ಕೇರಳ : ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಟ ಸುರೇಶ್ ಗೋಪಿಗೆ ಬಿಜೆಪಿ ಸಚಿವ ಸ್ಥಾನ ನೀಡಿದೆ. ನಿನ್ನೆ ಸುರೇಶ್ ಗೋಪಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೇರಳದಿಂದ ಬಿಜೆಪಿಯ ಮೊದಲ ಸಚಿವ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ರೆ ಸುರೇಶ್ ಗೋಪಿ ಸಚಿವ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಸಾಕಷ್ಟು ಅನುಮಾನಗಳು ಕಾಡಿದೆ.
ಸಚಿವ ಸ್ಥಾನದ ಬಗ್ಗೆ ದೆಹಲಿಗೆ ತೆರಳುವ ಮೊದಲು ಕೇರಳದ ಮಾದ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸುರೇಶ್ ಗೋಪಿ ನಾನು ಸಚಿವ ಸ್ಥಾನ ಸ್ವೀಕರಿಸುವುದಿಲ್ಲ ಎಂದು ಹೇಳಿದ್ರು. ಆದ್ರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಸುರೇಶ್ ಗೋಪಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಆದ್ರೆ ಇದೀಗ ಸುರೇಶ್ ಗೋಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಹಾಗಂತ ಸುರೇಶ್ ಗೋಪಿ ಸಚಿವ ಸ್ಥಾನ ತಿರಸ್ಕಾರ ಮಾಡ್ತಾ ಇರೋದು ಅವರ ಸಿನೆಮಾಗಳಿಗಾಗಿ ಎಂದು ಮಲೆಯಾಳಂ ಚಾನೆಲ್‌ಗಳು ವರದಿ ಮಾಡಿವೆ.
ಮಲೆಯಾಳಂ ಚಿತ್ರರಂಗದಲ್ಲಿ ಸುರೇಶ್ ಗೋಪಿ ಬಹುಬೇಡಿಕೆಯ ನಟರಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೇಂದ್ರ ಸಚಿವ ಸಂಪುಟ ಸೇರಿದ್ರೆ ಸುರೇಶ್ ಗೊಪಿ ಚಿತ್ರರಂಗದಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸುರೇಶ್ ಗೋಪಿ ಇನ್ನು ಗೊಂದಲದಲ್ಲಿ ಇರುವುದು ಸ್ಪಷ್ಟವಾಗಿದೆ.
ಕೇರಳದ ಮಾಧ್ಯಮಗಳಿಗೆ ‘ರಾಜೀನಾಮೆ’ ನೀಡುವುದಾಗಿ ಹೇಳಿದ್ದ ಸುರೇಶ್ ಗೋಪಿ ಬಳಿಕ ಇಲ್ಲ ಎಂದಿದ್ದರು. ಬಳಿಕ ವರಿಷ್ಠರು ನಟನೆಗೆ ಅನುಮತಿ ನೀಡಿದ್ರೆ ಸಚಿವ ಸ್ಥಾನದಲ್ಲಿ ಮುಂದುವರೆಯುವುದಾಗಿ ಹೇಳಿದ್ದರು. ಆದ್ರೆ ಸದ್ಯದ ಮಟ್ಟಿಗೆ ತನ್ನ ನಿಲುವಿನ್ನು ಸ್ಪಷ್ಟವಾಗಿ ಹೇಳದ ಸುರೇಶ್ ಗೋಪಿ ಇದೊಂದು ಸುಳ್ಳು ಸುದ್ದಿ ಎಂದು ಎಕ್ಸ್‌ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ, ಅವರ ಆಪ್ತವಲಯದಲ್ಲಿ ಅವರು ಸಚಿವ ಸ್ಥಾನ ತ್ಯಜಿಸ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಕುವೈಟ್: ತುಳುನಾಡಿನ ಶ್ರೀಮಂತ ಸಂಸ್ಕೃತಿ ಆಚಾರ ವಿಚಾರವನ್ನು ಹೊರದೇಶದಲ್ಲಿ ಪಸರಿಸುತ್ತಿರುವ, ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರುವಾಸಿಯಾದ ಸಂಘ ತುಳುಕೂಟ ಕುವೈಟ್ ಗೆ ಬೆಳ್ಳಿಹಬ್ಬದ ಸಂಭ್ರಮ. ಈ ಹಿನ್ನೆಲೆ ತುಳುನಾಡಿನ ಶ್ರೀಮಂತ ಸಂಸ್ಕೃತಿ ಆಚಾರ ವಿಚಾರವನ್ನು ಹೊರದೇಶದಲ್ಲಿ ಪಸರಿಸುತ್ತಿರುವ ತುಳುಕೂಟ ಕುವೈಟ್ ನ ತುಳು ಪರ್ಬ ಕಾರ್ಯಕ್ರಮ ಅ.25ರಂದು ಕುವೈಟ್ ಹವಾಲಿಯ ಅಮೆರಿಕನ್ ಇಂಟರ್ ನ್ಯಾಷನಲ್ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ನಡೆಯಿತು.
ಬರೋಬ್ಬರಿ 25 ವರ್ಷಗಳಿಂದ ಅರಬ್ಬೀಸ್ಥಾನದಲ್ಲಿ ತುಳುನಾಡಿನ ಕಂಪನ್ನು ಪಸರಿಸುತ್ತಿರುವ ತುಳು ಕೂಟ ಕುವೈಟ್ ನ ಯಶಸ್ವೀ ಕಾರ್ಯಕ್ರಮ ತುಳುಪರ್ಬವನ್ನು ಸಂಘದ ಪ್ರಥಮ ಅಧ್ಯಕ್ಷ ಸುಧಾಕರ್ ಶೆಟ್ಟಿ ಮತ್ತು ಎಲ್ಲಾ ನಿಕಟಪೂರ್ವ ಅಧ್ಯಕ್ಷರುಗಳು ಹಾಗೂ ಪ್ರಸಕ್ತ ಅಧ್ಯಕ್ಷರಾದ ನಿಟ್ಟೆ ಅಬ್ದುಲ್ ರಜಾಕ್ ಸೇರಿ ಸಂಘದ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇನ್ನು ದೀಪ ಬೆಳಗಿಸಿ ಮಾತನಾಡಿದ ತುಳುಕೂಟ ಕುವೈಟ್ ಅಧ್ಯಕ್ಷರಾದ ನಿಟ್ಟೆ ಅಬ್ದುಲ್ ರಜಾಕ್ ನಮ್ಮ ಸಂಘ 4,000ನೋಂದಾಯಿತ ಸದಸ್ಯ ರನ್ನೊಳಗೊಂಡಿದ್ದು, ಸಾವಿರ ಸಾವಿರ ತುಳುವರ ಕೂಡುಕುಟುಂಬವಾಗಿದ್ದು, ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ, ಈ ನಿಟ್ಟಿನಲ್ಲಿ ನಮ್ಮ ಸಂಘ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯು ಸಾಮಾಜಿಕ ಸೇವಾ ಚಟುವಟಿಕೆ, ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ನಿರಂತರವಾಗಿಮಾಡಿಕೊಂಡು ಬಂದಿದೆ. ಪ್ರಾಜೆಕ್ಟ್ ಎಜುಕೇಶನ್ಯೋಜನೆಯಡಿ ತುಳುನಾಡಿನ ಹಲವಾರು ಶಿಕ್ಷಣ ಸಂಸ್ಥೆ ಗಳಿಗೆ ಹಣಕಾಸು ನೆರವು ಒದಗಿಸಿದೆ. ಈ ವರ್ಷ ಎಸೆಸ್ಸೆ ಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 17 ಸರ್ಕಾರಿ ಶಾಲೆಗಳ 33 ವಿದ್ಯಾ ರ್ಥಿಗಳಿಗೆ ವಿದ್ಯಾ ರ್ಥಿವೇತನ ನೀಡಲಾಗಿದೆ. ಹಲವು ಶಾಲೆಗಳ ವಿದ್ಯಾ ರ್ಥಿಗಳಿಗೆ ಪುಸ್ತಕ, ಸಮವಸ್ತ್ರ ನೀಡಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ , ಶಾಲೆಗಳಿಗೆ ಶೌಚಗೃಹಗಳ ನಿರ್ಮಾಣ, ಕಂಪ್ಯೂ ಟರ್, ಪೀಠೋಪಕರಣ ಕೊಡುಗೆ ನೀಡಲಾಗಿದೆ. ಆಶ್ರಯ ಯೋಜನೆಯಡಿ ಬಡಕುಟುಂಬಗಳಿಗೆ 3 ಮನೆ ನಿರ್ಮಿಸಿ ಕೊಡಲಾಗಿದ್ದು ಮತ್ತೊಂದು ಮನೆ ನಿರ್ಮಾಣ ಯೋಜನೆ ಪ್ರ ಗತಿಯಲ್ಲಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭ ಮಾತೃ ಭಾಷೆ ತುಳುವಿಗೆ ಅಧಿಕೃತ ಸ‍್ಥಾನಮಾನ ನೀಡುವ ಕೆಲಸ ಆದಷ್ಟು ಬೇಗ ಆಗಲಿ ಎಂದರು.
ಈ ಬಾರಿಯ ತುಳು ಪರ್ಬದಲ್ಲಿ ಹಾಸ್ಯ–ನಾಟ್ಯ-ಸಾಂಸ್ಕೃತಿಕ ವೈಭವದ ಸಂಗಮವಾಗಿದ್ದು ಸಂಘದ ಸದಸ್ಯರು, ಕುವೈಟ್ ನ ತುಳುವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಮತ್ತು ಜೊತೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಖ್ಯಾತ ರಂಗಭೂಮಿ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ತಂಡ ‘ನಮಸ್ಕಾ ರ ಮೇಸ್ಟ್ರೆ ’ ಸೂಪರ್ ಹಿಟ್ ತುಳು ನಾಟಕ ಪ್ರದರ್ಶನಗೊಂಡು ವೀಕ್ಷಕರನ್ನು ನಗೆಗೆಡಲಿನಲ್ಲಿ ತೇಲುವಂತೆ ಮಾಡಿತು.
ಈ ಸಂಧರ್ಭ ತುಳುಕೂಟ ಕುವೈಟ್ನಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ತುಳು ಜಾನಪದ ವಿದ್ವಾಂಸರಾದ ಗಣೇಶ‍್ ಅಮೀನ್ ಸಂಕಮಾರ್, ಸಮಾಜಸೇವಕ ಆಪತ್ಬಾಂದವ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಇದೇ ಸಂಧರ್ಭ ಈಶ್ವರ್ ಮಲ್ಪೆ ಅವರ ನಿಸ್ವಾರ್ಥ ಸೇವೆಗೆ 1 ಲಕ್ಷ ರೂ.ಗಳನ್ನು ನೀಡಿ ಅವರ ಸಮಾಜ ಸೇವಾ ಕಾರ್ಯಕ್ಕೆ ಪ್ರೋತ್ಸಾಹಿಸಲಾಯಿತು.
ವರ್ಷಂಪ್ರತಿ ತುಳು ಪರ್ಬ ಅನ್ನುವ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಳುಕೂಟ ಕುವೈಟ್ ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿ ಈ ಬಾರಿಯೂ ಸರ್ವ ಧರ್ಮದ ಬಂಧುಗಳನ್ನ ಒಟ್ಟು ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿದ್ದು ಸಾವಿರಾರು ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರ ಮರಚ್ಚುಗೆ ಪ್ರಶಂಸೆಗೆ ಪಾತ್ರವಾಯಿತು.
ಮಂಗಳೂರು/ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಶುಕ್ರವಾರ(ನ.15) ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ದಿಯೋಗರ್‌ಗೆ ತೆರಳಿದ್ದರು.
ಚುನಾವಣಾ ಭಾಷಣವನ್ನು ಮುಗಿಸಿ ದಿಯೋಗರ್ ಏರ್‌ಪೋರ್ಟ್‌ಗೆ ಹೋಗಿ ವಿಮಾನವೇರಿದ್ದರು. ಈ ವೇಳೆ ಅವರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿಯಿದ್ದ ವಿಮಾನ ದಿಯೋಗರ್ ಏರ್‌ಪೋರ್ಟ್‌ನಲ್ಲಿಯೇ ಇದ್ದು, ಪ್ರಧಾನಿ ಮೋದಿ ನವದೆಹಲಿಗೆ ತೆರಳುವುದು ಕೆಲಕಾಲ ತಡವಾಗಲಿದೆ ಎಂದು ವರದಿಯಾಗಿದೆ.
ದಿಯೋಗರ್ ಏರ್‌ಪೋರ್ಟ್‌ನಲ್ಲಿಯೇ ವಿಮಾನದಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಅವರು ದೆಹಲಿಗೆ ತೆರಳುವುದು ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಬುಡಕಟ್ಟು ವೀರ ಬಿರ್ಸಾ ಮುಂಡಾ ಅವರನ್ನು ಗೌರವಿಸುವ ಜಂಜಾಟಿಯಾ ಗೌರವ್ ದಿವಸ್ ಆಚರಣೆಯ ಅಂಗವಾಗಿ ಜಾರ್ಖಂಡ್‌ನಲ್ಲಿ ಎರಡು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.
ಸ*ತ್ತ ಬಳಿಕ ದೇಹ ಏನಾಗುತ್ತದೆ? ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ? ದೇಹ ಹಾಗೆಯೇ ಬಿಟ್ಟರೆ ಕೊನೆಗೆ ಏನಾಗಬಹುದು? ಮೈ ಝುಂ ಎನ್ನುವ ಮಾಹಿತಿಯನ್ನು ನರ್ಸ್ ಒಬ್ಬರು ನೀಡಿದ್ದು, ಅದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.
‘ಸಾ*ವು’ ಎನ್ನುವುದು ಒಂದು ರೀತಿಯ ಭಯಾನಕ ವಾತಾವರಣವನ್ನು ಸೃಷ್ಠಿಸುತ್ತದೆ. ಎಷ್ಟೇ ವಯಸ್ಸಾಗಿರಲಿ ಸಾ*ವು ಎಂದಾಕ್ಷಣ ಅರೆಕ್ಷಣ ಬೆಚ್ಚಿಬೀಳಬಹುದು. ಆದರೆ ಹುಟ್ಟಿದ ಮೇಲೆ ಸಾ*ಯಲೇಬೇಕು ಎನ್ನುವುದು ಅಷ್ಟೇ ದಿಟ. ಸ*ತ್ತ ಬಳಿಕ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಆದರೆ ಅದನ್ನು ಅನುಭವಿಸುವುದಕ್ಕಂತೂ ಸಾಧ್ಯವಿಲ್ಲ. ಸ*ತ್ತ ಮೇಲೆ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಳ್ಳಲಿಕ್ಕಷ್ಟೇ ಸಾಧ್ಯ. ಆದರೆ ಇದೀಗ ನರ್ಸ್ ಒಬ್ಬರು ಸತ್ತ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಹಂತ ಹಂತವಾಗಿ ವಿವರಿಸಿದ್ದಾರೆ.
ಸ*ತ್ತ ಮೇಲೆ ದೇಹ ಏನಾಗುವುದು ?
ಅಮೆರಿಕದ ಹಿರಿಯ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಸಾವಿನ ನಂತರ ಮಾನವ ದೇಹದಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ‘ಸಾ*ವಿನ ನಂತರ ದೇಹವು ವಿಶ್ರಾಂತ ಸ್ಥಿತಿಯಲ್ಲಿರುತ್ತದೆಯಾದರೂ, ಸತ್ತ* ತಕ್ಷಣ ದೇಹದಿಂದ ದ್ರವಗಳು ಹೊರಬರುತ್ತವೆ. ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ*ತ್ತ ಬಳಿಕ ದೇಹದ ಎಲ್ಲಾ ಭಾಗಗಳಿಂದಲೂ ನೀರು ಬರುತ್ತವೆ. ಕೆಲವೊಮ್ಮೆ ಕಣ್ಣು, ಮೂಗು, ಕಿವಿಗಳಿಂದಲೂ ನೀರು ಬರುತ್ತವೆ. ದೇಹ ಸಂಪೂರ್ಣ ಶಾಂತವಾಗಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ಉಳಿದುಕೊಂಡಿರುವ ಮೂತ್ರ ಮತ್ತು ಮಲ ಕೂಡ ಕೆಲವೊಮ್ಮೆ ಹೊರಕ್ಕೆ ಬರುತ್ತದೆ. ಇದನ್ನು ನೋಡಿ ಕುಟುಂಬಸ್ಥರು ಭಯ ಪಡುವ ಅಗತ್ಯವಿಲ್ಲ’ ಎಂದಿದ್ದಾರೆ.
ಸಾ*ವು ಬಹುಶಃ ಬದುಕಿಗಿಂತ ನಮ್ಮನ್ನು ಹೆಚ್ಚು ಕಾಡುವುದು. ಸಾ*ವು ಎಂದರೆ ನೋವು. ಸಾ*ವು ಎಂದರೆ ಅಂತ್ಯ. ಸ*ತ್ತಾಗ ದೇಹ ಕೊಳೆಯುತ್ತವೆ ಮತ್ತು ಕ್ಯಾರಿಯನ್ ಕೀಟಗಳಿಂದ ವಸಾಹತು ಮಾಡಬಹುದು. ಮೃ*ತ ದೇಹದ ವಾಸನೆಯನ್ನು ಸಹಿಸಲೂ ಅಸಾಧ್ಯ ಆದ್ದರಿಂದ ಸ*ತ್ತ 24 ಗಂಟೆಗಳ ಒಳಗಾಗಿ ಅಂ*ತ್ಯ ಸಂಸ್ಕಾರವನ್ನು ಮಾಡುವುದು ಸೂಕ್ತ.
Pingback: ಸಚಿವ ಸ್ಥಾನ ತ್ಯಜಿಸುವ ಬಗ್ಗೆ ಸುರೇಶ್ ಗೋಪಿ ಹೇಳಿದ್ದೇನು..? - NAMMAKUDLA NEWS - ನಮ್ಮಕುಡ್ಲ ನ್ಯೂಸ್