ತಾನು ಬಿಗ್ ಬಾಸ್ ಹೋಗುವುದಾಗಿ ಹೇಳಿದ್ದಾರೆ. ಇನ್ನು ಈ ವಿಚಾರ ತಿಳಿದ ಇಶಾ ಕೊಪ್ಪಿಕರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ಬಿಗ್ ಬಾಸ್ ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
FILM
ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ.
ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.
FILM
ಸಲ್ಮಾನ್ ಖಾನ್ ಧರಿಸಿದ ವಾಚಿನಲ್ಲಿ 714 ವಜ್ರಗಳು; ವಾಚ್ ಮಾರಿದ್ರೆ ಬರುತ್ತೆ 5 ರೋಲ್ಸ್ ರಾಯ್ಸ್ ಕಾರು
ಸಲ್ಮಾನ್ ಖಾನ್ ಅವರು ಯಾವಾಗಲೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಜಾಕೋಬ್ ಅರಾಬೋ ಕಂಪನಿಯ ವಾಚ್ ಧರಿಸಿದ್ದರು. ವಾಚ್ನ ಧರಿಸಿ ಅವರು ಪೋಸ್ ಕೊಟ್ಟಿದ್ದಾರೆ. ಇದು ಬಿಲಿಯನೇರ್ III ವಾಚ್ ಅನ್ನೋದು ವಿಶೇಷ. ಇದರಲ್ಲಿ ನೂರಾರು ಡೈಮಂಡ್ಸ್ ಇದೆ. ಜಾಕೋಬ್ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
ಜಾಕೋಬ್ ಅವರು ಸಲ್ಲುಗೆ ವಾಚ್ ತೊಡಿಸುತ್ತಿರುವ ಫೋಟೋ ವೈರಲ್ ಆಗಿದೆ. ನಂತರ ಸಲ್ಲು ಅವರು ವಾಚ್ನ ಕ್ಯಾಮೆರಾಗೆ ಶೋ ಮಾಡಿದ್ದಾರೆ. ಯಾರಿಗೂ ಈ ವಾಚ್ನ ಧರಿಸೋಕೆ ನಾನು ಅವಕಾಶ ನೀಡುವುದಿಲ್ಲ ಎಂದಿರುವ ಅವರು ಸಲ್ಲು ಮೇಲಿನ ವಿಶೇಷ ಗೌರವದಿಂದಾಗಿ ಅವರು ವಿಶೇಷವಾಗಿ ಈ ಅವಕಾಶ ನೀಡಿದ್ದಾರೆ.
ಈ ವಾಚ್ನಲ್ಲಿ 152 ವೈಟ್ ಡೈಮಂಡ್ಸ್ ಇದೆ. ಪ್ರತಿ ಸೆಗ್ಮೆಂಟ್ನಲ್ಲಿ 76 ಡೈಮಂಡ್ಸ್ ಇದೆ. ಬ್ರೆಸ್ಲೆಟ್ನಲ್ಲಿ 504 ಡೈಮಂಡ್ಗಳು ಇವೆ. ಇದು ಸೇರಿದಂತೆ ವಾಚ್ನಲ್ಲಿ 714 ಡೈಮಂಡ್ಸ್ ಇವೆ. ಈ ವಾಚ್ನ ಬೆಲೆ 41.5 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಾಚ್ ಮಾರಿದರೆ ಏನಿಲ್ಲವೆಂದರೂ 5 ರೋಲ್ಸ್ ರಾಯ್ಸ್ ಬರುತ್ತದೆ ಎಂದು ಅನೇಕರು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರು ಈ ವಾಚ್ನ ಖರೀದಿ ಮಾಡಿಲ್ಲ. ಅದನ್ನು ಧರಿಸಿ ಪೋಸ್ ಕೊಟ್ಟಿದ್ದಾರಷ್ಟೇ. ಹಾಗಂತ ಸಲ್ಲು ಮನಸ್ಸು ಮಾಡಿದರೆ ಇಷ್ಟು ದುಬಾರಿ ವಾಚ್ನ ಖರೀದಿಸೋದು ಅವರಿಗೆ ಎಷ್ಟು ಹೊತ್ತಿನ ಕೆಲಸವೂ ಅಲ್ಲ. ಸಲ್ಮಾನ್ ಖಾನ್ ಸದ್ಯ ‘ಸಿಖಂದರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಅಟ್ಲಿ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.
FILM
ನಟ ವರುಣ್ ವಿರುದ್ದ ಬ್ಲಾಕ್ ಮೇಲ್ ಆರೋಪ ಸುಳ್ಳು ಸುದ್ದಿ – ವರ್ಷಾ ಕಾವೇರಿ
ಬೆಂಗಳೂರು: ಕಿರುತೆರೆ ನಟ, ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾದ ಸುದ್ದಿ ಹರಿದಾಡಿತ್ತು. ಬ್ಲಾಕ್ ಮೇಲ್ ಆರೋಪ ಕೇಳಿಬಂದಿತ್ತು. ಆದರೆ ಈಗ ವರ್ಷ ಕಾವೇರಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಎಲ್ಲಕಡೆ ವೈರಲ್ ಆಗಿರುವುದು ಸುಳ್ಳು ಸುದ್ದಿ. ನಾನು ಇನ್ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ರೀಲ್ಸ್ಗಳನ್ನು ತೆಗೆಯುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಮೂರು ದಿನಗಳ ಕಾಲ ಕಾಯಿರಿ. ನಾನು ಕ್ಲ್ಯಾರಿಟಿಯೊಂದಿಗೆ ಬರುತ್ತೇನೆ ಎಂದು ಹೇಳಿದ್ದಾರೆ ವರ್ಷಾ ಕಾವೇರಿ ಹೇಳಿಕೆ ನೀಡಿದ್ದಾರೆ.
ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರು ಸೋಷಿಯಲ್ ಮೀಡಿಯಾದ ಫೇಮಸ್ ಜೋಡಿಯಾಗಿದ್ದರು. ನಂತರ ಕಾರಣಾಂತರಗಳಿಂದ ಬ್ರೇಕ್‌ಅಪ್ ಆಗಿತ್ತು. ಬಸವೇಶ್ವರನಗರ ಸೆನ್ ಪೊಲೀಸ್ ಠಾಣೆಯಲ್ಲಿ ಸದ್ಯ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಸುದ್ದಿಯಾಗಿತ್ತು. ವರ್ಷಾ ಕಾವೇರಿಯಿಂದ ದೂರು ದಾಖಲಾಗಿರುವುದು ತಿಳಿದು ಬಂದಿತ್ತು. ಆದರೆ ಇದು ಸುಳ್ಳು ಮಾಹಿತಿ ಬ್ಲಾಕ್‌ಮೇಲ್ ಆರೋಪ ಅಲ್ಲ ಎಂದಿದ್ದಾರೆ ವರ್ಷಾ.
- LATEST NEWS3 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM2 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- DAKSHINA KANNADA4 days ago
WATCH : ಕದ್ರಿ ಪಾರ್ಕ್ ನ ರಸ್ತೆಯಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ
- LATEST NEWS1 day ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
Pingback: ಕನ್ನಡದ ಇನ್ನೋರ್ವ ನಟಿ ಬಾಲಿವುಡ್‌ಗೆ ಎಂಟ್ರಿ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್