ಬೆಂಗಳೂರು: ನಟ-ನಿರ್ದೇಶಕ ಸೂರ್ಯೋದಯ ಅವರ ಮಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಸೂರ್ಯೋದಯ ಪುತ್ರ ಮಯೂರ್ (20) ಮೃತ ಯುವಕ.
ಕಳೆದ ರಾತ್ರಿ ಮಯೂರ್ ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದಾಗ, ಟ್ಯಾಂಕರ್ ಗಾಡಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರ್ಯೋದಯ ಪೆರಂಪಲ್ಲಿ ಅವರು ದೇಯಿ ಬೈದೆತಿ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದಾರೆ.